Kannada NewsKarnataka News

ನಮ್ಮನ್ನು ಕೆಣಕೋಕೆ ಬರಬೇಡಿ, ನೀವೇ ಸುಟ್ಕೊಂಡು ಹೋಗ್ತೀರಿ – ಘರ್ಜಿಸಿದ ಲಕ್ಷ್ಮೀ ಹೆಬ್ಬಾಳಕರ್

 

 

 

 

https://fb.watch/hdDFa9ZFNc/?mibextid=RUbZ1f

https://fb.watch/hdDFa9ZFNc/?mibextid=RUbZ1f

 

ಪ್ರಗತಿವಾಹಿನಿ ಸುದ್ದಿ, ಬೈಲಹೊಂಗಲ – ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಬೈಲಹೊಂಗಲ ನೆಲದಲ್ಲಿ ನಿಂತು ಘರ್ಜಿಸಿದ್ದಾರೆ.

ನಮ್ಮನ್ನು ಕೆಣಕೋಕೆ ಹೋಗಬೇಡಿ, ಕೆಲವು ಜನ ಬರ್ತಾರೆ ಕೆಣಕುತ್ತಾರೆ. ಆದರೆ ನಂತರ ತಾವೇ ಸುಟ್ಟುಕೊಂಡು ಹೋಗ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ.

ಬೈಲಹೊಂಗಲದಲ್ಲಿ ಸೋಮವಾರ ನಡೆದ ಪಂಚಮಸಾಲಿ ಸಮಾವೇಶದಲ್ಲಿ ಮಾತನಾಡಿದ ಅವರು, ಪಂಚಮಸಾಲಿ ಮೀಸಲಾತಿ ವಿಷಯ ಮಾತನಾಡುತ್ತ, ತಮ್ಮನ್ನು ಕೆಣಕುತ್ತಿರುವವರಿಗೂ ನೇರವಾಗಿ ಎಚ್ಚರಿಕೆ ನೀಡಿದರು.

 

ಬೇರೆ ಸಮಾಜದವರಿಗೆ ಮೀಸಲಾತಿ ಸಿಕ್ಕಿದ್ದಕ್ಕೆ ಖುಷಿ ಪಡೋಣ. ಬೇರೆ ಸಮಾಜದವರು ನನ್ನನ್ನು ಆಯ್ಕೆ ಮಾಡಿ ಬೆಂಗಳೂರಿಗೆ ಕಳಿಸಿದ್ದಾರೆ. ರಾಣಿ ಚನ್ನಮ್ಮನ ಜೊತೆ ಸಂಗೊಳ್ಳಿ ರಾಯಣ್ಣ ಇದ್ದಂತೆ ಪಂಚಮಸಾಲಿ ಸಮಾಜ ಬೇರೆ ಸಮಾಜದ ಜೊತೆ ಇರಬೇಕು. ಬಸವಣ್ಣನವರೇ 12ನೇ ಶತಮಾನದಲ್ಲಿ ಜಾತೀಯತೆ ಹೋಗಲಾಡಿಸಲು ಕರೆ ನೀಡಿದರು. ನಮ್ಮ ಗುರಿ ಒಂದೇ, ಇಲ್ಲವಾದಲ್ಲಿ ನಮಗೆ ಉಳಿಗಾಲವಿಲ್ಲ. ನಮ್ಮನ್ನು ಕೆಣಕೋಕೆ ಹೋಗಬೇಡಿ, ಕೆಲವು ಜನ ಬರ್ತಾರೆ ಕೆಣಕುತ್ತಾರೆ. ತಾವೇ ಸುಟ್ಟುಕೊಂಡು ಹೋಗ್ತಾರೆ ಎಂದು ಹೆಬ್ಬಾಳಕರ್ ಹೇಳಿದರು.

ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ, ಬಂಡವಾಳವಿಲ್ಲದ ಬಡಾಯಿಗಳು ರಾಜಕೀಯ ಮಾತನಾಡಬೇಡಿ ಎನ್ನುತ್ತಿದ್ದಾರೆ. 160 ಕ್ಷೇತ್ರದಲ್ಲಿ ಲಿಂಗಾಯತರಿದ್ದಾರ ಮನಸ್ಸು ಮಾಡಿದರೆ 80 ಕ್ಷೇತ್ರದಲ್ಲಿ ಗೆಲಬಹುದು. ಆದರೆ ನಮ್ಮ ನಡುವೆ ಬಂಕಿ ಹಚ್ಚುವ ಕೆಲಸ ನಡೆಯುತ್ತಿದೆ ಎಂದು ಎಚ್ಚರಿಸಿದರು.

 

ಪಂಚಮಸಾಲಿ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಮಾತನಾಡಿ, ಮೀಸಲಾತಿ ನೀಡುವುದಾಗಿ ಬೊಮ್ಮಾಯಿ ಭರವಸೆ ನೀಡಿದ್ದಾರೆ. ಮಾತಿಗೆ ತಪ್ಪಿದರೆ ಸುವರ್ಣ ವಿಧಾನಸೌಧವನ್ನು ಕಬ್ಜಾ ತೆಗೆದುಕೊಲ್ಳುತ್ತೇವೆ. ಎಲ್ಲ ಮಹಡಿಗಳಲ್ಲಿ ನಾವೇ ಕೂಡ್ರುತ್ತೇವೆ ಎಂದು ಎಚ್ಚರಿಸಿದರು. ಪಂಚಮಸಾಲಿ ಮೀಸಲಾತಿ ಬೇಡ ಎಂದಿರುವ ನಟ ಚೇತನ್ ಸಿನೇಮಾ ನೋಡಬೇಡಿ. ಆತ ಭಾರತದ ಪ್ರಜೆಯೇ ಅಲ್ಲ ಎಂದು ಹೇಳಿದರು.

ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ ಯತ್ನಾಳ , ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ, ಮಾಜಿ ಸಚಿವರಾದ ವಿನಯ ಕುಲಕರ್ಣಿ, ಎ.ಬಿ.ಪಾಟೀಲ, ಶಶಿಕಾಂತ ಪಾಟೀಲ ಸೇರಿದಂತೆ ಹಲವರು ಮಾತನಾಡಿದರು.

ನಿಜವಾದ ಪ್ರಗತಿವಾಹಿನಿ ಸುದ್ದಿ- ಮಹಾರಾಷ್ಟ್ರ ಸಚಿವರಿಗೆ ಗಡಿಯಲ್ಲೇ ತಡೆ: ಜಿಲ್ಲಾಧಿಕಾರಿ ಆದೇಶ

https://pragati.taskdun.com/maharashtra-minister-stopped-at-border-collector-orders/

SSLC ಪರೀಕ್ಷೆ: ಅಂತಿಮ ವೇಳಾಪಟ್ಟಿ ಪ್ರಕಟ

https://pragati.taskdun.com/sslc-examfinal-time-tableannounce/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button