ಪ್ರಗತಿವಾಹಿನಿ ಸುದ್ದಿ; ಮೈಸೂರು: ಮುಗ್ದ ಮಹಿಳೆಯರನ್ನು ಯಾಮಾರಿಸುತ್ತಿದ್ದ ಖತರ್ನಾಕ್ ವಂಚಕ ಪೊಲೀಸರ ಅತಿಥಿ ಆಗಿದ್ದಾನೆ. ಚಿನ್ನಾಭರಣ ಲೂಟಿ ಮಾಡಲು ಒಂಟಿ ಮಹಿಳೆಯರು, ವೃದ್ದೆಯರನ್ನು ಟಾರ್ಗೆಟ್ ಮಾಡುತ್ತಿದ್ದ ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ತಮ್ಮ ಡಹಳ್ಳಿ ಗ್ರಾಮದ ಸಂಪತ್ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ವೃದ್ದೆಯರಿಗೆ ಪಿಂಚಣಿ ಕೊಡಿಸುವ ನೆಪದಲ್ಲಿ ಕತ್ತಿನಲ್ಲಿದ್ದ ಚೈನ್ ಸರ ಎಗರಿಸುತ್ತಿದ್ದ ಒಂಟಿ ಮಹಿಳೆಯರಿಗೆ ಚಾಕು ತೋರಿಸಿ ಮಾಗಲ್ಯ ಸರ ಚಿನ್ನ ದರೋಡೆ ಮಾಡುತ್ತಿದ್ದ ಈತನ ವಿರುದ್ಧ ಹಲವು ಜಿಲ್ಲೆಗಳಲ್ಲಿ ದರೋಡೆ ಪ್ರಕರಣ ದಾಖಲು ಮಾಡಲಾಗಿದ್ದು ಮದ್ದೂರು ತಾಲ್ಲೂಕಿನ ಚಾಮನಹಳ್ಳಿ ಗ್ರಾಮದ ಗೌರಮ್ಮ ಕುದುರು ಗುಂಡಿ ಸುವರ್ ಅವರ ಚಿನ್ನದ ಸರ ಕದಿದ್ದು ಮದ್ದೂರು ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಡಿವೈಎಸ್ಪಿ ನವೀನ್ ಕುಮಾರ್ ಅವರ ನೇತೃತ್ವದಲ್ಲಿ ತಂಡ ರಚನೆ ಮಾಡಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಸಂಪತ್ ನಿಂದ 3.50 ಲಕ್ಷ ಮೌಲ್ಯದ 71 ಗ್ರಾಮ್ ಸರ ವಶಪಡಿಸಿಕೊಳ್ಳಲಾಗಿದೆ.
ಪತ್ರಿಕಾ ರಂಗದಲ್ಲೂ ವಕ್ಕರಿಸಿದ ಭ್ರಷ್ಟಾಚಾರ
https://pragati.taskdun.com/latest/journalismcorruptionh-r-shreesha/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ