Kannada NewsLatest

ಹನುಮಮಾಲಾ ಧಾರಣೆ ಯುವಕರಲ್ಲಿ ಸತ್ಕಾರ್ಯಗಳನ್ನು ಮಾಡಲು ಪ್ರೇರಣೆಯಾಗಲಿದೆ: ಸಚಿವೆ ಶಶಿಕಲಾ ಜೊಲ್ಲೆ

ಪ್ರಗತಿವಾಹಿನಿ ಸುದ್ದಿ; ನಿಪ್ಪಾಣಿ: ಯವಕರ ಮೇಲೆ ಒಳ್ಳೆಯ ಸಂಸ್ಕಾರಗಳ ಪ್ರಭಾವ ಬಿರಬೇಕು. ಅವರು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಬೇಕೆನ್ನುವ ಸದುದ್ದೇಶ ಈ ಹನುಮಮಾಲಾ ಕಾರ್ಯಕ್ರಮಹೊಂದಿದೆ ಎಂದು ಮುಜರಾಯಿ, ಹಜ್, ವಕ್ಫ್ ಖಾತೆ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.

ಈ ಕಾರ್ಯಕ್ರಮ ಯುವಕರಲ್ಲಿ ಸತ್ಕಾಕಾರ್ಯಗಳನ್ನು ಮಾಡಲು ಪ್ರೇರಣೆಯಾಗಲಿದೆ. ಜೊಲ್ಲೆ ಗ್ರುಪ್‌ನ ಉಪಾಧ್ಯಕ್ಷ ಬಸವಪ್ರಸಾದ ಜೊಲ್ಲೆ ಅವರ ಸಾರಥ್ಯದಲ್ಲಿ ಇಂತಹ ಒಂದು ಒಳ್ಳೆಯ ಕಾರ್ಯಕ್ರಮ ನನ್ನ ಕ್ಷೇತ್ರದಲ್ಲಿ ನಡೆಯುತ್ತಿರುವುದು ನನಗೆ ನಿಜಕ್ಕೂ ಹೆಮ್ಮೆ ಇದೆ ಎಂದು ಹೇಳಿದರು.

ನಗರದ ಶ್ರೀ ವಿರುಪಾಕ್ಷಲಿಂಗ ಸಮಾಧಿ ಮಠದಲ್ಲಿ ವಿಶ್ವ ಹಿಂದೂ ಪರಿಷದ ಮತ್ತು ಬಜರಂಗದಳ ಆಯೋಜಿಸಿದ ಹನುಮಮಾಲಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮುಖ್ಯ ವಕ್ತಾರರಾಗಿ ಭಾಗವಹಿಸಿದ ವಿಶ್ವಹಿಂದೂ ಪರಿಷತ್ ಮುಂಬಯಿ ಪ್ರಾಂತ ಪ್ರಮುಖ ಶಂಕರ ಗಾಯಕರ ಮಾತನಾಡಿ, ಸನಾತನದ ಅರ್ಥ ಯಾವುದು ನಾಶವಾಗುವುದಿಲ್ಲವೋ ಅದು ಸನಾತನ. ಇದುವೇ ಹಿಂದೂತ್ವ. ವಿಶ್ವದ ಯಾವುದೇ ಶಕ್ತಿ ಹಿಂದೂತ್ವವನ್ನು ಮುಗಿಸಲು ಸಾಧ್ಯವಿಲ್ಲ. ವೀರ ಸಾವರಕರ ಅಂತಹ ನಮ್ಮ ರಾಷ್ಟ್ರ ಪುರುಷರನ್ನು ಅವಮಾನಿಸುವ ಕೆಲಸ ಮಾಡಲಾಗುತ್ತಿದೆ. ಸ್ವಾತಂತ್ರ‍್ಯ ಸಿಕ್ಕಿದ್ದು ಚರಕದಿಂದ ಅಲ್ಲ. ಅದಕ್ಕಾಗಿ ಲಕ್ಷಾಂತರ ಸ್ವಾತಂತ್ರ್ಯ ವೀರರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಬ್ರಿಟಿಷರು ನಮ್ಮ ದೇಶವನ್ನು ಇಬ್ಬಾಗಳೊಳಿಸಿಲ್ಲ, ದೇಶದ ಮೊದಲ ಪ್ರಧಾನಿ ದೇಶವನ್ನು ಇಬ್ಬಾಗಗೊಳಿಸಿದ್ದಾರೆ. ಇದು ಆತಂಕವಾದಕ್ಕೆ ಕಾರಣವಾಗಿದೆ, ನಾವು ಈ ಆತಂಕವಾದವನ್ನು ಹತ್ತಿಕ್ಕುಬೇಕಾಗಿದೆ. ದೇಶದ ರಕ್ಷಣೆಗಾಗಿ ಛತ್ರಪತಿ ಶಿವಾಜಿ ಮಹಾರಜ, ಭಗತಸಿಂಗ್, ರಾಣಿ ಲಕ್ಷ್ಮೀಬಾಯಿ, ತಾತ್ಯಾ ಟೋಪಿ ಇವರಂತಹ ಆದರ್ಶ ಮಹಾನ ವ್ಯಕ್ತಿಗಳು ಪ್ರತಿಯೊಂದು ಮನೆಯಲ್ಲಿ ಜನ್ಮಕ್ಕೆ ಬರಬೇಕು ಎಂದರು.

ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿದ ಕಣೆರಿಯ ಸಿದ್ಧಗಿರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮಿಜಿ ಮಾತನಾಡಿ, ರಾಷ್ಟç ನಿರ್ಮಾಣ ಕಾರ್ಯವನ್ನು ವಿಶ್ವಹಿಂದೂ ಪರಿಷದ ಮತ್ತು ಬಜರಂಗ ದಲ ಮಾಡುತ್ತಿದೆ. ಯುವಕರಿಗೆ ಸನ್ಮಾರ್ಗದ ದಾರಿಯನ್ನು ತೋರಿಸಿದ ಹನುಮಂತ ಪುರಾತನ ಕಾಲದಿಂದಲೂ ನಮ್ಮ ಆದರ್ಶ. ಗುರುಕುಲದಲ್ಲಿ ನಾವು ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡುತ್ತೇವೆ, ರಾಷ್ಟçಕ್ಕಾಗಿ ಒಳ್ಳೆಯ ಪ್ರಜೆಯನ್ನಾಯಾಗಿಸುತ್ತೇವೆ. ಹಿಂದೂ ಮಹಿಳೆಯರು ತಲೆಯ ಮೇಲೆ ಶರಗ ಹೊರುವ ಪರಿಸ್ಥಿತಿ ಬಂದಿದ್ದು ಮೊಘಲರ ಕಾಲದಿಂದ. ಅದು ಮತ್ತೆ ಮರುಕಳಿಸಬಾರದು.

ನಮ್ಮ ರಕ್ಷಣೆ ನಾವೆ ಮಾಡಿಕೊಳ್ಳಬೇಕು. ನಮ್ಮ ತಲೆಮಾರು ಸುರಕ್ಷಿತ ವಾಗಿರಬೇಕು ಅದಕ್ಕಾಗಿ ಹನುಮ ಮಾಲಾ. ಮಾಲೆ ಧಾರನ ಮಾಡಿದ ನಂತರ ನಮ್ಮ ಅಂತರ ಮನ ಶುದ್ಧ ಮಾಡುತ್ತದೆ. ಯುವಕರಲ್ಲಿ ಒಳ್ಳೆಯ ಆದರ್ಶಗಳನ್ನು ಪರಿಪಾಲನೆ ಮಾಡಲು ಪ್ರೇರೆಪಿಸುತ್ತದೆ. ನಿರ್ವವ್ಯಸನಿಯಾಗಿ, ಬಲಶಾಲಿಯಾಗಿ ಬದುಕಿ. ನಮ್ಮ ದೇಶವನ್ನು ನಾವೆ ಸುರಕ್ಷಿತ ವಾಗಿಡಬೇಕು. ಎಕತೆಯಲ್ಲಿ ಬಲವಿದೆ, ಹಾಗಾಗಿ ಎಲ್ಲ ಹಿಂದೂಗಳು ಒಗ್ಗುಡಬೇಕು. ಜೊಲ್ಲೆ ದಂಪತಿ ಸಮಾಜವನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದ್ದಾರೆ. ಸಂಕಟ ಕಾಲದಲ್ಲಿ ಸಮಾಜಕ್ಕೆ ನೇರವಾಗುತ್ತಿದ್ದಾರೆ ಎಂದು ಶ್ಲಾಘಿಸಿದರು.

ಕಾರ್ಯಕ್ರಮಕ್ಕೆ ದೀಪ ಪ್ರಜ್ವಲನೆಯ ಮೂಲಕ ಚಾಲಣೆ ನೀಡಲಾಯಿತು. ಜೊಲ್ಲೆ ಗ್ರುಪ್‌ನ ಉಪಾಧ್ಯಕ್ಷ ಬಸವಪ್ರಸಾದ ಜೊಲ್ಲೆ ಸ್ವಾಗತಿಸಿದರು. ಬೆಳಿಗ್ಗೆ ೬ ಗಂಟೆಗೆ ಹನುಮಮಾಲಾ ಧಾರಣೆ ಹಾಗೂ ಪವಮಾನ ಯಜ್ಞ ಜರುಗಿತು.

ವಿಜಯಪುರದ ಜ್ಞಾನಯೋಗಾಶ್ರಮದ ಪ. ಪೂ. ಸಿದ್ದೇಶ್ವರ ಸ್ವಾಮಿಜಿ, ಶಿರೋಳದ ಶಂಕರಾರೂಢ ಸ್ವಾಮಿಜಿ, ವಿರುಪಾಕ್ಷಲಿಂಗ ಸಮಾಧಿ ಮಠದ ಪ್ರಾಣಲಿಂಗ ಸ್ವಾಮಿಜಿ, ಸಂಸದ ಅಣ್ಣಾಸಾಹೇಬ ಜೊಲ್ಲೆ, ಶೈಲೇಂದ್ರ ಪಾರೀಖ, ಸಂಜಯ ಅಡಕೆ, ಸುಚಿತ್ರಾ ಕುಲಕರ್ಣಿ, ಜ್ಯೋತಿಪ್ರಸಾದ ಜೊಲ್ಲೆ, ರಾಜು ಬದರಗಡೆ, ಹಾಲಸಿದ್ದನಾಥ ಕಾರ್ಖಾನೆಯ ಉಪಾಧ್ಯಕ್ಷ ಎಮ್. ಪಿ. ಪಾಟೀಲ, ಸಂಚಾಲಕ ವಿಶ್ವನಾಥ ಕಮತೆ, ಅವಿನಾಶ ಪಾಟೀಲ, ರಾಮಗೊಂಡಾ ಪಾಟೀಲ, ವ್ಯವಸ್ಥಾಪಕ ನಿರ್ದೇಶಕ ಶಿವ ಕುಲಕರ್ಣಿ, ನಗರಸಭೆ ಅಧ್ಯಕ್ಷ ಜಯಂತ ಭಾಟಲೆ, ಸ್ಥಾಯಿ ಸಮಿತಿ ಚೇರ್ಮನ್ ರಾಜೇಂದ್ರ ಗುಂಡೆಶಾ ಉಪಸ್ಥಿತರಿದ್ದರು. ವಿಜಯ ರಾವುತ ಧನ್ಯವಾದ ಹೇಳಿದರು, ರಮೇಶ ಪಾಟೀಲ ನಿರೂಪಿಸಿದರು.

ಹನುಮಮಾಲಾ ಧಾರಿಗಳ ಶೊಭಾಯಾತ್ರೆ

ನಾಳೆ ದಿ. 4 ರಂದು ಬೆ. 9 ಗಂಟಗೆ ಶೋಭಾಯಾತ್ರೆ ಮೂಲಕ ಕ್ಷೇತ್ರದ 2500 ಕ್ಕೂ ಅಧಿಕ ಹನುಮ ಮಾಲಾಧಾರಿಗಳು ಸುಕ್ಷೇತ್ರ ಅಂಜನಾದ್ರಿ (ಕಿಷ್ಕಿಂದಾ) ಪರ್ವತಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಶ್ರೀ ರಾಮ ಮಂದಿರದಿಂದ ಪ್ರಾರಂಭಾವಾಗಲಿರುವ ಈ ಶೋಭಾಯಾತ್ರೆಗೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹನುಮಮಾಲಾ ಧಾರಿಗಳ ಈ ಯಾತ್ರೆ ಯಶಸ್ವಿಯಾಗಲಿ ಎಂದು ಸಚಿವೆ ಶಶಿಕಲಾ ಜೊಲ್ಲೆ ಶುಭಹಾರೈಸಿದರು.

ನಿಪ್ಪಾಣಿ ನಗರದ ಶ್ರೀ ವಿರುಪಾಕ್ಷಲಿಂಗ ಸಮಾಧಿ ಮಠದಲ್ಲಿ ವಿಶ್ವ ಹಿಂದೂ ಪರಿಷದ ಮತ್ತು ಬಜಂರಗದಳ ಆಯೋಜಿಸಿದ ಹನುಮಮಾಲಾ ಕಾರ್ಯಕ್ರಮವನ್ನು ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮಿಜಿ, ಸಚಿವೆ ಶಶಿಕಲಾ ಜೊಲ್ಲೆ, ಸಂಸದ ಅಣ್ಣಾಸಾಹೇಬ ಜೊಲ್ಲೆ ದೀಪ ಪ್ರಜ್ವಲನೆ ಮಾಡುವ ಮೂಲಕ ಉದ್ಘಾಟಿಸಿದರು.

ದೇವಾಲಯಗಳಲ್ಲಿ ಮೊಬೈಲ್ ಫೋನ್ ನಿಷೇಧ

https://pragati.taskdun.com/tamilnadutemplemobile-banmadras-highcourt/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button