ಪ್ರಗತಿವಾಹಿನಿ ಸುದ್ದಿ; ಕೊಡಗು: ವೀಸಾ ಕೊಡಿಸುವುದಾಗಿ ಹೇಳಿ ವ್ಯಕ್ತಿಯೋರ್ವ ಬರೋಬ್ಬರಿ 2 ಕೋಟಿ ರೂಪಾಯಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ವಿದೇಶಕ್ಕೆ ಓದಲು ತೆರಳು, ಉದ್ಯೋಗಕ್ಕೆ ಹೋಗಲು ವೀಸಾ ಕೊಡಿಸುವುದಾಗಿ ಹೇಳಿ ಮಧ್ಯಮ ವರ್ಗದ ಜನರನ್ನು ಸಂಪರ್ಕಿಸಿ ಅವರಿಂದ ಹಣ ಪಡೆದು ಎಸ್ಕೇಪ್ ಆಗಿದ್ದ ಶ್ರೀನಾಥ್ ಎಂಬ ಖತರ್ನಾಕ್ ವ್ಯಕ್ತಿಯನ್ನು ಕೊಡಗು ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ.
ಆರಂಭದಲ್ಲಿ ಶ್ರೀನಾಥ್, ಆಯಾ ಸಮುದಾಯದ ಮುಖಂಡರನ್ನು, ಧರ್ಮ ಗುರುಗಳನ್ನು ಸಂಪರ್ಕಿಸಿ ತಮ್ಮ ಸಮುದಾಯದ ಯುವಕರಿಗೆ ವಿದೇಶಕ್ಕೆ ತೆರಳಲು ವೀಸಾ ಕೊಡಿಸುವುದಾಗಿ ಹೇಳಿ ಇಂತಿಷ್ಟು ಲಕ್ಷ ಹಣ ಪಾವತಿಸಬೇಕು ಎಂದು ಹೇಳಿ ಲಕ್ಷ ಲಕ್ಷ ಹಣ ಪಡೆದುಕೊಳ್ಳುತ್ತಿದ್ದ. ಒನ್ನೊಂದು ಸಮುದಾಯದ 60ಕ್ಕೂ ಹೆಚ್ಚು ಜನರಿಂದ ಲಕ್ಷಾಂತರ ರೂಪಾಯಿ ಹಣ ಪಡೆದ ಆಸಾಮಿ ಬಳಿಕ ಯಾರ ಸಂಪರ್ಕಕ್ಕೂ ಸಿಗುತ್ತಿರಲಿಲ್ಲ. ವೀಸಾ ಸಿಗುತ್ತೆ ಎಂದು ಕಾದು ಕುಳಿತಿದ್ದ ಜನರಿಗೆ ಹಲವು ತಿಂಗಳು ಕಳೆದರೂ ವ್ಯಕ್ತಿ ಸುಳಿವಿಲ್ಲದಿರುವುದು, ವೀಸಾ ಸಿಗದಿರುವುದು ಗೊತ್ತಾಗಿ ತಾವು ಮೋಸ ಹೋಗಿದ್ದು ಅರಿವಾಗುತ್ತಿತ್ತು.
ಹೀಗೆ ಶ್ರೀನಾಥ್ ನಿಂದ ವಂಚನೆಗೊಳಗಾದ ಕೊಡಗಿನ ಮಡಿಕೇರಿ ತಾಲೂಕಿನ ಚೆಂಬು ಗ್ರಾಮದ ಪೀಟರ್ ಎಂಬುವವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಪೊಲಿಸರು ಆರೋಪಿ ಶ್ರೀನಾಥ್ ನನ್ನು ಬಂಧಿಸಿದ್ದಾರೆ.
ಶ್ರೀನಾಥ್ ಕೊಡಗು ಜಿಲ್ಲೆ ಮಾತ್ರವಲ್ಲ, ದಕ್ಷಿಣ ಕನ್ನಡ, ಕೇರಳದಲ್ಲಿಯೂ ನೂರಾರು ಜನರಿಗೆ ವಂಚಿಸಿದ್ದು, ರಿಯಾಯಿತಿ ಕೊಡುವುದಾಗಿ ಹೇಳಿ ಒಬ್ಬರಿಂದ ಇನ್ನೊಬ್ಬರ ಪರಿಚಯ ಮಾಡಿಕೊಂಡು ಮಹಾಮೋಸ ಮಾಡುತ್ತಿದ್ದ ಎಂಬುದು ಬಯಲಾಗಿದೆ.
ಪೊಲೀಸರ ಮನೆ ಮೇಲೆ ಕಳ್ಳರ ದಾಳಿ; ಹಿಡಿಯಲು ಬಂದ ASI ಮೇಲೆ ಫೈರಿಂಗ್
https://pragati.taskdun.com/latest/police-housetheft-attackfiringasisoninjured/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ