Kannada NewsLatest

26ರಂದು ಬೆಳಗಾವಿ ಎಸ್ ಪಿ ಫೋನ್ಇನ್; ಕುಳಿತಲ್ಲಿಂದಲೇ ಸಮಸ್ಯೆಗೆ ಕಂಡುಕೊಳ್ಳಿ ಪರಿಹಾರ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಒಂದು ಫೋನ್ ಕರೆಯ ಮೂಲಕ ಸಾರ್ವಜನಿಕರ ಸಮಸ್ಯೆಗಳಿಗೆ  ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಫೋನ್ ಇನ್ ಕಾರ್ಯಕ್ರಮವನ್ನು ನ.26 ಕ್ಕೆ ಆಯೋಜಿಸಲಾಗಿದೆ.

ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗಿನ ಅವಧಿಯಲ್ಲಿ ಸಾರ್ವಜನಿಕರು ತಮ್ಮ  ಸಮಸ್ಯೆಗಳ ಬಗ್ಗೆ ತಾವು ಇದ್ದಲ್ಲಿಂದಲೇ ಬೆಳಗಾವಿ ಎಸ್.ಪಿ.ಯವರಿಗೆ ಕರೆ ಮಾಡಿ ಮಾತನಾಡಬಹುದು.

ಯಾವ ವಿಷಯಗಳಿಗೆ ಸಂಬಂಧಿಸಿದಂತೆ ಕರೆ ಮಾಡಬಹುದು? ಇಲ್ಲಿದೆ ವಿವರ:

1. ಪೊಲೀಸ್ ಠಾಣೆಯಲ್ಲಿ ನಿಮ್ಮ ದೂರು ಸ್ವೀಕರಿಸಿಲ್ಲವೇ?

2. ನೀವು ಕೊಟ್ಟ ಅರ್ಜಿ ವಿಚಾರಣೆ ಮಾಡಲಿಲ್ಲವೇ?

3. ನಿಮ್ಮ ಪ್ರದೇಶದಲ್ಲಿ ಬೀಟ್ ಪೊಲೀಸ್ ಬರುತ್ತಿಲ್ಲವೇ? 4. ಮಟಕಾ, ಜೂಜಾಟ, ಕ್ರಿಕೆಟ್ ಬೆಟ್ಟಿಂಗ್ ಮಾಹಿತಿ ನೀಡಬಲ್ಲರಾ ?

5. ಅಕ್ರಮ ಮದ್ಯ ಮಾರಾಟ ಮಾಡಲಾಗುತ್ತಿದೆಯೇ?

6. ಶಾಲಾ ಕಾಲೇಜು ಮಕ್ಕಳನ್ನು ಯಾರಾದರೂ ಚುಡಾಯಿಸುತ್ತಿದ್ದಾರೆಯೇ?

7. ಅಕ್ರಮ ಮರಳುಗಾರಿಕೆ, ಪಡಿತರ ಅಕ್ಕಿ ಅಕ್ರಮ ದಾಸ್ತಾನು ಹಾಗೂ ಇನ್ನಿತರ ಕಳ್ಳ ಸಾಗಾಣಿಕೆ ಮಾಹಿತಿ ಇದೆಯೇ? ”

8. ನಿಮ್ಮ ಊರಿನಲ್ಲಿ ಸಂಚಾರ (ಟ್ರಾಫಿಕ್) ಸಮಸ್ಯೆ, ಪಾರ್ಕಿಂಗ್ ಸಮಸ್ಯೆ ಇದ್ದಲ್ಲಿ ಮಾಹಿತಿ ನೀಡಿ.

9. ನಿಮ್ಮ ಊರಿನಲ್ಲಿ ವಿದ್ಯಾರ್ಥಿಗಳಗೆ ಬಸ್‌ ವ್ಯವಸ್ಥೆಯ ಬಗ್ಗೆ ಕೊರತೆ ಇದೆಯೇ?

10. ನಿಮ್ಮ ಊರಿನಲ್ಲಿ ವಾರದ ಸಂತೆಯ ಸಮಸ್ಯೆ ಇದೆಯೇ? 11. ನಿಮ್ಮ ಊರಿನಲ್ಲಿ ಯಾರಾದರೂ ರೌಡಿತನ ಹಾಗೂ ಇತರ ಉಪಟಳ ನೀಡುತ್ತಾ ಇದ್ದಾರೆಯೇ?

12. ನಿಮ್ಮ ಊರಿನಲ್ಲಿ ಮದ್ಯದ ಅಂಗಡಿಗಳು ಅವಧಿ ಮೀರಿ ವ್ಯಾಪಾರ ಮಾಡುತ್ತಿದ್ದಾರೆಯೇ?

13. ನಿಮ್ಮ ಊರಿನಲ್ಲಿ ಕಿರಾಣಿ ಅಂಗಡಿ ಹಾಗೂ ಮತ್ತಿತರ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟವಾಗುತ್ತಿದೆಯೇ?

14. ಶಾಲಾ-ಕಾಲೇಜು ಹತ್ತಿರ ಸಿಗರೇಟ್, ಬೀಡಿ, ಮತ್ತಿತರೆ ತಂಬಾಕು ಪದಾರ್ಥಗಳನ್ನು ಮಾರಾಟ ಮಾಡಲಾಗುತ್ತಿದೆಯೇ?

15. ನಿಮ್ಮ ಊರಿನಲ್ಲಿ ಯಾರಾದರೂ ಬಾಲಕ/ಬಾಲಕಿಯರನ್ನು ಬಾಲಕಾರ್ಮಿಕರನ್ನಾಗಿ ಬಳಸಲಾಗುತ್ತಿದೆಯೇ?

16. ನಿಮ್ಮ ಊರಿನಲ್ಲಿ ಬಾಲ್ಯವಿವಾಹದ ಬಗ್ಗೆ ಮಾಹಿತಿ ಇದೆಯೇ?

17. ನಿಮ್ಮ ಊರಿನ ರಸ್ತೆಗಳಲ್ಲಿ ಪದೇ-ಪದೇ ರಸ್ತೆ ಅಪಘಾತ ಉಂಟಾದಲ್ಲಿ ಮಾಹಿತಿ ನೀಡಿ..

18. ನಿಮ್ಮ ಊರಿನಲ್ಲಿ ತೆರೆದ ಕೊಳವೆ ಬಾವಿ ಇದ್ದಲ್ಲಿ ಮಾಹಿತಿ ನೀಡಿ. 19. ನಿಮ್ಮ ಊರಿನಲ್ಲಿ ಅಸುರಕ್ಷಿತ ವಿದ್ಯುತ್ ತಂತಿಗಳದ್ದಲ್ಲಿ ಮಾಹಿತಿ ನೀಡಿ.

20. ನಿಮ್ಮ ಊರಿನಲ್ಲಿ ಗಾಂಜಾ ಮಾರಾಟ, ಸೇವನೆ ಹಾಗೂ ಬೆಳೆಯುವ ಮಾಹಿತಿ ಇದ್ದಲ್ಲಿ ನೀಡಿ.

> ಕರೆ ಮಾಡಿದವರ ಹೆಸರು ಹಾಗೂ ಮೊಬೈಲ್ ನಂಬರನ್ನು ಗೌಪ್ಯವಾಗಿರಸಲಾಗುವುದು ಹಾಗೂ ಸುಳ್ಳು ಮಾಹಿತಿ ನೀಡಿದ್ದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು.

ಮಹಿಳೆಯರು, ಮಕ್ಕಳು ಹಾಗೂ ಹಿರಿಯ ನಾಗರಿಕರು ತಪ್ಪದೇ ನಿಮ್ಮ ಅನಿಸಿಕೆ, ಸಲಹೆ- ಸೂಚನೆಗಳನ್ನು ಹಂಚಿಕೊಳ್ಳಿ.

• ನಿಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಯ ಅಧಿಕಾರಿ/ಸಿಬ್ಬಂದಿಗಳು ಒಳ್ಳೆಯ ಕೆಲಸ ಮಾಡಿದ್ದು, ನಿಮಗೆ ಗೊತ್ತಿದ್ದಲ್ಲಿ ತಪ್ಪದೆ ಕರೆ ಮಾಡಿ ತಿಳಿಸಿ, ಅವರ ಬೆನ್ನು ತಟ್ಟೋಣ ಎಂದು ಜಿಲ್ಲಾ ಪೊಲೀಸ್ ವರುಷ್ಠಾಧಿಕಾರಿಗಳು ತಿಳಿಸಿದ್ದಾರೆ.

ನಿಮ್ಮ ಅನುಭವದ ಸಲಹೆ-ಸೂಚನೆ ನಮಗೆ ದಾರಿದೀಪ. ಕರೆ ಮಾಡಬೇಕಾದ ಸಂಖ್ಯೆ: 0831-2405226.

ಕೊಲೆ ಯತ್ನ ಆರೋಪ: JDS ಶಾಸಕನ ವಿರುದ್ಧ ದೂರು ದಾಖಲು

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button