ರಾಜಕೀಯ ಪ್ರಚಾರಕ್ಕಾಗಿ ಧರ್ಮಗಳ ಅವಹೇಳನ ಅತ್ಯಂತ ಕೀಳು ಮಟ್ಟದ ವಿಚಾರ; ಸತೀಶ್ ಜಾರಕಿಹೊಳಿ ವಿರುದ್ಧ ಬೆಳಗಾವಿ ಬಿಜೆಪಿ ಕಿಡಿ
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ:
ಬೆಳಗಾವಿ
ಕೆಪಿಸಿಸಿ ಕಾರ್ಯಾಧ್ಯಕ್ಷ, ಯಮಕನಮರಡಿ ಮತಕ್ಷೇತ್ರದ ಕಾಂಗ್ರೆಸ್ ಶಾಸಕರು ಆಗಿರುವ ಸತೀಶ ಜಾರಕಿಹೊಳಿ ಇತ್ತೀಚೆಗೆ ನಿಪ್ಪಾಣಿಯ ವಿಶ್ವ ಮಾನವ ಬಂಧುತ್ವ ವೇದಿಕೆಯ ಸಮಾವೇಶದಲ್ಲಿ ಹಿಂದೂ ಧರ್ಮ ಅಶ್ಲೀಲ ಎಂದು ಹೇಳಿಕೆ ನೀಡಿರುವುದನ್ನು ಖಂಡಿಸಿ ಬುಧವಾರ ಬೆಳಗಾವಿ ಬಿಜೆಪಿ ಚೆನ್ನಮ್ಮ ವೃತ್ತದಿಂದ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ವಿಶ್ವ ಮಾನವ ಬಂಧುತ್ವ ವೇದಿಕೆಯ ಸಮಾವೇಶದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಬುದ್ಧ, ಬಸವ, ಅಂಬೇಡ್ಕರ್ ಅವರ ವಿಚಾರಧಾರೆಗಳಿಗೆ ವಿರುದ್ಧವಾದ ಹೇಳಿಕೆ ನೀಡಿದ್ದಾರೆ. ಯಾವುದೇ ಧರ್ಮದ ಬಗ್ಗೆ ಮಾತನಾಡುವಾಗ ಆತ್ಮ ವಿಮರ್ಶೆ ಮಾಡಿಕೊಳ್ಳುವುದು ಅತ್ಯಗತ್ಯವಾಗಿದೆ. ರಾಜಕೀಯ ಪ್ರಚಾರಕ್ಕಾಗಿ ಧರ್ಮಗಳ ಅವಹೇಳನ ಮಾಡಿರುವುದು ಅತ್ಯಂತ ಕೀಳು ಮಟ್ಟದ ವಿಚಾರವಾಗಿದೆ ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಸುದ್ದಿಗಾರರೊಂದಿಗೆ ಮಾತನಾಡಿ, ಹಿಂದೂ ಎಂಬುವುದು ಅಶ್ಲೀಲ ಎಂಬ ಹೇಳಿಕೆ ನೀಡಿ ಶಾಸಕ ಸತೀಶ ಜಾರಕಿಹೊಳಿ ದಕ್ಕೆ ತಂದಿದ್ದಾರೆ. ಇವರ ಹೇಳಿಕೆ ಕುರಿತು ಕಾಂಗ್ರೆಸ್ ನಲ್ಲಿ ದ್ವಂದ್ವ ನಿಲುವು ಹೊಂದಿದೆ. ಈ ಹೇಳಿಕೆ ಅವರ ವೈಯಕ್ತಿ ಹೇಳಿಕೆ ಎನ್ನುವ ಕಾಂಗ್ರೆಸ್ ನಡೆ ಸರಿಯಲ್ಲ. ಕಾಂಗ್ರೆಸ್ ಗೆ ದಮ್ಮು, ತಾಕತ್ತು ಇದ್ದರೆ ಸತೀಶ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಿ ಎಂದು ಕಾಂಗ್ರೆಸ್ ನಾಯಕರಿಗೆ ಸವಾಲ್ ಹಾಕಿದರು.
ಹಿಂದೂ ಅಶ್ಲೀಲ ಎಂದು ಹೇಳಿಕೆ ನೀಡಿ ದೇಶದ ಜನರಿಗೆ ಏನು ಸಂದೇಶ ಕೊಡಲು ಹೊರಟ್ಟಿದ್ದಾರೆ. ಇದು ಇಡೀ ದೇಶದ ಜನರ ಭಾವನೆಗೆ ಧಕ್ಕೆಯನ್ನು ಉಂಟು ಮಾಡಿದ್ದಾರೆ. ಇದೇ ಹೇಳಿಕೆಯನ್ನು ಅವರು ಅಲ್ಪಸಂಖ್ಯಾತರ ವಿರುದ್ಧ ಹೇಳಿಕೆ ನೀಡಿದ್ದರೇ ದೇಶದಲ್ಲಿ ಉಗ್ರ ಹೋರಾಟ ನಡೆಸುತ್ತಿದ್ದರು. ಆದರೆ ಸತೀಶ ಜಾರಕಿಹೊಳಿ ಅವರು ಅದನ್ನು ಮತ್ತೇ ಸಮರ್ಥಿಸಿಕೊಳ್ಳುತ್ತಿರುವುದು ದುರ್ದೈವದ ಸಂಗತಿ ಎಂದರು.
ಶಾಸಕ ಅಭಯ ಪಾಟೀಲ ಮಾತನಾಡಿ, ಜನರ ಭಾವನೆಯನ್ನು ಪ್ರತಿಬಿಂಬಿಸುತ್ತಿದೆ. ಹಿಂದೂ ಧರ್ಮ ಅಶ್ಲೀಲ ಎನ್ನುವುದು, ಛತ್ರಪತಿ ಶಿವಾಜಿ ಮಹಾರಾಜ, ಸಂಭಾಜಿ ಮಹಾರಾಜ ಸೇರಿದಂತೆ ಹಿಂದೂ ಧರ್ಮದ ಬಗ್ಗೆ ಕಾಂಗ್ರೆಸ್ ಮಾನಸಿಕತೆ ಇರುವುದು ಅಲ್ಲದೆ, ಶಾಸಕ ಸತೀಶ ಜಾರಕಿಹೊಳಿ ಅವರು ಮಾಡಿರುವ ವಿಧಾನ ಇಡೀ ಜಗತ್ತಿನಲ್ಲಿ ಹಿಂದೂಗಳ ಭಾವನೆಗೆ ಆಘಾತವಾಗಿದೆ. ಒಟ್ಟಾರೆ ಅವರು ಒಂದು ಸಮಾಜವನ್ನು ಖುಷಿ ಪಡಿಸುವ ನಿಟ್ಟಿನಲ್ಲಿ ಹಿಂದೂ ಸಮಾಜವನ್ನು ಅವಮಾನ ಮಾಡುವ ರೀತಿಯಲ್ಲಿ ಮಾತನಾಡಿದ್ದಾರೆ. ಅವರ ಮೇಲೆ ಕಾಂಗ್ರೆಸ್ ಯಾವ ರೀತಿ ಕ್ರಮ ಕೈಗೊಳ್ಳುತ್ತದೆ ಎನ್ನುವುದನ್ನು ಕಾದು ನೋಡಬೇಕು ಎಂದರು.
ಶಾಸಕರಾದ ಅನಿಲ್ ಬೆನಕೆ, ಮಹಾಂತೇಶ ದೊಡಗೌಡರ, ಮಾಜಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ಬೆಳಗಾವಿ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ, ಬಿಜೆಪಿ ನಾಯಕರಾದ, ಮಾರುತಿ ಅಷ್ಟಗಿ, ಉಜ್ವಲಾ ಬಡವನಾಚೆ, ಎಂ.ಬಿ.ಜೀರಲಿ, ಲೀನಾ ಟೋಪಣ್ಣವರ, ಸದಾನಂದ ಗುಂಟೇಪ್ಪನವರ, ಮಹಾಂತ ವಕ್ಕುಂದ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಕೆ.ಪಿ.ಸಿ.ಸಿ ಕಾರ್ಯಾಧ್ಯಕ್ಷರಾದ ಸತೀಶ ಜಾರಕಿಹೊಳಿಯವರು ನಿಪ್ಪಾಣಿಯಲ್ಲಿ ವಿಶ್ವ ಮಾನವ ಭಂದುತ್ವ ವೇದಿಕೆಯ ಸಮಾರಂಭದಲ್ಲಿ ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಗಂಭೀರವಾಗಿ ಪರಿಗಣಿಸಿ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದು ಬೆಳಗಾವಿ ಬಿಜೆಪಿ ಜಿಲ್ಲಾ ಘಟಕ ತಿಳಿಸಿದೆ .
ಬುಧವಾರ ಬೆಳಗಾವಿಯಲ್ಲಿ ಪ್ರತಿಭಟನೆ ನಡಸಿದ ಬಿಜೆಪಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತು.
ಬುದ್ಧ, ಬಸವ ಅಂಬೇಡ್ಕರ ಹೆಸರಿನಲ್ಲಿ ಸನಾತನ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ಬುದ್ಧ, ಬಸವ, ಅಂಬೇಡ್ಕರ ರವರ ವಿಚಾರ ಧಾರೆಗಳಿಗೆ ವಿರುದ್ಧವಾಗಿದ್ದು, ಯಾವುದೇ ಧರ್ಮದ ಬಗ್ಗೆ ಮಾತನಾಡುವ ಪೂರ್ವದಲ್ಲಿ ಆತ್ಮವಿಮರ್ಶೆ ಮಾಡಿಕೊಳ್ಳುವ ಅವಶ್ಯಕತೆ ಇರುತ್ತದೆ. ರಾಜಕೀಯ ಪ್ರಚಾರಕ್ಕಾಗಿ ಧರ್ಮಗಳ ಅವಹೇಳನ ಮಾಡಿರುವುದು ಅತ್ಯಂತ ಕೀಳು ಮಟ್ಟದ ವಿಚಾರ.
ಸದರಿ ಹೇಳಿಕೆಯನ್ನು ಸಮರ್ಥಿಸಿಕೊಳ್ಳುವುದು ಸಹಿತ ಅತ್ಯಂತ ಖಂಡನೀಯ ವಿಷಯವಾಗಿದೆ. ಆದ್ದರಿಂದ ಸಂವಿಧಾನ ಬದ್ಧವಾಗಿ ದೊರೆತ ಧಾರ್ಮಿಕ ಹಕ್ಕಿನ ಹೆಸರಲ್ಲಿ ಪುರಾತನ ಧರ್ಮಗಳ ಕುರಿತು ಅಸಂಭದ್ದವಾಗಿ ಮಾತನಾಡಿರುವುದು ಅತ್ಯಂತ ಖಂಡನೀಯವೆಂದು ತೀರ್ಮಾನಿಸಿ ಸದರಿ ವಿಷಯದಲ್ಲಿ ಕೋಮು ಸಾಮರಸ್ಯ ಕಾಪಾಡಬೇಕಾದ ವ್ಯಕ್ತಿಗಳು ಸ್ವಯಂ ಪ್ರೇರಿತವಾಗಿ ಸುವ್ಯವಸ್ಥೆಯನ್ನು ಕಾಪಾಡಲು ಅವಶ್ಯಕ ಕ್ರಮಗಳನ್ನು ಉಗ್ರ ಕ್ರಮಗಳನ್ನು ಕೈಗೊಂಡು ಶಾಂತಿ ಸುವ್ಯವಸ್ಥೆಯನ್ನು ಕಾಪಾಡಲು ಕೈಗೊಳ್ಳಬೇಕೆಂದು ಬೆಳಗಾವಿ ಬಿಜೆಪಿ ವತಿಯಿಂದ ಒತ್ತಾಯಿಸುತ್ತೇವೆ.
ಈ ಬಗ್ಗೆ ಅನಿಲ ಎಸ್. ಬೆನಕೆ, ಶಾಸಕರು ಬೆಳಗಾವಿ ಉತ್ತರ ಮತ್ತು ಅಧ್ಯಕ್ಷರು, ಬಿ.ಜೆ.ಪಿ ಬೆಳಗಾವಿ ಮಹಾನಗರ ಜಿಲ್ಲೆ, ಅಭಯ ಪಾಟೀಲ, ಶಾಸಕರು ಬೆಳಗಾವಿ ದಕ್ಷಿಣ, ಈರಣ್ಣ ಕಡಾಡಿ, ರಾಜ್ಯ ಸಭೆ ಸದಸ್ಯರು, ಬೆಳಗಾವಿ
ಸಂಜಯ ಪಾಟೀಲ, ಮಾಜಿ ಶಾಸಕರು ಹಾಗೂ ಬೆಳಗಾವಿ ಗ್ರಾಮೀಣ ಜಿಲ್ಲಾ ಅಧ್ಯಕ್ಷರು
ಎಮ್. ಬಿ. ಜಿರಲಿ, ರಾಜ್ಯ ಬಿ.ಜೆ.ಪಿ ವಕ್ತಾರರು
ಮಹಾಂತೇಶ ದೊಡಗೌಡರ, ಶಾಸಕರು ಚೆನ್ನಮ್ಮ ಕಿತ್ತೂರು
ಮಹಾಂತೇಶ ಕವಟಗಿಮಠ, ಮಾಜಿ ವಿಧಾನ ಪರಿಷತ್ ಸದಸ್ಯರು ಮೊದಲಾದವರು ಭಾಗವಹಿಸಿದ್ದರು.
ಸರ್ಕಾರಿ ಕಾಲೇಜು ಮಕ್ಕಳನ್ನು ಕರೆತಂದು ಕಾರ್ಯಕ್ರಮ; ಬಿಜೆಪಿಯವರಿಗೆ ಇಂತಹ ದುರ್ಗತಿ ಬಂದಿದೆಯೇ?: ಡಿಕೆಶಿ ವಾಗ್ದಾಳಿ
https://pragati.taskdun.com/politics/d-k-shivakumarkempegowda-statuegovt-college-studentssatisha-jarakiholi/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ