‘ಆಭರಣದಿಂದ ವ್ಯಕ್ತಿಯ ಮೇಲಾಗುವ ಪರಿಣಾಮ’ – ಫ್ರಾನ್ಸ್‌ನಲ್ಲಿ ಸಂಶೋಧನಾ ಪ್ರಬಂಧ ಮಂಡನೆ

ಲೋಹ ಮತ್ತು ಸಾತ್ವಿಕ ಆಕಾರದ ಆಭರಣಗಳು ಮಹಿಳೆಯರಿಗೆ ಆಧ್ಯಾತ್ಮಿಕ ದೃಷ್ಟಿಯಿಂದ ಪ್ರಯೋಜನಕಾರಿ ! – ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಶೋಧನೆಯ ನಿಷ್ಕರ್ಷ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಆಧ್ಯಾತ್ಮಿಕ ದೃಷ್ಟಿಯಿಂದ ಸಕಾರಾತ್ಮಕ ವಿನ್ಯಾಸದ ಆಭರಣಗಳು ಸಕಾರಾತ್ಮಕ (ಸಾತ್ವಿಕ) ಸ್ಪಂದನಗಳನ್ನು ಆಕರ್ಷಿಸುತ್ತವೆ ಮತ್ತು ಮಹಿಳೆಯ ಆಧ್ಯಾತ್ಮಿಕ ಪ್ರಗತಿಯಲ್ಲಿ ಸಹಾಯಕವಾಗಬಲ್ಲವು ಮತ್ತು ಆಧ್ಯಾತ್ಮಿಕ ದೃಷ್ಟಿಯಿಂದ ನಕಾರಾತ್ಮಕ ವಿನ್ಯಾಸದ ಆಭರಣಗಳು ನಕಾರಾತ್ಮಕ (ರಜ-ತಮ) ಸ್ಪಂದನಗಳನ್ನು ಆಕರ್ಷಿಸುತ್ತವೆ ಮತ್ತು ಮಹಿಳೆಯ ಪ್ರಭಾವಲಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ.

ಆಭರಣ ಧರಿಸುವ ವ್ಯಕ್ತಿ, ಆಭರಣವನ್ನು ತಯಾರಿಸುವ ಕುಶಲಕರ್ಮಿಗಳ ಆಧ್ಯಾತ್ಮಿಕ ಸ್ಥಿತಿ, ಆಭರಣವನ್ನು ತಯಾರಿಸಲು ಬಳಸುವ ಲೋಹ ಮತ್ತು ಆಭರಣದ ವಿನ್ಯಾಸ ಈ ಅಂಶಗಳ ಮೇಲೆ ಆಭರಣಗಳ ಸಕರಾತ್ಮಕ ಅಥವಾ ನಕಾರಾತ್ಮಕ ಸ್ಪಂದನಗಳನ್ನು ಆಕರ್ಷಿಸುವ ಕ್ಷಮತೆಯು ಅವಲಂಬಿಸಿರುತ್ತದೆ ಎಂದು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ಮಿಲ್ಕಿ ಅಗರ್ವಾಲ್ ಇವರು ಪ್ರತಿಪಾಧಿಸಿದರು.

 

ಅವರು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ ಪ್ರಸ್ತುತಪಡಿಸಿದ ಸಂಶೋಧನೆಯ ನಿಷ್ಕರ್ಷವನ್ನು ಪ್ರಸ್ತುತಪಡಿಸುತ್ತಿದ್ದರು. ಅವರು ಫ್ರಾನ್ಸ್‌ನ ‘ಐಕಾನ್ ಎಲ್‌ಎಲ್‌ಸಿ’ ಈ ಸಮೂಹವು ಪ್ರತ್ಯಕ್ಷವಾಗಿ ಮತ್ತು ಆನ್‌ಲೈನ್‌  ಮೂಲಕ ಆಯೋಜಿಸಿದ್ದ ‘ಫ್ಯಾಷನ್, ಬ್ಯೂಟಿ ಮತ್ತು ಕಾಸ್ಮೆಟಾಲಜಿ ಎಕ್ಸ್‌ಪೋ (ಎಫ್‌ಬಿಸಿ ೨೦೨೨)’ ಕುರಿತ ಅಂತರರಾಷ್ಟ್ರೀಯ ಪರಿಷತ್ತಿನಲ್ಲಿ ಮಾತನಾಡುತ್ತಿದ್ದರು.

ಈ ಪರಿಷತ್ತಿನಲ್ಲಿ ‘ಆಭರಣ ನಮ್ಮ ಪ್ರಭಾವಳಿಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ’ ಎಂಬ ವಿಷಯದ ಕುರಿತು ಸಂಶೋಧನಾ ಪ್ರಬಂಧ ಮಂಡಿಸಿದರು. ಮಹರ್ಷಿ ಆಧ್ಯಾತ್ಮಿಕ ವಿಶ್ವವಿದ್ಯಾಲಯದ ಸಂಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರು ಈ ಸಂಶೋಧನಾ ಪ್ರಬಂಧದ ಲೇಖಕರಾಗಿದ್ದು, ಶಾನ್ ಕ್ಲಾರ್ಕ್ ಸಹ-ಲೇಖಕರಾಗಿದ್ದಾರೆ.

ಸಂಶೋಧನಾ ಪ್ರಬಂಧದ ಸಾರಾಂಶವನ್ನು ಹೇಳುವಾಗ, ಮಿಲ್ಕಿ ಅಗರ್ವಾಲ ಇವರು, ಆಭರಣಗಳ ಕುರಿತು, ಮೂಲಭೂತ ಆಧ್ಯಾತ್ಮಿಕ ಪರಿಕಲ್ಪನೆಯನ್ನು ಕುಶಲಕರ್ಮಿಗಳು ಮತ್ತು ಖರೀದಿದಾರರು ಪಾಲಿಸಿದರೆ, ಆಭರಣದ ನೈಜ ಮೌಲ್ಯವು ಹೆಚ್ಚಾಗುತ್ತದೆ ಮತ್ತು ಮಹಿಳೆಯ ಆಧ್ಯಾತ್ಮಿಕ ಪ್ರಗತಿಗೆ ಲಾಭದಾಯಕವಾಗುತ್ತದೆ ಎಂದು ಹೇಳಿದರು.

 

https://pragati.taskdun.com/dharwad-3-day-music-program-begins/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button