Kannada NewsKarnataka NewsLatest

ರಸ್ತೆ ಮಧ್ಯದಲ್ಲೇ ಹೋಮ ನಡೆಸಿದ ಗ್ರಾಮಸ್ಥರು; ವಿನೂತನ ಮಾದರಿಯಲ್ಲಿ ಪ್ರತಿಭಟನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಹದಗೆಟ್ಟ ವ್ಯವಸ್ಥೆ ಸರಿಪಡಿಸಲು ಪ್ರಜಾಸತ್ತಾತ್ಮಕ ರೀತಿಯಲ್ಲಿ ಹತ್ತು ಹಲವು ಬಗೆಹಳ ಪ್ರತಿಭಟನೆಗಳು ನಡೆಯುತ್ತಲೇ ಇರುವುದು ಸಾಮಾನ್ಯ. ಪ್ರತಿ ವಿನೂತನ ಪ್ರತಿಭಟನೆ ಆಡಳಿತದ ಕ್ಷಿಪ್ರ ಗಮನ ಸೆಳೆಯುವ ತಂತ್ರಗಾರಿಕೆಯೂ ಹೌದು.

ಅಂತೆಯೇ ಇಲ್ಲೊಂದು ರಸ್ತೆಯ ಬರೊಬ್ಬರಿ 18 ವರ್ಷಗಳ ಅವ್ಯವಸ್ಥೆಗೆ ಬೇಸತ್ತ ಜನ ರಸ್ತೆ ಮಧ್ಯವೇ ಹೋಮ ಮಾಡುವ ಮೂಲಕ ಆಡಳಿತದ ಗಮನ ಸೆಳೆದಿದ್ದಾರೆ.

ಇದು ನಡೆದಿದ್ದು ಅಥಣಿ ತಾಲೂಕಿನಲ್ಲಿ. ಸುಟ್ಟಟ್ಟಿ ಗ್ರಾಮದಿಂದ ಯಲ್ಲಪ್ಪನವಾಡಿ ಗ್ರಾಮದವರೆಗೆ ಸುಮಾರು 6 ಕಿ.ಮೀ. ರಸ್ತೆ ಕಳೆದ 18 ವರ್ಷಗಳಿಮದ ಹದಗೆಡುತ್ತಲೇ ಸಾಗಿದೆ. ದುರದೃಷ್ಟಕರ ವಿಷಯವೆಂದರೆ ಯಾವಾಗಲೂ ಇದಕ್ಕೆ ದುರಸ್ತಿ ಭಾಗ್ಯವೇ ಬರಲಿಲ್ಲ!

ಸ್ಥಳೀಯರು ಶಾಸಕ ಮಹೇಶ ಕುಮಠಳ್ಳಿ ಅವರಿಗೆ ಹಲವಾರು ಬಾರಿ ಈ ಬಗ್ಗೆ ಗಮನಕ್ಕೆ ತಂದಿದ್ದರೂ ಸೂಕ್ತ ಸ್ಪಂದನೆ ಸಿಗಲಿಲ್ಲ. ನಿತ್ಯ ಸಂಚರಿಸುವವರ ಪಾಡು ಮಾತ್ರ ಅವರವರಿಗೇ ಗೊತ್ತು ಎಂಬಂತಿತ್ತು. ಹೀಗಾಗಿ ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ನೇತೃತ್ವದಲ್ಲಿ ಗ್ರಾಮಸ್ಥರು ರಸ್ತೆಯ ಮಧ್ಯದಲ್ಲೊಂದು ಹೋಮ ಆಯೋಜಿಸಿ ಆಡಳಿತಕ್ಕೆ ಹಾಗೂ ಶಾಸಕರಿಗೆ ಇದನ್ನು ದುರಸ್ತಿ ಮಾಡುವ ಬುದ್ಧಿ ನೀಡಲು ಪ್ರಾರ್ಥಿಸುವ ಮೂಲಕ ಗಮನ ಸೆಳೆದಿದ್ದಾರೆ.

26ರಂದು ಬೆಳಗಾವಿ ಎಸ್ ಪಿ ಫೋನ್ಇನ್; ಕುಳಿತಲ್ಲಿಂದಲೇ ಸಮಸ್ಯೆಗೆ ಕಂಡುಕೊಳ್ಳಿ ಪರಿಹಾರ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button