Karnataka News

ಪೇರಳೆ ಹಣ್ಣಿನ ಈ 9 ಅಮೂಲ್ಯ ಪ್ರಯೋಜನಗಳು ಗೊತ್ತೆ ?

ಪ್ರಗತಿ ವಾಹಿನಿ ಹೆಲ್ತ್ ಟಿಪ್ಸ್

ಅತ್ಯಂತ ರುಚಿಕರವಾಗಿದ್ದರೂ ಬಹುಕಾಲ ನಿರ್ಲಕ್ಷಿಸಲ್ಪಟ್ಟ ಹಣ್ಣು ಪೇರಳೆ. ಇತ್ತೀಚಿನ ವರ್ಷಗಳಲ್ಲಿ ಇದರ ಆರೋಗ್ಯದ ಪ್ರಯೋಜನಗಳು ಹೆಚ್ಚು ಬೆಳಕಿಗೆ ಬರುತ್ತಿದ್ದಂತೆ ಮೌಲ್ಯವೂ ಹೆಚ್ಚುತ್ತಿದೆ. ವಾಸ್ತವದಲ್ಲಿ ಬಹಳ ಆರೋಗ್ಯಕರ ಹಣ್ಣು ಎಂದು ಬಣ್ಣಿಸಲಾಗುವ ಸೇಬು, ದ್ರಾಕ್ಷಿ, ಬಾಳೆ ಹಣ್ಣಿಗಿಂತಲೂ ಪೇರಳೆ ಹಣ್ಣಿನ ಆರೋಗ್ಯದ ಪ್ರಯೋಜನಗಳು ಒಂದು ತೂಕ ಹೆಚ್ಚೇ ಎನ್ನಬಹುದು.

ಇದು ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒಳಗೊಂಡಿರುವ ಹಣ್ಣಾಗಿದೆ. ಇದನ್ನು ಬಡವರ ಸೇಬು ಎಂದು ಕರೆಯುತ್ತಾರೆ. ಇದನ್ನು ಹಲವು ಕಡೆ ಚೇಪೆಕಾಯಿ ಎಂತಲೂ ಕರೆಯುತ್ತಾರೆ. ಇದು ವಿಟಮಿನ್ ಸಿ, ಲೈಕೋಪೀನ್, ಫೈಬರ್ ಮತ್ತು ಆಂಟಿಆಕ್ಸಿಡೆಂಟ್‍ಗಳಿಂದ ತುಂಬಿರುತ್ತದೆ. ಈ ಪೋಷಕಾಂಶಗಳು ಮಧುಮೇಹವನ್ನು ನಿರ್ವಹಿಸಲು ನೆರವಾಗುತ್ತದೆ ಮತ್ತು ಜೀರ್ಣಕಾರಿ ಆರೋಗ್ಯವನ್ನು ಉತ್ತೇಜಿಸುತ್ತದೆ.

ಪೇರಳೆ ಹಣ್ಣಿನ ಪ್ರಯೋಜನಗಳು
1) ಮಧುಮೇಹ ನಿಯಂತ್ರಣಕ್ಕೆ ಸಹಕಾರಿ
ಪೇರಳೆ ಹಣ್ಣು ಗ್ಲುಕೋಸ್ ಅನ್ನು ರಕ್ತಕ್ಕೆ ಬಿಟ್ಟುಕೊಡುವುದು ನಿಧಾನ. ಪೇರಳೆ ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ ಹೊಂದಿದೆ. ಹಾಗಾಗಿ ಮಧುಮೇಹ ನಿಯಂತ್ರಣಕ್ಕೆ ಪೇರಳೆ ಸಹಕಾರಿಯಾಗಿದೆ. ಇದರಲ್ಲಿರುವ ಫೈಬರ್ ಅಂಶವು ಮಧುಮೇಹಿಗಳಲ್ಲಿ ಉಂಟಾಗುವ ಮಲಬದ್ಧತೆಯನ್ನು ನಿವಾರಿಸಲು ಸಹಕಾರಿ.

 

2) ಜೀರ್ಣ ಕ್ರಿಯೆಗೆ ಸಹಕಾರಿ
ಪೇರಳೆ ಹಣ್ಣಿನಲ್ಲಿರುವ ಫೈಬರ್ (ನಾರಿನ ಅಂಶ) ಜೀರ್ಣ ಕ್ರಿಯೆಯನ್ನು ಸುಧಾರಿಸುತ್ತದೆ. ಕರುಳಿನಲ್ಲಿ ಆಹಾರವು ಸುಗಮವಾಗಿ ಹೊರಹೋಗಲು ಸಹಾಯ ಮಾಡುತ್ತದೆ.

3) ಕಣ್ಣಿನ ರಕ್ಷಣೆಗೆ ಪೂರಕ
ಪೇರಳೆ ಹಣ್ಣಿನಲ್ಲಿರುವ ವಿಟಮಿನ್ ಎ ಜೀವಸತ್ವವು ದೃಷ್ಟಿಯನ್ನು ಉತ್ತಮಗೊಳಿಸಲು ಸಹಾಯ ಒದಗಿಸುತ್ತದೆ. ಪೇರಳೆಯ ನಿತ್ಯ ಸೇವನೆಯು ಮಂದ ದೃಷ್ಟಿಯನ್ನು ದೂರಮಾಡಬಲ್ಲದು.

4) ಕ್ಯಾನ್ಸರ್ ತಡೆಗೆ ಸಹಕಾರಿ
ವಿಟಮಿನ್ ಸಿ, ಪಾಲಿಫಿನಾಲ್, ಲೈಕೋಪಿನ್ ಮೊದಲಾದ ಅಂಶಗಳು ಪೇರಲೆಯಲ್ಲಿ ಇರುವುದರಿಂದ ಇದು ಕ್ಯಾನ್ಸರ್ ತಡೆಯಲು ಸಹಕಾರಿಯಾಗುತ್ತದೆ.

5) ರೋಗ ನಿರೋಧಕ ಶಕ್ತಿ
ಪೇರಲೆ ಹಣ್ಣಿನಲ್ಲಿ ವಿಟಮಿನ್ ಸಿ ಜೀವಸತ್ವ ಸಮೃದ್ಧವಾಗಿದೆ. ಹಾಗಾಗಿ ಸಾಮಾನ್ಯವಾದ ಸೋಂಕುಗಳು, ರೋಗಣುಗಳ ವಿರುದ್ಧ ಹೋರಾಡಲು ಸಹಕಾರಿ.

6) ಹೃದಯದ ಆರೋಗ್ಯಕ್ಕೆ ಒಳ್ಳೆಯದು
ಪೇರಳೆ ಹಣ್ಣಿನಲ್ಲಿರುವ ಫೈಬರ್ ಅಂಶವು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವುದಲ್ಲದೇ ಪೇರಳೆಯಲ್ಲಿ ಹೆಚ್ಚಿನ ಪ್ರಮಾಣದ ಸೋಡಿಯಂ ಮತ್ತು ಪೋಟ್ಯಾಶಿಯಮ್ ಅಂಶವಿದೆ. ಇದು ರಕ್ತದ ಒತ್ತಡವನ್ನು ಸಮತೋಲನದಲ್ಲಿ ಇರಿಸುವುದರಿಂದ ಹೃದಯದ ಆರೋಗ್ಯಕ್ಕೆ ಒಳ್ಳೆಯದು.

7) ಮಲಬದ್ಧತೆ ನಿವಾರಣೆ
ಪೇರಲೆ ಹಣ್ಣಿನಲ್ಲಿರುವ ಹೆಚ್ಚಿನ ಪ್ರಮಾಣದ ನಾರಿನ ಅಂಶವು ಆಹರವನ್ನು ಸಲುಭವಾಗಿ ಜೀರ್ಣವಾಗಲು ಸಹಾಯ ಮಾಡುತ್ತದೆ. ಕರುಳಿನ ಚಲನೆಗೆ ಸಹಾಯ ಮಾಡುವ ಮೂಲಕ ಮಲಬದ್ಧತೆಯ ಅಪಾಯವನ್ನು ಕಡಿಮೆ ಮಾಡುತ್ತದೆ.

8) ಶೀತ ಕೆಮ್ಮು ನಿವಾರಣೆ

ಪೇರಳೆ ಹಣ್ಣಿನಲ್ಲಿ ವಿಟಮಿನ್ ಸಿ ಜೀವಸತ್ವ ಹೆಚ್ಚಿರುವುದರಿಂದ ಪೇರಳೆ ಹಣ್ಣಿನ ನಿಯಮಿತ ಸೇವನೆಯು ಶೀತ, ಜ್ವರ, ಕೆಮ್ಮು ನಿವಾರಣೆಗೆ ಸಹಕಾರಿಯಾಗಿದೆ.

9) ಚರ್ಮದ ಆರೋಗ್ಯಕ್ಕೆ ಪೂರಕ
ಪೇರಳೆ ಹಣ್ಣಿನಲ್ಲಿರುವ ವಿಟಮಿನ್ ಎ, ಸಿ, ಮತ್ತು ಕ್ಯಾರೋಟಿನ್, ಲೈಕೋಪಿನ್ ಅಂಶಗಳು ಚರ್ಮವನ್ನು ಸುಕ್ಕುಗಳಿಂದ ತಡೆಯಲು ಸಹಕಾರಿಯಾಗಿದೆ.

ಪೇರಳೆಯ ಮೂಲ
ಪೇರಳೆ ಹಣ್ಣು ಮಿರ್ಟೇಸಿ ಕುಟುಂಬಕ್ಕೆ ಸೇರಿದ್ದು ಇದನ್ನು ವೈಜ್ಞಾನಿಕವಾಗಿ ಪ್ಸಿಡಿಯಮ್ ಗುಜಾವಾ ಎಂದು ಕರೆಯಲಾಗುತ್ತದೆ. ಈ ಉಷ್ಣವಲಯದ ಹಣ್ಣು ಮಧ್ಯ ಅಮೇರಿಕಾ ಮೂಲದ ಹಣ್ಣಾಗಿದ್ದು ಇಂದು ಹಲವಾರು ದೇಶಗಳಲ್ಲಿ ಇದನ್ನು ಬೆಳೆಯಲಾಗುತ್ತಿದೆ. ಪೇರಳೆಹಣ್ಣು ಹಸಿರು ಅಥವಾ ತಿಳಿ ಹಳದಿ ಬಣ್ಣವನ್ನು ಹೊಂದಿದ್ದು ವೃತ್ತಾಕಾರದಲ್ಲಿರುತ್ತದೆ. ಇದರ ಒಳಗೆ ಬಿಳಿ ಅಥವಾ ಗುಲಾಬಿ ಬಣ್ಣದಿಂದ ಕೂಡಿದ ತಿರುಳಿರುತ್ತದೆ. ತಿರುಳಿನ ಸುತ್ತ ಸಣ್ಣ ಸಣ್ಣ ಬೀಜಗಳಿರುತ್ತದೆ. ಪೇರಲವು ಮ್ಯಾಂಗನೀಸ್‍ನಲ್ಲಿ ಸಮೃದ್ಧವಾಗಿದೆ. ಇದು ನಾವು ಸೇವಿಸುವ ಆಹಾರದಿಂದ ಇತರ ಪ್ರಮುಖ ಪೋಷಕಾಂಶಗಳನ್ನು ಹೀರಿಕೊಳ್ಳಲು ದೇಹಕ್ಕೆ ಸಹಾಯ ಮಾಡುತ್ತದೆ. ಅಲ್ಲದೆ ಇದು ಸುಮಾರು 80% ನಷ್ಟು ನೀರಿನಾಂಶವನ್ನು ಒಳಗೊಂಡಿರುವುದರಿಂದ ಇದು ನಿಮ್ಮ ಚರ್ಮವನ್ನು ಹೈಡ್ರೇಟ್ ಆಗಿ ಇರಿಸಲು ಸಹಾಯ ಮಾಡುತ್ತದೆ

 

ಪೇರಳೆ ಹಣ್ಣಿನ ಇತರ ಪ್ರಯೋಜನಗಳು
ಪೇರಳೆ ಹಣ್ಣು ಪೋಷಕಾಂಶಗಳ ಕಣಜವಾಗಿದೆ. ಪೇರಲವು 21% ವಿಟಮಿನ್ ಎ ಅನ್ನು ಹೊಂದಿರುತ್ತದೆ ಇದು ನಿಮ್ಮ ಚರ್ಮವನ್ನು ಹೊಳಪು ಮಾಡಲು ಮತ್ತು ಲೋಳೆಯ ಪೆÇರೆಗಳನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಈ ಹಣ್ಣಿನಲ್ಲಿ 20% ಫೆÇೀಲೇಟ್ ಇದೆ. ಇದು ಗರ್ಭಿಣಿ ಮಹಿಳೆಯರ ಆರೋಗ್ಯಕ್ಕೆ ಸಹಕಾರಿಯಾಗಿದೆ. ಪೇರಲದಲ್ಲಿರುವ ಲೈಕೋಪೀನ್ ಚರ್ಮವನ್ನು ನೇರಳಾತೀತ ಕಿರಣಗಳಿಂದ ರಕ್ಷಿಸುತ್ತದೆ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ಅನ್ನು ತಡೆಯುತ್ತದೆ. ಪೇರಲದಲ್ಲಿ ಬಾಳೆಹಣ್ಣುಗಳಿಗಿಂತ ಹೆಚ್ಚು ಪೆÇಟ್ಯಾಸಿಯಮ್ ಇದೆ ಮತ್ತು ಇದು ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

 

ಏನೇನಿವೆ ಪೇರಳೆಯಲ್ಲಿ
ಕ್ಯಾಲೋರಿಗಳು 112(469 ಞಎ) ಕಾರ್ಬೋಹೈಡ್ರೇಟ್, 23.6 ಗ್ರಾಂ ಫೈಬರ್ 8.9 ಗ್ರಾಂ ಸಕ್ಕರೆ, 14.7 ಗ್ರಾಂ ಪೆÇ್ರೀಟೀನ್ ಮತ್ತು ಅಮೈನೋ ಆಮ್ಲಗಳು, ಪೆÇ್ರೀಟೀನ್ 4.2 ಗ್ರಾಂ.

ಜೀವಸತ್ವಗಳು : ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಇ (ಆಲ್ಫಾ ಟೊಕೊಫೆರಾಲ್), ವಿಟಮಿನ್ ಕೆ, ಎಂಸಿಜಿಥಯಾಮಿನ್, ಬೋಫ್ಲಾವಿನ್, ನಿಯಾಸಿನ್, ವಿಟಮಿನ್ ಬಿ6, ಫೆÇೀಲೇಟ್, ವಿಟಮಿನ್ ಬಿ12 ಪಾಂಟೊಥೆನಿಕ್ ಆಮ್ಲ, ಕೋಲೀನ್

ಮಿನರಲ್ಸ್
ಕ್ಯಾಲ್ಸಿಯಂ 29.7 ಮಿಗ್ರಾಂ, ಕಬ್ಬಿಣ 0.4 ಮಿಗ್ರಾಂ, ಮೆಗ್ನೀಸಿಯಮ್ 36.3 ಮಿಗ್ರಾಂ, ರಂಜಕ 66.0 ಮಿಗ್ರಾಂ, ಪೆÇಟ್ಯಾಸಿಯಮ್ 688 ಮಿಗ್ರಾಂ, ಸೋಡಿಯಂ 3.3 ಮಿಗ್ರಾಂ, ಸತು 0.4 ಮಿಗ್ರಾಂ, ತಾಮ್ರ 0.4 ಮಿಗ್ರಾಂ, ಮ್ಯಾಂಗನೀಸ್ 0.2 ಮಿಗ್ರಾಂ, ಸೆಲೆನಿಯಮ್ 1.0

ಹಣ್ಣುಗಳಲ್ಲಿ ವಿಟಮಿನ್-ಸಿ ಮತ್ತು ಕಬ್ಬಿಣಾಂಶ ಅಡಗಿದೆ. ಇವು ಶೀತ ಮತ್ತು ವೈರಲ್ ಸೋಂಕುಗಳ ವಿರುದ್ಧ ಹೋರಾಡುತ್ತದೆ. ಅಲ್ಲದೆ ಉಸಿರಾಟ, ಗಂಟಲು ಮತ್ತು ಶ್ವಾಸಕೋಶಗಳ ಸಮಸ್ಯೆಗಳನ್ನು ನಿವಾರಿಸುತ್ತದೆ ಎಂದು ಸಂಶೋಧನೆಗಳು ತಿಳಿಸಿವೆ

 

*ಐಟಿ ಕಂಪನಿಗಳು ನೀಡುವ ಕೊಡುಗೆಯಿಂದ ಜನಸಾಮಾನ್ಯರಿಗೆ ಅನುಕೂಲವಾಗಬೇಕು: ಸಿಎಂ.ಬೊಮ್ಮಾಯಿ*

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button