LatestUncategorized

ಶಾಲಾ ಮಕ್ಕಳನ್ನು ಸಾಲಾಗಿ ನಿಲ್ಲಿಸಿ ದೊಣ್ಣೆಯಿಂದ ಥಳಿಸಿದ ವ್ಯಕ್ತಿ; 40 ಮಕ್ಕಳ ಮೇಲೆ ಮಾರಣಾಂತಿಕ ಹಲ್ಲೆ

ಪ್ರಗತಿವಾಹಿನಿ ಸುದ್ದಿ; ತುಮಕೂರು: ವಸತಿ ಶಾಲೆಯ ಮಕ್ಕಳನ್ನು ಸಾಲಾಗಿ ನಿಲ್ಲಿಸಿ ವ್ಯಕ್ತಿಯೋರ್ವ ಮಕ್ಕಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ತುಮಕೂರಿನ ಮಲ್ಲಸಂದ್ರದ ವಿಶ್ವ ಭಾರತಿ ಸರ್ಕಾರಿ ಅನುದಾನಿತ ಶಾಲೆಯಲ್ಲಿ ನಡೆದಿದೆ.

ಶಾಲೆಯ ಕಾರ್ಯದರ್ಶಿ ಎನ್.ಮೂರ್ತಿ ಎಂಬುವವರ ಮಗ ಭರತ್ ಕುಡಿದು ಬಂದು ವಸತಿ ಶಾಲೆಯ ಮಕ್ಕಳನ್ನು ದೊಣ್ಣೆಯಿಂದ ಬಡಿದಿದ್ದಾನೆ. ಮೂರು ದಿನಗಳ ಹಿಂದೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

Home add -Advt

ವಸತಿ ಶಾಲೆಯ 40 ಮಕ್ಕಳನ್ನು ಸಾಲಾಗಿ ನಿಲ್ಲಿಸಿದ ಕುಡುಕ ಭರತ್, ಬೆಲ್ಟ್ ಹಾಗೂ ದೊಣ್ಣೆಯಿಂದ ಮನಬಂದಂತೆ ಮಕ್ಕಳ ಮೇಲೆ ಹೊಡೆದಿದ್ದಾನೆ. ಶಾಲಾ ಆಡಳಿತ ಮಂಡಳಿ ಮಕ್ಕಳ ಮೇಲಿನ ಹಲ್ಲೆ ಘಟನೆಯನ್ನು ಮುಚ್ಚಿಟ್ಟಿದೆ. ಘಟನೆ ನಡೆದ 3 ದಿನಗಳ ಬಳಿಕ ಹಲ್ಲೆಗೊಳಗಾದ ಮಕ್ಕಳು ತಮ್ಮ ಪೋಷಕರಿಗೆ ವಿಚಾರ ತಿಳಿಸಿದ್ದಾರೆ.

ವಿಷಯ ಗೊತ್ತಾಗುತ್ತಿದ್ದಂತೆ ಪೋಷಕರು ಶಾಲೆಗೆ ಆಗಮಿಸಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ತುಮಕೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಕೇಸ್ ದಾಖಲಾಗುತ್ತಿದ್ದಂತೆ ಆರೋಪಿ ಭರತ್ ನಾಪತ್ತೆಯಾಗಿದ್ದಾನೆ. ಭರತ್ ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಮುರಿದುಬಿದ್ದ ನಟಿ ವೈಷ್ಣವಿ ಗೌಡ- ಉದ್ಯಮಿ ವಿದ್ಯಾಭರಣ ಮದುವೆ ಮಾತುಕತೆ

https://pragati.taskdun.com/vaishnavi-gowdavidhabharanmarrigecancceled/

Related Articles

Back to top button