Latest

ರಾಹುಲ್ ಚುಂಬನ ಫೋಟೊ; ಶೇರ್ ಮಾಡಿದವನಿಗೆ ಶಾಸಕಿ ಕ್ಲಾಸ್

ಪ್ರಗತಿವಾಹಿನಿ ಸುದ್ದಿ, ಜೈಪುರ:  ಭಾರತ್ ಜೋಡೊ ಯಾತ್ರೆ ವೇಳೆ ತನ್ನನ್ನು ತಬ್ಬಿ ತಲೆಗೆ ಚುಂಬಿಸುತ್ತಿರುವ ರಾಹುಲ್ ಗಾಂಧಿ ಫೋಟೊವನ್ನು ಜಾಲತಾಣದಲ್ಲಿ ಶೇರ್ ಮಾಡಿ ಶೀರ್ಷಿಕೆ ಬರೆಯುವಂತೆ ಕೇಳಿದ ಬಿಜೆಪಿ ಮುಖಂಡನ ವಿರುದ್ಧ ರಾಜಸ್ಥಾನದ ಶಾಸಕಿ ದಿವ್ಯಾ ಮಡೆರ್ನಾ ಕಿಡಿ ಕಾರಿದ್ದಾರೆ.

ಶೇರ್ ಮಾಡಿದ ಬಿಜೆಪಿ ಮುಖಂಡ ಅರುಣ ಯಾದವ್ ಗೆ ಜಾಲತಾಣದಲ್ಲೇ ಕ್ಲಾಸ್ ಕೂಡ ತೆಗೆದುಕೊಂಡಿದ್ದಾರೆ.

ಬಿಜೆಪಿ ಕಾರ್ಯಕರ್ತ ಅರುಣ್ ಯಾದವ್ ಅವರು ಭಾರತ್ ಜೋಡೋ ಯಾತ್ರೆಯ ವೇಳೆ ರಾಹುಲ್ ಗಾಂಧಿ ಅವರು ಶಾಸಕಿ ದಿವ್ಯಾ ಮಡೆರ್ನಾ ಅವರ ತಲೆಗೆ ಚುಂಬಿಸುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಲ್ಲದೆ  ಅದಕ್ಕೆ ಶೀರ್ಷಿಕೆ ನೀಡುವಂತೆ ತಮ್ಮ ಅನುಯಾಯಿಗಳನ್ನು ಕೇಳಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಮಡೆರ್ನಾ ‘ಹಿರಿಯ ಸಹೋದರ, ರಕ್ಷಕ, ಪಾಲಕ..  ಹೀಗೆ ಏಳು ಶೀರ್ಷಿಕೆಗಳನ್ನು ನೀಡಿದ್ದಾರೆ. ಇಷ್ಟಕ್ಕೇ ಬಿಡದೆ, “ನಿಮಗೆ ನಾಚಿಕೆಯಾಗಬೇಕು. ನಿಮಗೆ ಮಗಳು, ಹೆಂಡತಿ, ತಾಯಿ ಕೂಡ ಇರಬಹುದು. ತೇಜೋವಧೆಯನ್ನು ನಿಲ್ಲಿಸಿ. ರಾಜಕೀಯವಾಗಿ ಗುರಿಯಾಗಿಸಲು ಉತ್ತಮ ಮಾರ್ಗಗಳನ್ನು ಕಂಡುಕೊಳ್ಳಿ” ಎಂದು ಅವರು ಸಲಹೆ ನೀಡಿದ್ದಾರೆ.

Home add -Advt

ಮಗಳನ್ನೇ ಬಲಿ ಪಡೆದ ಕುಡುಕ ತಂದೆ

Related Articles

Back to top button