ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ರಾಯಬಾಗ ಪಟ್ಟಣದಲ್ಲಿ ಪಟ್ಟಣ ಪಂಚಾಯತಿ ವತಿಯಿಂದ ರಾಜ್ಯ ಹಣಕಾಸು ಆಯೋಗದ(ಎಸ್ಎಫ್ಸಿ) ಅನುದಾನದಲ್ಲಿ ನಿರ್ಮಿಸಲಾಗಿರುವ 11 ವಾಣಿಜ್ಯ ಮಳಿಗೆಗಳನ್ನು ನಿಯಮ ಬಾಹಿರವಾಗಿ ಹಂಚಿಕೆ ಮಾಡಲಾಗಿದ್ದು, ಈ ಕುರಿತು ಸಂಪೂರ್ಣ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಮಾಹಿತಿ ಹಕ್ಕು ಕಾರ್ಯಕರ್ತ ಹಾಗೂ ವಕೀಲ ಸುರೇಂದ್ರ ಉಗಾರೆ ಅವರು ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದಾರೆ.
ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಡಾ. ಈಶ್ವರ ಉಳ್ಳಾಗಡ್ಡಿ, ಕಚೇರಿ ವ್ಯವಸ್ಥಾಪಕ ಎ.ಎಚ್.ಮುಜಾವರ, ಸಹಾಯಕ ಅಭಿಯಂತರ ಡಿ.ಎಂ. ತರಡೆ, ರಾಯಬಾಗ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಸಂಜೀವ್ ಮಾಂಗ, ಕಿರಿಯ ಅಭಿಯಂತರ ಎಸ್.ಆರ್.ಚೌಗಲಾ, ಪಪಂ ಆಡಳಿತಾಧಿಕಾರಿ ಹಾಗೂ ತಹಶಿಲ್ದಾರ ಕೋಮಾರ, ಪಟ್ಟಣ ಪಂಚಾಯತಿ ಕಾನೂನು ಸಲಹೆಗಾರ ಹಾಗೂ ಜಿಲ್ಲಾ ನಗರಾಭಿವೃದ್ಧಿ ಕೋಶದ ಹಿಂದಿನ ಯೋಜನಾ ನಿರ್ದೇಶಕ ವಿಜಯಕುಮಾರ ಹೊನಕೇರಿ ವಿರುದ್ಧ ದೂರು ದಾಖಲಿಸಿದ್ದಾರೆ.
ಈ ಅಕ್ರಮದ ಕುರಿತು ರಾಯಬಾಗದ ಇಬ್ಬರು ತಹಶೀಲ್ದಾರರು ಅಕ್ರಮ ಆದ ಬಗ್ಗೆ ಅಧಿಕಾರಿಗಳ ಮೇಲೆ ಕ್ರಮ ಕೈಕೊಳ್ಳಿ ಎಂದು ಜಿಲ್ಲಾಡಳಿತಕ್ಕೆ ವರದಿಯನ್ನು ಕೊಟ್ಟರೂ ಕೂಡಾ ಜಿಲ್ಲಾ ನಗರಾಭಿವೃದ್ಧಿ ಇಲಾಖೆ ಮಳಿಗೆ ಹಂಚಿಕೆಯು ಸರಕಾರದ ಸುತ್ತೋಲೆಗೆ ವ್ಯತಿರಿಕ್ತವಾಗಿಲ್ಲಾ ಎಂದು ಪ್ರಕರಣವನ್ನು ಕೈ ಬಿಡಲು ಪೌರಾಡಳಿತ ನಿರ್ದೇಶಾನಲಯಕ್ಕೆ ಯೋಜನಾ ನಿರ್ದೇಶಕರು ವರದಿಯನ್ನು ಕೊಟ್ಟಿದ್ದರಿಂದ ಲೋಕಾಯುಕ್ತಕ್ಕೆ ದೂರು ಕೊಡಲಾಗಿದೆ ಎಂದು ಸುರೇಂದ್ರ ಉಗಾರೆಯವರು ಪ್ರಗತಿ ವಾಹಿನಿಗೆ ತಿಳಿಸಿದ್ದಾರೆ.
ಸಿದ್ದರಾಮಯ್ಯಗೆ 2 ಬಾರಿ ನನ್ನಿಂದ ಪುನರ್ಜನ್ಮ ಸಿಕ್ಕಿದೆ; ಮಾಜಿ ಸಿಎಂ ಕುಮಾರಸ್ವಾಮಿ
https://pragati.taskdun.com/politics/h-d-kumaraswamyreactionsiddaramaiahvidhanasabha-election/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ