ಪ್ರಗತಿ ವಾಹಿನಿ ಸುದ್ದಿ, ಬೆಳಗಾವಿ:
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪಥ ಸಂಚಲನ ಹಾಗೂ ಸಾರ್ವಜನಿಕ ಸಮಾರಂಭ ನ. 6 ರಂದು ಬೆಳಗಾವಿಯಲ್ಲಿ ನಡೆಯಲಿದೆ.
ಮಧ್ಯಾಹ್ನ 3. 30 ಕ್ಕೆ ಸರ್ದಾರ್ ಮೈದಾನದಿಂದ ಪಥ ಸಂಚಲನ ನಡೆಯಲಿದ್ದು, ಸಂಜೆ 5.45 ಕ್ಕೆ ಲಿಂಗರಾಜ ಕಾಲೇಜು ಆವರಣದಲ್ಲಿ ಸಾರ್ವಜನಿಕ ಸಮಾರಂಭ ಹಮ್ಮಿಕೊಳ್ಳಲಾಗಿದೆ.
ಸಾರ್ವಜನಿಕ ಸಮಾರಂಭದ ಮುಖ್ಯ ಅತಿಥಿಯಾಗಿ ಬೆಳಗಾವಿಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ, ಆರ್ ಎಸ್ ಎಸ್ ನ ಜೇಷ್ಠ ಪ್ರಚಾರಕ ಸು. ರಾಮಣ್ಣ ಪಾಲ್ಗೊಳ್ಳುವರು.
ಪಥ ಸಂಚಲನದಲ್ಲಿ ಭಾಗವಹಿಸುವವರು ದಂಡ ಸಹಿತ ಪೂರ್ಣ ಗಣವೇಶದಲ್ಲಿ ಸರ್ದಾರ್ ಮೈದಾನದಲ್ಲಿ ಉಪಸ್ಥಿತರಿರಬೇಕು ಎಂದು ಆರ್ ಎಸ್ ಎಸ್ ನ ನಗರ ಸಂಘ ಚಾಲಕ ಬಾಳಣ್ಣ ಕಗ್ಗಣಗಿ ತಿಳಿಸಿದ್ದಾರೆ.
ರಮೇಶ್ ಜಾರಕಿಹೊಳಿಗೆ JDSಗೆ ಆಹ್ವಾನಿಸಿದ ಸಿ.ಎಂ.ಇಬ್ರಾಹಿಂ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ