Latest

7ನೇ ವೇತನ ಆಯೋಗದ ಸಮಗ್ರ ಮಾಹಿತಿ ಇಲ್ಲಿದೆ; ಗುರುವಾರ ನೌಕರರ ಸಂಘದಿಂದ ಸಿಎಂಗೆ ಧನ್ಯವಾದ ಸಮರ್ಪಣೆ ಕಾರ್ಯಕ್ರಮ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು- 

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ವೇತನ-ಭತ್ಯೆಗಳ ಪರಿಷ್ಕರಣೆಗಾಗಿ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ್‌ರಾವ್   ಅವರನ್ನು 7ನೇ ವೇತನ ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದಾಗಿ ಇಂದು ಮುಖ್ಯಮಂತ್ರಿಗಳು ಘೋಷಣೆ ಮಾಡಿದ್ದಾರೆ.
ರಾಜ್ಯ ಸರ್ಕಾರಿ ನೌಕರರ ವೇತನ ಮತ್ತು ಭತ್ಯೆಗಳಿಗೆ ಸಂಬಂಧಿಸಿದಂತೆ ಅಧ್ಯಯನ, ವೇತನ ಭತ್ಯೆಗಳ ಪರಿಷ್ಕರಣೆ ಹಾಗೂ ಸುಧಾರಣೆಗಾಗಿ 7ನೇ ವೇತನ ಆಯೋಗವನ್ನು ರಚಿಸಿ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ್‌ರಾವ್‌   ಅಧ್ಯಕ್ಷತೆಯಲ್ಲಿ ರಚಿಸುವುದಾಗಿ ತೀರ್ಮಾನಿಸಿ ಇಂದು   ಮುಖ್ಯಮಂತ್ರಿಗಳು ದಾವಣಗೆರೆಯಲ್ಲಿ ಘೋಷಣೆ ಮಾಡಿದ್ದಾರೆ.
ನುಡಿದಂತೆ ನಡೆದು ನಿಗದಿತ ಅವಧಿಯಲ್ಲಿ ವೇತನ ಆಯೋಗ ರಚನೆ ಮಾಡಿದ  ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿರವರಿಗೆ ರಾಜ್ಯದ 6 ಲಕ್ಷ ಸರ್ಕಾರಿ ಅಧಿಕಾರಿ/ನೌಕರರರು, 3.40 ಲಕ್ಷ ನಿಗಮ ಮಂಡಳಿ, ಪ್ರಾಧಿಕಾರ ಮತ್ತು ವಿಶ್ವವಿದ್ಯಾಲಯ ಸಿಬ್ಬಂದಿಗಳು ಹಾಗೂ 4 ಲಕ್ಷ ನಿವೃತ್ತ ನೌಕರರ ಪರವಾಗಿ ಸರ್ಕಾರಿ ನೌಕರರ ಸಂಘವು ಧನ್ಯವಾದಗಳನ್ನು ಸಲ್ಲಿಸಿದೆ.
ಈ ಕಾರ್ಯದಲ್ಲಿ ಸಹಕರಿಸಿದ ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಸಂಘವು ವಂದನೆಗಳನ್ನು ಸಲ್ಲಿಸಿದೆ. ಹಾಗೂ ಸರ್ಕಾರದ ಸಚಿವರಿಗೆ ಹಾಗೂ ಸರ್ಕಾರದ ಉನ್ನತ ಅಧಿಕಾರಿಗಳಿಗೆ ಧನ್ಯವಾದ ಸಲ್ಲಿಸಿದೆ.
  ಕರ್ನಾಟಕ ರಾಜ್ಯ 7ನೇ ವೇತನ ಆಯೋಗದ ಅಧ್ಯಕ್ಷರಾಗಿ ನೇಮಕಗೊಂಡಿರುವ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿಗಳಾದ  ಸುಧಾಕರ್‌ರಾವ್  ಅವರನ್ನು ಸಂಘವು ಅಭಿನಂದಿಸಿ, ಸ್ವಾಗತಿಸಿದೆ.
ಮುಖ್ಯಮಂತ್ರಿಗಳಿಗೆ ಧನ್ಯವಾದ ಸಲ್ಲಿಸುವ ಕಾರ್ಯಕ್ರಮ :
> ಸಂಘದ ಹಕ್ಕೊತ್ತಾಯದ ನಿರೀಕ್ಷೆಯಂತೆ 7ನೇ ವೇತನ ಆಯೋಗವನ್ನು ರಚಿಸಿದ   ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿಯವರಿಗೆ ದಿನಾಂಕ: 10-11-2022 ರಂದು ಬೆಳಿಗ್ಗೆ 10.30ಕ್ಕೆ  ಮುಖ್ಯಮಂತ್ರಿಗಳ ಸರ್ಕಾರದ ಅಧಿಕೃತ ನಿವಾಸ (ತಾಜ್ ವೆಸ್ಟ್ ಎಂಡ್ ಹೋಟೆಲ್ ಪಕ್ಕ) ರೇಸ್ ಕೋರ್ಸ್ ರಸ್ತೆ, ಬೆಂಗಳೂರು ಇಲ್ಲಿ ಕೇಂದ್ರ ಸಂಘದ ಪದಾಧಿಕಾರಿಗಳು, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲೆ, ತಾಲ್ಲೂಕು, ಯೋಜನಾ ಶಾಖೆಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಬೆಂಗಳೂರು ನಗರ ರಾಜ್ಯ ಪರಿಷತ್‌ ಸದಸ್ಯರು ನಿಗಮ ಮಂಡಳಿ ಪ್ರಾಧಿಕಾರ ಹಾಗೂ ವಿವಿಧ ಇಲಾಖೆಗಳ ವೃಂದ ಸಂಘಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸಮಸ್ತ ಸರ್ಕಾರಿ ನೌಕರರು ಒಟ್ಟಾಗಿ ಧನ್ಯವಾದಗಳನ್ನು ಸಲ್ಲಿಸಲಿದ್ದಾರೆ.
ಸಂಘದ ಮನವಿ ಹಾಗೂ ಸರ್ಕಾರದ ನಿರ್ಧಾರ:
> ರಾಜ್ಯ ಸರ್ಕಾರಿ ನೌಕರರ ವೇತನ ಭತ್ಯೆಗಳ ಪರಿಷ್ಕರಣೆಗಾಗಿ 7ನೇ ವೇತನ ಆಯೋಗವನ್ನು ರಚಿಸುವಂತೆ ಸಂಘವು ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿ ಒತ್ತಾಯಿಸಿತ್ತು. ಈ ಸಂಬಂಧ ಮಾನ್ಯ ಮುಖ್ಯ ಮಂತ್ರಿಗಳು ಬಜೆಟ್ ಮೇಲಿನ ಉತ್ತರ ನೀಡುವ ಸಂದರ್ಭದಲ್ಲಿ ಹಾಗೂ ಹಲವು ಕಾರ್ಯಕ್ರಮಗಳ ವೇದಿಕೆಯಲ್ಲಿ ವೇತನ ಆಯೋಗ ರಚಿಸುವುದಾಗಿ ಘೋಷಿಸಿದ್ದರು.
ವೇತನ ಆಯೋಗದಿಂದ ನಿರೀಕ್ಷೆಗಳು:
* ಹಾಲಿ ಇರುವ ಮೂಲ ವೇತನಕ್ಕೆ ತುಟ್ಟಿಭತ್ಯೆಯನ್ನು ವಿಲೀನಗೊಳಿಸಿದ ನಂತರ ನಿಗದಿಯಾಗುವ ಮೂಲವೇತನಕ್ಕೆ ಶೇ.40% ಫಿಟ್‌ಮೆಂಟ್ ಸೌಲಭ್ಯವನ್ನು ಪಡೆಯುವುದು.
• ದಿನಾಂಕ: 01-07-2022 ರಿಂದ ಕಾಲ್ಪನಿಕವಾಗಿ ವೇತನ ಸೌಲಭ್ಯಗಳನ್ನು ಹಾಗೂ ದಿ: 01-01-2023 ರಿಂದ ಆರ್ಥಿಕ ಸೌಲಭ್ಯವನ್ನು ಪಡೆಯುವುದು.
ಪೂರ್ಣ ವಿವರಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ – 7th pay press note

ಕೊನೆಗೂ 7 ನೇ ವೇತನ ಆಯೋಗ ರಚನೆ

https://pragati.taskdun.com/politics/7th-pay-commissioncm-basavaraj-bommaisudhakar-rao/

https://pragati.taskdun.com/latest/7th-pay-commissionoctobercm-basavaraj-bommai/

https://pragati.taskdun.com/latest/cm-basavaraj-bommai7th-pay-commissioncotoberannounce/

https://pragati.taskdun.com/latest/b-s-yedyurappalattercm-basavaraj-bommai/

https://pragati.taskdun.com/latest/karnataka-government-employeests-donate-100-crore-for-punyakoti-project/

ಕರ್ನಾಟಕದ ಜನರು ಹೋಟೆಲ್ ಗಳಲ್ಲಿ ಏನು ಮಾಡಲು ಬಯಸುತ್ತಾರೆ ?

https://pragati.taskdun.com/latest/what-karnataka-people-want-to-do-in-hotels-an-article-based-on-a-survey-report/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button