ಪ್ರಗತಿವಾಹಿನಿ ಸುದ್ದಿ; ಹಾಸನ: ಮಕ್ಕಳನ್ನು ನೋಡಲು ಬಿಡದ ಕಾರಣಕ್ಕೆ ಕೋಪಗೊಂಡ ಪತಿ ಮಹಾಶಯ ಮನೆಗೆ ಬೆಂಕಿ ಹಚ್ಚಿರುವ ಘೋರ ಘಟನೆ ಹಾಸನ ಜಿಲ್ಲೆಯ ದೊಡ್ಡಬೀಕನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಪತಿ-ಪತ್ನಿಯ ಜಗಳದಿಂದಾಗಿ ದಂಪತಿ ಬೇರೆಯಾಗಿದ್ದರು. ಅಂಕನಹಳ್ಳಿಯ ರಂಗಸ್ವಾಮಿ ಹಾಗೂ ಗೀತಾ ದಂಪತಿ ಇಬ್ಬರು ಮಕ್ಕಳಿದ್ದರೂ ಕೌಟುಂಬಿಕ ಜಗಳದಿಂದಾಗಿ ಬೇರ್ಪಟ್ಟಿದ್ದರು. ಇಬ್ಬರು ಪುಟ್ಟ ಮಕ್ಕಳು ತಾಯಿ ಜೊತೆ ವಾಸವಾಗಿದ್ದರು. ಮಕ್ಕಳನ್ನು ನೋಡಲೆಂದು ಪತಿ ಆಗಾಗ ಮನೆಗೆ ಬರುತ್ತಿದ್ದ. ಆದರೆ ಮಕ್ಕಳನ್ನು ನೋಡಲು ಈಗ ಬಿಡಲಿಲ್ಲ ಎಂದು ಕೋಪಗೊಂಡ ಮಡದಿ, ಮಕ್ಕಳ ಸಮೇತ ಮನೆಗೆ ಬೆಂಕಿ ಹಚ್ಚಿದ್ದಾನೆ ಭೂಪ.
ಘಟನೆಯಲ್ಲಿ ಪತ್ನಿ ಗೀತಾ, ಮಕ್ಕಳಾದ 7 ವರ್ಷದ ಚಿರಂತನ್, 5 ವರ್ಷದ ನಂದನ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಹಾಸನದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಮನೆಯಲ್ಲಿದ್ದ ಪೀಠೋಪಕರಣಗಳು ಸಂಪೂರ್ಣ ಸುಟ್ಟು ಭಸ್ಮವಾಗಿವೆ. ಗೆರೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನವಿಲುತೀರ್ಥ ಜಲಾಶಯದಲ್ಲಿ ಇಬ್ಬರು ಮಕ್ಕಳೊಂದಿಗೆ ರಾಮದುರ್ಗದ ಮಹಿಳೆ ಆತ್ಮಹತ್ಯೆ
https://pragati.taskdun.com/ramdurga-woman-commits-suicide-with-two-children-in-naviluthirtha-reservoir/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ