ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಹಿಂದೂ ಪದದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ವಿರುದ್ಧ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದ್ದು, ಆದಾಗ್ಯೂ ಪಟ್ಟು ಸದಿಲಿಸದ ಸತೀಶ್ ಜಾರಕಿಹೊಳಿ ತನ್ನ ಹೇಳಿಕೆಗೆ ತಾನು ಈಗಲೂ ಬದ್ಧ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಸತೀಶ್ ಜಾರಕಿಹೊಳಿ, ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ. ನಾನು ವಿವಾದ ಸೃಷ್ಟಿಯಾಗಲಿ ಎಂಬ ಕಾರಣಕ್ಕೆ ಹೇಳಿಕೆ ನೀಡಿಲ್ಲ. ಹಿಂದೂ ಪದದ ಅರ್ಥದ ಬಗ್ಗೆ ಚರ್ಚೆಯಾಗಬೇಕು ಎಂಬ ಕಾರಣಕ್ಕೆ ಹೇಳಿದ್ದೇನೆ. ತಿಳುವಳಿಕೆ ಮೂಡಲಿ ಎಂದು ಹೇಳಿದ್ದೆನೆ. ಪರ್ಷಿಯನ್ ಭಾಷೆಯಲ್ಲಿ ಹೀಗಿದೆ ಎಂದು ಹೇಳಿದ್ದೇನೆ. ನನ್ನ ಹೇಳಿಕೆಯಲ್ಲಿ ತಪ್ಪಿಲ್ಲ. ವಿಕಿಪಿಡಿಯಾದಲ್ಲಿ ಏನಿದೆ ಅದನ್ನು ನಾನು ಹೇಳಿದ್ದೇನೆ ಅಷ್ಟೇ ಎಂದು ತಿಳಿಸಿದ್ದಾರೆ.
ಪರ್ಷಿಯನ್ ಭಾಷೆಯಲ್ಲಿ ಹಿಂದೂ ಪದ ಅಶ್ಲೀಲ ಅಂತ ಇದೆ ಎಂದಿದ್ದೇನೆ ಹೊರತು ಹಿಂದೂ ಧರ್ಮ ಅಶ್ಲೀಲ ಎಂದು ಹೇಳಿಲ್ಲ. ಇಲ್ಲಿ ಅನಗತ್ಯವಾಗಿ ವಿವಾದ ಮಾಡಲಾಗುತ್ತಿದೆ. ಇನ್ನು ನನ್ನ ಹೇಳಿಕೆಗೂ ಕಾಂಗ್ರೆಸ್ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ನಾನು ಇದನ್ನು ಪಕ್ಷದ ವೇದಿಕೆಅಲ್ಲಿ ಮಾತನಾಡಿಲ್ಲ. ಬೇರೆ ವೇದಿಕೆಯಲ್ಲಿ ಮಾತನಾಡಿದ್ದೇನೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಅಪಾರ್ಟ್ ಮೆಂಟ್ ನ 14ನೇ ಮಹಡಿಯಿಂದ ಜಿಗಿದು SSLC ವಿದ್ಯಾರ್ಥಿ ಆತ್ಮಹತ್ಯೆ
https://pragati.taskdun.com/latest/sslc-studentsuicidebangalore/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ