ಪ್ರಗತಿವಾಹಿನಿ ಸುದ್ದಿ; ಮೈಸೂರು: ಒಂದೆಡೆ ರಾಜ್ಯದಲ್ಲಿ ವೋಟರ್ ಐಡಿ ಅಕ್ರಮ ಆರೋಪ ಕೇಳಿಬಂದಿದ್ದರೆ ಮತ್ತೊಂದೆಡೆ ಗುಂಬಜ್ ಮಾದರಿಯ ಬಸ್ ನಿಲ್ದಾಣ ವಿವಾದ ತಾರರಕ್ಕೇರಿದೆ. ಬಿಜೆಪಿ ಸರ್ಕಾರದ ಆಡಳಿತಕ್ಕೆ ಜನ ಬೇಸತ್ತಿದ್ದಾರೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಬಿಬಿಎಂಪಿ ವ್ಯಾಪ್ತಿಯಲ್ಲಿ 6,69,652 ಮತದಾರರ ಹೆಸರು ಡಿಲಿಟ್ ಮಾಡಲಾಗಿದೆ ಎಂದು ಆರೋಪಿಸಿದರು.
ವೋಟರ್ ಐಡಿ ಪರಿಷ್ಕರಣೆ ಹೆಸರಲ್ಲಿ ಅಧಿಕಾರಿಗಳಿಂದಲೇ ಅಕ್ರಮ ನಡೆಯುತ್ತಿದೆ. ಸರ್ಕಾರಿ ಅಧಿಕಾರಿಗಳು ಎಂದು ಮನೆಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ. ಸರ್ಕಾರದ ನಡವಳಿಕೆಯಿಂದ ಎಲ್ಲರೂ ಸಂಶಯಪಡುವಂತಾಗಿದೆ ವಾಗ್ದಾಳಿ ನಡೆಸಿದ್ದಾರೆ.
ಈಬಾರಿ ಬಿಜೆಪಿ ಏನೇ ಮಾಡಿದರೂ ಅಧಿಕಾರಕ್ಕೆ ಬರಲ್ಲ. ರಾಜ್ಯದ ಜನತೆ ಬಿಜೆಬಿ ಆಡಳಿತಕ್ಕೆ ಬೇಸತ್ತಿದ್ದಾರೆ. ಯಾವ ಕುತಂತ್ರವೂ ಬಿಜೆಪಿ ಅಧಿಕಾರಕ್ಕೆ ತರಲು ಸಾಧ್ಯವಿಲ್ಲ ಎಂದು ವಾಗ್ದಾಳಿ ನಡೆಸಿದರು.
ಇನ್ನು ಗುಂಬಜ್ ಮಾದರಿಯ ಬಸ್ ನಿಲ್ದಾಣ ವಿವಾದಕ್ಕೆ ಸಂಬಂಧಿಸಿದಂತೆ ಶಾಸಕರೇ ಕಣ್ಣೀರು ಹಾಕುತ್ತಿದ್ದಾರೆ. ಶಾಸಕರು ಕಣ್ಣೀರಿಡುವುದನ್ನು ಸಂಸದರೇ ಕಣ್ಣೀರು ಹಾಕಿಸುತ್ತಿರುವುದನ್ನು ನಾನು ಗಮನಿಸಿದ್ದೇನೆ. ಶಾಸಕರೇ ಕಣ್ಣೀರು ಹಾಕಿದರೆ ಅವರಿಗೆ ಮತ ನೀಡಿದ ಜನರ ಗತಿಯೇನು? ಸ್ವಪಕ್ಷದ ಸಂಸದರೇ ಶಾಸಕರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಜನಸಾಮಾನ್ಯರ ಪಾಡೇನು? ಎಂದು ಪ್ರಶ್ನಿದಿದರು.
ಇಂದಿನಿಂದ ಜೆಡಿಎಸ್ ಪಂಚರತ್ನ ರಥ ಯಾತ್ರೆ ಮುಳಬಾಗಿಲಿಂದ ಆರಂಭವಾಗಲಿದೆ. ಇಂದಿನಿಂದ 36 ದಿನಗಳ ಕಾಲ ಮೊದಲ ಹಂತದ ಪಂಚರತ್ನ ರಥ ಯಾತ್ರೆ ನಡೆಯಲಿದೆ. ಮಳೆಯಿಂದಾಗಿ ಪಂಚರತ್ನ ರಥ ಯಾತ್ರೆ ಮುಂದೂಡಲಾಗಿತ್ತು. ಇಂದಿನಿಂದ ಪುನರಾರಂಭವಾಗಲಿದೆ ಎಂದರು.
ವಿರೋಧದ ನಡುವೆಯೂ ಶಾಲೆಗಳಲ್ಲಿ ಧ್ಯಾನ ಜಾರಿಗೆ ಸಿದ್ಧತೆ
https://pragati.taskdun.com/school-collegesmeditaion-startnext-month/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ