ರಾಷ್ಟ್ರೀಯ ಮಟ್ಟದ ಎನ್ ಸಿ ಸಿ ಶಿಬಿರದಲ್ಲಿ ಬೆಳಗಾವಿಯ ಕೆಡೆಟ್ ಅನುದೀಪ್ ಕುಲಕರ್ಣಿಗೆ ಕಂಚಿನ ಪದಕ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕೆಎಲ್ಎಸ್ ಗೋಗಟೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಬೆಳಗಾವಿಯ ಏರೋನಾಟಿಕಲ್ ವಿದ್ಯಾರ್ಥಿಯಾದ ಅನುದೀಪ್ ಕುಲಕರ್ಣಿ , 8 ಕರ್ನಾಟಕ ಏರ್ ಸ್ಕ್ವಾಡ್ರನ್, ಬೆಳಗಾವಿಯ ಕೆಡೆಟ್ ಸೀನಿಯರ್ ಅಂಡರ್ ಆಫೀಸರ್ ಅವರು ಇತ್ತೀಚೆಗೆ ರಾಜಸ್ಥಾನದ ಜೋಧ್‌ಪುರದಲ್ಲಿ ಜರುಗಿದ ರಾಷ್ಟ್ರೀಯ ಮಟ್ಟದ ಅಖಿಲ ಭಾರತ ವಾಯು ಸಾನಿಕ್ ಶಿಬಿರ 2022 , ಕಂಟ್ರೋಲ್ ಲೈನ್ ಫ್ಲೈಯಿಂಗ್ ಈವೆಂಟ್‌ನಲ್ಲಿ ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯವನ್ನು ಪ್ರತಿನಿಧಿಸಿ ಕಂಚಿನ ಪದಕವನ್ನು ಗೆದ್ದಿದ್ದಾರೆ.
ಇದಕ್ಕಿಂತ ಮುಂಚೆ ನಡೆದ ವಾಯು ಸಾನಿಕ್ ಕ್ಯಾಂಪ್ 1 ಮತ್ತು 2 ರ, ಕಂಟ್ರೋಲ್ ಲೈನ್ ಫ್ಲೈಯಿಂಗ್ ಈವೆಂಟ್‌ನಲ್ಲಿ ಅವರು ಚಿನ್ನದ ಪದಕವನ್ನು ಗಳಿಸಿದ್ದರು. ಬೀದರ್‌ನ ಏರ್ ಫೋರ್ಸ್ ಸ್ಟೇಷನ್‌ನಲ್ಲಿ ನಡೆದ ಏರ್ ಫೋರ್ಸ್ ಅಟ್ಯಾಚ್‌ಮೆಂಟ್ ಕ್ಯಾಂಪ್ 2022 ಪ್ರತಿನಿಧಿಸಿದ್ದರು ಮತ್ತು ಏಕ್ ಭಾರತ್ ಶ್ರೇಷ್ಠ ಭಾರತ್ 2022 ರ ಶಿಬಿರ ಕ್ಕೂ ಆಯ್ಕೆಯಾಗಿದ್ದರು.
ಕೆಎಲ್‌ಎಸ್ ಜಿಐಟಿ ಪ್ರಾಂಶುಪಾಲ ಡಾ.ಜೆ.ಕೆ.ಕಿತ್ತೂರು ಮತ್ತು ಎನ್‌ಸಿಸಿ ಸಂಯೋಜಕ ಪ್ರೊ.ವಿ.ವಿ ರಜಪೂತ್ ಅವರು ಎನ್‌ಸಿಸಿಯಲ್ಲಿ ಸಾಧನೆ ಮಾಡಿದ ಕೆಡೆಟ್‌ಗೆ ಅಭಿನಂದಿಸಿದರು.
ಕತಾರ್: ಪಿಫಾ ವರ್ಲ್ಡ್ ಕಪ್ ಮೆಡಿಕಲ್ ಟೀಂಗೆ ತುಳುನಾಡಿನ ಮಹಿಳೆ ಆಯ್ಕೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ