Latest

ಪಾನ್ ಕಾರ್ಡ್ ಅಪ್ಡೇಟ್ ನೆಪದಲ್ಲಿ 3.21 ಲಕ್ಷ ವಂಚನೆ

ಪ್ರಗತಿವಾಹಿನಿ ಸುದ್ದಿ; ಮೈಸೂರು: ವ್ಯಕ್ತಿಯೊಬ್ಬರಿಗೆ ಪಾನ್ ಕಾರ್ಡ್ ಅಪ್ಡೇಟ್ ನೆಪದಲ್ಲಿ 3.21 ಲಕ್ಷ ರೂ. ವಂಚಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಬೋಗಾದಿ ಎರಡನೇ ನಿವಾಸಿ ಡಾ.ಆರ್.ಎಲ್. ಚಿಲಕವಾಡ್ ಹಣ ಕಳೆದುಕೊಂಡವರು. ಪಾನ್ ಕಾರ್ಡ್ ಅಪ್ಡೇಟ್ ಮಾಡುವುದಾಗಿ ಲಿಂಕ್ ಕಳುಹಿಸಿ, ಅದನ್ನು ಒತ್ತಿದ ವೇಳೆ ಬ್ಯಾಂಕ್ ಖಾತೆಯಿಂದ 3.21 ಲಕ್ಷ ರೂ.ಮೋಸದಿಂದ ವರ್ಗಾಯಿಸಿಕೊಂಡಿದ್ದಾರೆ.

ಭಾನುವಾರ ಸಂಜೆ ವೇಳೆ ಕಳುಹಿಸಿದ ಲಿಂಕ್ ಒತ್ತಿದ ವೇಳೆ ಎಸ್‌ಬಿಐ ಬ್ಯಾಂಕ್ ಯೋನೋ ಆಯಪ್‌ನಲ್ಲಿ ಪಾಸ್ ವರ್ಡ್ ಹಂಚಿಕೊಂಡಿದ್ದು, ನಂತರ ಖಾತೆಯಿಂದ ಹಣ ವರ್ಗಾಯಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದು, ನಗರದ ಸೆನ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಸರ್ಕಾರಿ ಕಾಲೇಜು ಮಕ್ಕಳನ್ನು ಕರೆತಂದು ಕಾರ್ಯಕ್ರಮ; ಬಿಜೆಪಿಯವರಿಗೆ ಇಂತಹ ದುರ್ಗತಿ ಬಂದಿದೆಯೇ?: ಡಿಕೆಶಿ ವಾಗ್ದಾಳಿ

https://pragati.taskdun.com/politics/d-k-shivakumarkempegowda-statuegovt-college-studentssatisha-jarakiholi/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button