Latest

ಹಿಂದೂಗಳು ಎದ್ದುನಿಂತರೆ ನಿಮ್ಮ ಹೆಸರು ಹೇಳಲು ಇರಲ್ಲ; ಸತೀಶ್ ಜಾರಕಿಹೊಳಿಗೆ ನಟ ಜಗ್ಗೇಶ್ ಎಚ್ಚರಿಕೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಹಿಂದೂ ಪದ ಅಶ್ಲೀಲ ಎಂಬ ಹೇಳಿಕೆ ನೀದಿ ವಿವಾದ ಸೃಷ್ಟಿಸಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರಿಗೆ ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್ ಖಡಕ್ ವಾರ್ನಿಂಗ್ ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಟ ಜಗ್ಗೇಶ್, ಹಿಂದೂಗಳು ಶಾಂತಿ ಪ್ರಿಯರು. ಕ್ಷಮಿಸುವ ಗುಣವನ್ನು ಹೊಂದಿದವರು ಎಂದು ಪದೇ ಪದೇ ಕೆಣಕಬೇಡಿ. ಹಿಂದೂಗಳು ಎದ್ದು ನಿಂತರೆ ಹೆಸರು ಹೇಳಲು ಇಲ್ಲದಂತೆ ಮಾಡ್ತಾರೆ ಎಚ್ಚರ ಎಂದು ಹೇಳಿದ್ದಾರೆ.

Home add -Advt

ಸತೀಶ್ ಜಾರಕಿಹೊಳಿಯದ್ದು ವಾಮಾಚಾರದ ಫ್ಯಾಮಿಲಿ. ಸ್ಮಶಾನವನ್ನು ಪ್ರೀತಿಸುತ್ತಾರೆ. ಅವರು ನಮ್ಮ ಸಂಸ್ಕೃತಿಯನ್ನು ಒಪ್ಪಲ್ಲ. ಅವರಿಗೆ ಯಾರದ್ದೋ ಉಪದೇಶ ಆಗಿರಬೇಕು. ಹಾಗಾಗಿ ಹೀಗೆ ಹೆಳುತ್ತಿದ್ದಾರೆ. ಸತೀಶ್ ಜಾರಕಿಹೊಳಿ ಮಾಟ, ಮಂತ್ರ, ಮಾಯಾಜಾಲ, ಇಂದ್ರಜಾಲ ಮಾಡುವಂತವರು. ಹಾಗಾಗಿ ಅವರಿಗೆ ನಮ್ಮ ಸೂಕ್ಷ್ಮತೆ ಅರ್ಥವಾಗಲ್ಲ, ನಮ್ಮ ಸೂಕ್ಷ್ಮತೆ ಒಪ್ಪಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಇಂತಹ ವಿಚಾರ ಬಂದಾಗ ಮುಸ್ಲಿಂ ಧರ್ಮದವರನ್ನು ನೋಡಿ. ಯಾರಾದರೂ ಅವರ ಧರ್ಮದ ವಿರುದ್ಧವಾಗಿ ಮಾತನಾಡಿದರೆ ತಕ್ಷಣದಲ್ಲೇ ಅದರ ಪರಿಣಾಮ ಎಷ್ಟು ವಿಕೃತವಾಗಿರುತ್ತೆ ಎಂಬುದನ್ನು ತೋರಿಸುತ್ತಾರೆ. ಆದರೆ ಹಿಂದೂಗಳು ಕ್ಷಮಾಗುಣವುಲ್ಳವರು. ಕ್ಷಮಿಸುತ್ತಾರೆ. ಶಾಂತಿ ಪ್ರಿಯರು. ಕ್ಷಮಿಸಿದ್ದಾರೆ ಎಂದು ಪದೇ ಪದೇ ಮಾತನಾಡಲು ಹೋಗಬೇಡಿ. ಹಿಂದೂಗಳು ಎದ್ದು ನಿಂತರೆ ಹೇಳಲು ಹೆಸರು ಇಲ್ಲದಂತೆ ಮಾಡ್ತಾರೆ ಎಂದು ಗುಡುಗಿದರು.

ನನ್ನ ಹೇಳಿಕೆಗೆ ನಾನು ಈಗಲೂ ಬದ್ಧ; ಪಟ್ಟು ಬಿಡದ ಶಾಸಕ ಸತೀಶ್ ಜಾರಕಿಹೊಳಿ

https://pragati.taskdun.com/politics/satish-jarakiholiclarificationhindu-statment/

Related Articles

Back to top button