Latest

ಗೋವಾದ ಹೋಟೆಲ್‌ನಲ್ಲಿ ರಷ್ಯಾದ ಮಹಿಳೆಯ ಮೇಲೆ ಅತ್ಯಾಚಾರ: ಇಬ್ಬರು ನೇಪಾಳಿ ಪ್ರಜೆಗಳ  ಬಂಧನ

ಪ್ರಗತಿವಾಹಿನಿ ಸುದ್ದಿ, ಪಣಜಿ: ಗೋವಾಕ್ಕೆ ಭೇಟಿ ನೀಡಿದ ಮೊದಲ ದಿನವೇ ರಷ್ಯಾದ ಪ್ರವಾಸಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿದ ಪ್ರಕರಣ ನಡೆದಿದೆ.

ಈ ಸಂಬಂಧ ನೇಪಾಳ ಮೂಲದ ಇಬ್ಬರು ವ್ಯಕ್ತಿಗಳನ್ನು ಶುಕ್ರವಾರ ಬಂಧಿಸಲಾಗಿದೆ. ನೇಪಾಳದ ಬದ್ರಿಯಾ ನಿವಾಸಿಗಳಾದ ಶಕೀಲ್ ಅನ್ಸಾರಿ @ ಸಲ್ಮಾನ್ (23) ಹಾಗೂ ಸಹೀಮುದ್ದೀನ್ ಅನ್ಸಾರಿ (22) ಅತ್ಯಾಚಾರಗೈದ ಆರೋಪಿಗಳು. ಇವರಿಬ್ಬರೂ ಹೋಟೆಲ್ ನಲ್ಲಿ ರೂಂಬಾಯ್ ಗಳಾಗಿ ಕೆಲಸ ಮಾಡುತ್ತಿದ್ದರು. ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Home add -Advt

37 ವರ್ಷದ ಮಹಿಳೆ ಗುರುವಾರವಷ್ಟೇ ಕಲಂಗೂಟ್‌ನ ಹೋಟೆಲ್‌ಗೆ ಆಗಮಿಸಿದ್ದರು. ಆಕೆ ಬಂದು ಹೋಟೆಲ್ ನಲ್ಲಿ ತಂಗಿದ ದಿನವೇ ಅತ್ಯಾಚಾರ ಮಾಡಲಾಗಿದೆ. ಇಬ್ಬರನ್ನೂ ತನಿಖೆಗೆ ಒಳಪಡಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಕಲಂಗೂಟ್ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ದತ್ತಗುರು ಸಾವಂತ್ ಹೇಳಿದ್ದಾರೆ.

‘ಆಭರಣದಿಂದ ವ್ಯಕ್ತಿಯ ಮೇಲಾಗುವ ಪರಿಣಾಮ’ – ಫ್ರಾನ್ಸ್‌ನಲ್ಲಿ ಸಂಶೋಧನಾ ಪ್ರಬಂಧ ಮಂಡನೆ

Related Articles

Back to top button