Latest

ಅಪಾರ್ಟ್ ಮೆಂಟ್ ನ 14ನೇ ಮಹಡಿಯಿಂದ ಜಿಗಿದು SSLC ವಿದ್ಯಾರ್ಥಿ ಆತ್ಮಹತ್ಯೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಎಸ್ ಎಸ್ ಎಲ್ ಸಿ ವಿದ್ಯಾರ್ಥಿಯೊಬ್ಬ ನೋಡ ನೋಡುತ್ತಿದ್ದಂತೆ ಅಪಾರ್ಟ್ ಮೆಂಟ್ ನ 14ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಹೆಗಡೆ ನಗರದಲ್ಲಿ ನಡೆದಿದೆ.

ಮೋಹಿನ್ ಖಾನ್ ಆತ್ಮಹತ್ಯೆಗೆ ಶರಣಾದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿ. ಪರೀಕ್ಷೆಯಲ್ಲಿ ಕಾಫಿ ಹೊಡೆದ ಎಂಬ ಕಾರಣಕ್ಕೆ ಶಾಲೆಯವರು ವಿದ್ಯಾರ್ಥಿಯನ್ನು ಹೊರಹಾಕಿದ್ದಾರೆ. ಇದರಿಂದ ನೊಂದ ವಿದ್ಯಾರ್ಥಿ ಸಂಪಿಗೆಹಳ್ಳಿ ವ್ಯಾಪ್ತಿಅ ಸಿಗ್ನೇಚರ್ ಅಪಾರ್ಟ್ ಮೆಂಟ್ ಗೆ ಬಂದಿದ್ದಾನೆ. 14ನೇ ಮಹಡಿಗೆ ಹೋಗಿ ಟೆರೇಸ್ ಮೇಲಿಂದ ಕೆಳಗೆ ಜಿಗಿದಿದ್ದಾನೆ. ವಿದ್ಯಾರ್ಥಿ ಕೆಳಗೆ ಬೀಳುತ್ತಿದ್ದಂತೆ ವ್ಯಕ್ತಿಯೊಬ್ಬರು ಆತನ ರಕ್ಷಣೆಗೆ ಮುಂದಾಗಿದ್ದಾರೆ. ಆದರೂ ವಿದ್ಯಾರ್ಥಿಯನ್ನು ಕಾಪಾದಲು ಸಾಧ್ಯವಾಗಿಲ್ಲ. ಅಪಾರ್ಟ್ ಮೆಂಟ್ ನಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Home add -Advt

ಈ ದೃಶ್ಯ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದೆ. ಸಿಗ್ನೇಚರ್ ಅಪಾರ್ಟ್ ಮೆಂಟ್ ಗೆ ಅಪರಿಚಿತರ ಪ್ರವೇಶಕ್ಕೆ ಅವಕಾಶವಿಲ್ಲದಿದ್ದರೂ ವಿದ್ಯಾರ್ಥಿ ಆ ಅಪಾರ್ ಮೆಂಟ್ ಗೆ ಬಂದಿದ್ದು ಹೇಗೆ? ಆತನನ್ನು ಒಳಗೆ ಬಿಟ್ಟವರು ಯಾರು? ಎಂಬ ಪ್ರಶ್ನೆ ಎದ್ದಿದೆ.

ಅಲ್ಲದೇ ಪೋಷಕರು ಶಾಲೆಯ ವಿರುದ್ಧ ದೂರು ದಾಖಲಿಸಿದ್ದು, ಸಂಪಿಗೆಹಳ್ಲಿ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ. ತಮಗೆ ಮಾಹಿತಿ ನೀಡದೇ ಮಗನನ್ನು ಏಕಾಏಕಿ ಶಾಲೆಯಿಂದ ಹೊರ ಹಾಕಿದ್ದು ತಪ್ಪು ಕಾಪಿ ಹೊಡೆದಿದ್ದರೆ ಪೋಷಕರಿಗೆ ವಿಷಯ ತಿಲಿಸಬೇಕಿತ್ತು. ಮಗನ ಸಾವಿಗೆ ಶಾಲೆಯ ಶಿಕ್ಷಕರೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮತದಾರರ ಪಟ್ಟಿ ಪರಿಷ್ಕರಣೆ ಜಾಗೃತಿ ಜಾಥಾ

https://pragati.taskdun.com/local/voter-list-revision-awareness-rally/

Related Articles

Back to top button