Belagavi NewsBelgaum NewsKannada NewsKarnataka NewsLatest

*ಕರ್ನಾಟಕ ಮಹಾರಾಷ್ಟ್ರ ಗಡಿವಿವಾದ: ಎಂಇಎಸ್ ನಿಂದ ಲಕ್ಷ ಸಹಿ ಸಂಗ್ರಹ ಅಭಿಯಾನ*

ಪ್ರಗತಿವಾಹಿನಿ ಸುದ್ದಿ: ಖಾನಾಪುರ : ಪಟ್ಟಣದಲ್ಲಿ ಮಂಗಳವಾರ ನಡೆದ ಖಾನಾಪುರ ತಾಲೂಕು ಮಹಾರಾಷ್ಟ್ರ ಏಕೀಕರಣ ಸಮಿತಿಯ ಸಭೆಯಲ್ಲಿ ಮಹಾರಾಷ್ಟ್ರ–ಕರ್ನಾಟಕ ಗಡಿವಿವಾದಕ್ಕೆ ಸಂಬಂಧಿಸಿದ ಪ್ರಕರಣ ದಾಖಲಾಗಿ 22 ವರ್ಷ ಕಳೆದರೂ ಈ ಪ್ರಕರಣದ ವಿಚಾರಣೆ ನಡೆದು ತೀರ್ಪು ಹೊರಬಂದಿಲ್ಲ. ಆದ್ದರಿಂದ ಈ ಪ್ರಕರಣದ ಶೀಘ್ರ ಹಾಗೂ ತ್ವರಿತ ವಿಚಾರಣೆ ನಡೆಯಬೇಕೆಂದು ಸರ್ವೋಚ್ಚ ನ್ಯಾಯಾಲಯವನ್ನು ಆಗ್ರಹಿಸಲು ಎಂಇಎಸ್ ವತಿಯಿಂದ ಮುಖ್ಯ ನ್ಯಾಯಮೂರ್ತಿಗಳಿಗೆ ಮನವಿ ಸಲ್ಲಿಸಲು ಮತ್ತು ಗಡಿಭಾಗದ ಮರಾಠಿ ಭಾಷಿಕರ ಒಂದು ಲಕ್ಷ ಸಹಿಗಳನ್ನು ಸಂಗ್ರಹಿಸಲು ಸರ್ವಾನುಮತದಿಂದ ನಿರ್ಧರಿಸಲಾಯಿತು.

Home add -Advt

ಸಭೆ ಉದ್ದೇಶಿಸಿ ಮಾತನಾಡಿದ ಖಾನಾಪುರ ತಾಲೂಕು ಮಹಾರಾಷ್ಟ್ರ ಏಕೀಕರಣ ಸಮಿತಿಯ ಅಧ್ಯಕ್ಷ ಗೋಪಾಳ ದೇಸಾಯಿ, “ಗಡಿಭಾಗದ ಮರಾಠಿ ಭಾಷಿಕರ ನ್ಯಾಯಸಮ್ಮತ ಬೇಡಿಕೆ ಈಡೇರಿಕೆಗಾಗಿ ಎಂಇಎಸ್ ಈ ಸಹಿ ಸಂಗ್ರಹ ಅಭಿಯಾನವನ್ನು ಆಯೋಜಿಸಿದೆ‌. ಇದನ್ನು ಪ್ರಜಾಪ್ರಭುತ್ವದ ಮಾರ್ಗದಲ್ಲಿ ನಡೆಸಲಾಗುವುದು. ಗಡಿಭಾಗದ ಪ್ರತಿಯೊಬ್ಬ ಮರಾಠಿ ಭಾಷಿಕರು ಗಡಿ ತೀರ್ಪು ಮರಾಠಿಗರ ಪರವಾಗಿ ಬರುವಂತೆ ಆಗ್ರಹಿಸಲು ಈ ಅಭಿಯಾನದಲ್ಲಿ ಪಾಲ್ಗೊಳ್ಖಬೇಕು. ಬೆಳಗಾವಿ, ನಿಪ್ಪಾಣಿ, ಕಾರವಾರ, ಭಾಲ್ಕಿ, ಬೀದರ ಭಾಗದ ಎಲ್ಲ ಮರಾಠಿಗರು ಸ್ವಯಂಪ್ರೇರಿತರಾಗಿ ಸಹಿ ಮಾಡುವ ಮೂಲಕ ಮರಾಠಿ ಭಾಷಿಕರು ವಾಸಿಸುವ ಭಾಗವನ್ನು ಮಹಾರಾಷ್ಟ್ರ ರಾಜ್ಯಕ್ಕೆ ಸೇರುವ ಸಲುವಾಗಿ ತಮ್ಮ ಬೆಂಬಲವನ್ನು ವ್ಯಕ್ತಪಡಿಸಬೇಕು” ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ದಿಗಂಬರ ಪಾಟೀಲ ಸೇರಿದಂತೆ ಎಂಇಎಸ್ ಮುಖಂಡರು, ಕಾರ್ಯಕರ್ತರು ಇದ್ದರು.

Related Articles

Back to top button