ಪ್ರಗತಿವಾಹಿನಿ ಸುದ್ದಿ; ಖಾನಾಪುರ: ಖಾನಾಪುರ ತಾಲೂಕಿನ ನಾಗರಗಾಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ತಾವರಗಟ್ಟಿ ಗ್ರಾಮದ ರಾಜು ಕಾಕ್ಕತಕರ ಇವರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನಿಯತಿ ಫೌಂಡೇಶನ್ ವತಿಯಿಂದ ಕಂಪ್ಯೂಟರ್ ವಿತರಣೆ ಮಾಡಲಾಯಿತು.
ರಾಜು ಕಾಕ್ಕತಕರ ಅವರ ಮಕ್ಕಳಾದ ಶ್ರೇದ್ದಾ ಕಾಕ್ಕತಕರ, ಸ್ನೇಹಾ ಕಾಕ್ಕತಕರ, ರೇಣುಕಾ ಕಾಕ್ಕತಕರ, ನಿಕಿತಾ ಕಾಕ್ಕತಕರ, ಸಾವಿತ್ರಿ ಕಾಕ್ಕತಕರ ಅವರಿಗೆ ಉನ್ನತ ಹಂತದ ವಿದ್ಯಾಭ್ಯಾಸಕ್ಕೆ ಕಂಪ್ಯೂಟರ್ ಅವಶ್ಯಕತೆ ಇದೆ ಎಂದು ಸಮಸ್ಯೆ ಪರಿಹಾರ ಕೇಂದ್ರಕ್ಕೆ ಮನವಿ ಮಾಡಿದ್ದರು.
ಈ ಮನವಿಗೆ ಸ್ಪಂದಿಸಿದ ಖಾನಾಪುರ ಬಿಜೆಪಿ ಮಹಿಳಾ ಮೋರ್ಚಾ ಪ್ರಭಾರಿ ಡಾ॥ ಸೋನಾಲಿ ಸರ್ನೋಬತ ಆ ವಿದ್ಯಾರ್ಥಿನಿಗಳಿಗೆ ಖಾನಾಪುರ ಸಮಸ್ಯೆ ಪರಿಹಾರ ಕೇಂದ್ರ ಕಚೇರಿಯಲ್ಲಿ ಕಂಪ್ಯೂಟರ್ ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ॥ ಸೋನಾಲಿ ಸರ್ನೋಬತ ಅವರು ತಾವರಗಟ್ಟಿ ಗ್ರಾಮವೂ ಖಾನಾಪೂರ ಗಡಿಭಾಗದಲ್ಲಿ ಹೊಂದಿದ್ದು ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ನಮ್ಮ ನಿಯತಿ ಫೌಂಡೇಶನ್ ವತಿಯಿಂದ ಸಹಾಯ ಮಾಡುತ್ತಿದ್ದೇವೆ ಎಂದರು. ಈ ಸಂದರ್ಭದಲ್ಲಿ .ಕಲ್ಲಪ್ಪ ಕಂಗ್ರಾಕರ್. ರಾಜು ಕಾಕ್ಕತಕರ ನಾಗೇಶ್ ರಾಮಜಿ. ಪರಶುರಾಮ್ ಕೋಲಕಾರ.ಬಾಳೇಶ ಚವ್ವನ್ನವರ. ಕಾರ್ಯಕರ್ತರು ಉಪಸ್ಥಿದರು.
ಮಂಗಳೂರು ಸ್ಫೋಟ ಪ್ರಕರಣ; ನಕಲಿ ಆಧಾರ್ ಕಾರ್ಡ್ ನ ಅಸಲಿ ವ್ಯಕ್ತಿ ಪತ್ತೆ
https://pragati.taskdun.com/mangalore-blastauto-blastfake-adhar-cardreal-person-found/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ