Kannada NewsKarnataka NewsLatest

​10​ ಕೋಟಿ ರೂ,ಗಳ ವೆಚ್ಚದಲ್ಲಿ ರಸ್ತೆ ಕಾಮಗಾರಿ​ : ಪೂಜೆ ಸಲ್ಲಿಸಿ ಚಾಲನೆ ನೀಡಿದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್

​ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ​ ​ಬೆಳಗಾವಿ ಗ್ರಾಮೀಣ ಕ್ಷೇತ್ರದ ಪಾರಿಶ್ವಾಡ ಕ್ರಾಸ್ ನಿಂದ ಬೆಂಡಿಗೇರಿ ಗ್ರಾಮದವರೆಗೆ ರಸ್ತೆ ಅಭಿವೃದ್ಧಿ ಪಡಿಸ​ಲು 10 ಕೋಟಿ ರೂ. ಮಂಜೂರು ಮಾಡಿಸಿರುವ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್, ಮಂಗಳವಾರ ಪೂಜೆ ಸಲ್ಲಿಸುವ ಮೂಲಕ ಕಾಮಗಾರಿಗೆ​ ಚಾಲನೆ ನೀಡಿದರು.
​ ನಾನು ಶಾಸಕಿಯಾಗುವ ಪೂರ್ವದಲ್ಲೇ ಇಡೀ ಕ್ಷೇತ್ರದ ಅಧ್ಯಯನ ನಡೆಸಿದ್ದೆ. ಪ್ರತಿ ಊರಿನ ಸಮಸ್ಯೆಯನ್ನು ತಿಳಿದಿಕೊಂಡಿದ್ದೆ. ಹಾಗಾಗಿ ಕಳೆದ ನಾಲ್ಕೂವರೆ ವರ್ಷ ತಡೆರಹಿತವಾಗಿ ಯೋಜನೆಗಳನ್ನು ಜಾರಿಗೊಳಿಸಲು ಸಾಧ್ಯವಾಯಿತು. ಕ್ಷೇತ್ರದಲ್ಲಿ ಅಭಿವೃದ್ಧಿಗೊಂದು ಹೊಸ ವ್ಯಾಖ್ಯಾನ ನೀಡಲು ಸಾಧ್ಯವಾಯಿತು. ಜನರು ನನ್ನನ್ನು ಆಯ್ಕೆ ಮಾಡಿದ್ದಕ್ಕೆ ಪಶ್ಚಾತ್ತಾಪ ಪಡದೆ ಹೆಮ್ಮೆಪಡುವಂತೆ ಮಾಡಲು ಸಾಧ್ಯವಾಯಿತು ಎಂದು ಈ ಸಂದರ್ಭದಲ್ಲಿ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಯಾವುದೇ ಜನಪ್ರತಿನಿಧಿ ತಾವು ಪ್ರತಿನಿಧಿಸುವ ಕ್ಷೇತ್ರಕ್ಕೆ ಮತ್ತು ಜನರಿಗೆ ಉಪಯೋಗಿಯಾಗಬೇಕೇ ವಿನಃ ಉಪದ್ರವಿಯಾಗಬಾರದು. ಜನ ಬಯಸುವುದು ಜನೋಪಯೋಗಿ ಪ್ರತಿನಿಧಿಯನ್ನು. ನಾನು ಜನರಿಗೆ ಹತ್ತಿರವಾಗಿ ಕೆಲಸ ಮಾಡುತ್ತಿರುವುದರಿಂದ ನಿತ್ಯ ಸಾವಿರಾರು ಜನರು ನನ್ನ ಬಳಿ ಬಂದು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಪರಿಹಾರ ಕಂಡುಕೊಳ್ಳುತ್ತಿದ್ದಾರೆ. ಅಧಿವೇಶನದಲ್ಲಿ ಪಾಲ್ಗೊಳ್ಳಲು, ಅಭಿವೃದ್ಧಿ ಯೋಜನೆಗಳನ್ನು ತರಲು ಮತ್ತು ಪಕ್ಷದ ಕೆಲಸಗಳಿಗಾಗಿ ಬೆಂಗಳೂರಿಗೆ ಹೋಗುವ ಸಂದರ್ಭದ ಹೊರತುಪಡಿಸಿ ಕ್ಷೇತ್ರದಲ್ಲಿದ್ದಾಗ ಎಂದೂ ನಾನು ವಿಶ್ರಾಂತಿ ತೆಗೆದುಕೊಳ್ಳುವುದಿಲ್ಲ. ಇಡೀ ಕ್ಷೇತ್ರವೇ ನನ್ನ ಕುಟುಂಬ​ ಎಂದುಕೊಂಡಿದ್ದೇನೆ.​ ಜನರ ನೆಮ್ಮದಿಯಲ್ಲೇ ನಾನು ನನ್ನ ನೆಮ್ಮದಿಯನ್ನೂ ಕಂಡುಕೊಳ್ಳುತ್ತಿದ್ದೇನೆ​ ​ಎಂದು ಹೆಬ್ಬಾಳಕರ್ ಹೇಳಿದರು.
​ ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ​ ಚನ್ನರಾಜ ಹಟ್ಟಿಹೊಳಿ, ಸಿ ಸಿ ಪಾಟೀಲ, ಅಡಿವೇಶ ಇಟಗಿ, ಸುರೇಶ ಇಟಗಿ, ಇನಾಯತ್ ಅತ್ತಾರ, ಪರ್ವತಗೌಡ ಪಾಟೀಲ, ಬಸಮಣ್ಣ ಶೀಗಿಹಳ್ಳಿ, ನ್ಯಾಯವಾದಿ ಗಿಡ್ಡಬಸನ್ನವರ, ಎಕ್ಸಿಕ್ಯೂಟಿವ್ ಇಂಜಿನಿಯರ್ ನಾಯ್ಕ್, ಗೌಸ್ ಸಿಂಪಿ, ಶಂಕರಗೌಡ ಪಾಟೀಲ, ಭೀಮಶಿ ಹಾದಿಮನಿ, ಕಲ್ಲಪ್ಪ ವನ್ನೂರ, ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
https://pragati.taskdun.com/karnataka-maharastra-border-issuesidhanatha-villagekannada-flag/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button