Latest

ಬೆಳಗಾಗುವಷ್ಟರಲ್ಲಿ ತೆರವುಗೊಂಡ ಬಸ್ ನಿಲ್ದಾಣದ ಮೇಲಿದ್ದ ಗುಂಬಜ್

ಪ್ರಗತಿವಾಹಿನಿ ಸುದ್ದಿ; ಮೈಸೂರು: ಅರಮನೆ ನಗರಿ ಮೈಸೂರಿನಲ್ಲಿ ನಿರ್ಮಾಣಗೊಂಡಿದ್ದ ಗುಂಬಜ್ ಮಾದರಿ ಬಸ್ ನಿಲ್ದಾಣ ವಿವಾದಕ್ಕೆ ಸಧ್ಯ ತೆರೆ ಬಿದ್ದಿದೆ.

ಮೈಸೂರಿನ ಊಟಿ ರಸ್ತೆಯಲ್ಲಿ ನಿರ್ಮಾಣಗೊಂಡಿದ್ದ ಬಸ್ ಶೆಲ್ಟರ್ ಮೇಲಿನ ಮೂರು ಗುಂಬಜ್ ಮಾದರಿಗಳು ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಅಲ್ಲದೇ ಶಾಸಕ ಎಸ್.ಎ.ರಾಮದಾಸ್ ಹಾಗೂ ಸಂಸದ ಪ್ರತಾಪ್ ಸಿಂಹ ನಡುವಿನ ರಾಜಕೀಯ ಜಟಾಪಟಿಗೂ ವೇದಿಕೆಯಾಗಿತ್ತು. ಇದೀಗ ರಾತ್ರಿ ಬೆಳಗಾಗುವಷ್ಟರಲ್ಲಿ ಎರಡು ಗುಂಬಜ್ ಗಳು ತೆರವುಗೊಂಡಿವೆ.

ನಿನ್ನೆ ನಿನ್ನೆವರೆಗೂ ಬಸ್ ನಿಲ್ದಾಣದ ಮೇಲೆ ಇದ್ದ ಮೂರು ಗುಂಬಜ್ ಗಳಲ್ಲಿ ಇಂದು ಬೆಳಗಾಗುವಷ್ಟರಲ್ಲಿ ಅಕ್ಕಪಕ್ಕದ ಎರಡು ಗುಂಬಜ್ ಗಳು ತೆರವುಗೊಂಡಿದೆ.ಜಿಲ್ಲಾಡಳಿತ ಗುಂಬಜ್ ತೆರವುಗೊಳಿಸದಿದ್ದರೆ ಸ್ವತ: ತಾವೇ ತೆರವು ಗೊಳಿಸುವುದಾಗಿ ಸಂಸದರು ಎಚ್ಚರಿಕೆ ಕೊಟ್ಟಿದ್ದರು. ಶಾಸಕ ರಾಮದಾಸ್ ತಾವು ಅರಮನೆ ಮಾದರಿಯಲ್ಲಿ ಬಸ್ ನಿಲ್ದಾಣ ಮಾಡಲು ಉದ್ದೇಶಿಸಿದ್ದೆ. ಆದರೆ ಇದಕ್ಕೆ ಧರ್ಮದ ಲೇಪನ ಹಚ್ಚಲಾಗಿದೆ ಎಂದು ಹೇಳಿಕೆ ಕೊಟ್ಟಿದ್ದರು. ತೀವ್ರ ಚರ್ಚೆಗಳ ಬಳಿಕ ಇದೀಗ ಶಾಸಕರ ಅನುಮತಿ ಮೇರೆಗೆ ಬಸ್ ನಿಲ್ದಾಣದ ಮೇಲಿನ ಎರಡು ಗುಂಬಜ್ ಗಳು ಎರವುಗೊಂಡಿದ್ದು, ಮಧ್ಯದ ದೊಡ್ಡ ಗುಂಬಜ್ ನ್ನು ಹಾಗೇ ಉಳಿಸಲಾಗಿದೆ.

ಗುಂಬಜ್ ತೆರವು ಬೆನ್ನಲ್ಲೇ ಟ್ವೀಟ್ ಮಾಡಿರುವ ಸಂಸದ ಪ್ರತಾಪ್ ಸಿಂಹ, ಮಧ್ಯದಲ್ಲೊಂದು ದೊಡ್ಡ ಗುಂಬಜ್, ಅಕ್ಕಪಕ್ಕ ಎರಡು ಚಿಕ್ಕ ಗುಂಬಜ್ ಇದ್ದರೆ ಅದು ಮಸೀದಿನೇ, ಅದನ್ನು ತೆರವು ಮಾಡಿಸುತ್ತೇನೆ ಎಂದಿದ್ದೆ ಮತ್ತು ಅದರಂತೆ ನಡೆದುಕೊಂಡಿದ್ದೇನೆ. ಕಾಲಾವಕಾಶ ಕೇಳಿ ಮಾತಿನಂತೆ ನಡೆದುಕೊಂಡ ಜಿಲ್ಲಾಧಿಕಾರಿಗಳಿಗೆ ಹಾಗೂ ವಾಸ್ತವ ಅರಿತು ಜನಾಭಿಪ್ರಾಯಕ್ಕೆ ತಲೆಬಾಗಿದ ಶಾಸಕ ಎಸ್.ಎ.ರಾಮದಾಸ್ ಜಿ ಅವರಿಗೂ ಧನ್ಯವಾದ ಎಂದು ತಿಳಿಸಿದ್ದಾರೆ.

ಮತ್ತೊಂದು ಭೀಕರ ಅಪಘಾತ: ಬೆಳಗಾವಿ ASI ಪುತ್ರ ಸಾವು

https://pragati.taskdun.com/accidentbelagaviasi-sondeath/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button