
ಪ್ರಗತಿವಾಹಿನಿ ಸುದ್ದಿ, ದೆಹಲಿ: ಹೊಸದಾಗಿ ಚುನಾಯಿತರಾದ ಇಬ್ಬರು ಕಾಂಗ್ರೆಸ್ ಕೌನ್ಸಿಲರ್‌ಗಳು ಮತ್ತು ದೆಹಲಿ ಘಟಕದ ಉಪಾಧ್ಯಕ್ಷ ಅಲಿ ಮೆಹದಿ ಶುಕ್ರವಾರ ಎಎಪಿಗೆ ಸೇರಿದ ಕೆಲವೇ ಗಂಟೆಗಳ ನಂತರ ಮತ್ತೆ ಕಾಂಗ್ರೆಸ್ ಗೆ ಸೇರಿಕೊಂಡಿದ್ದಾರೆ.
ಅಲಿ ಮೆಹದಿ ಅವರು ಕೈ ಜೋಡಿಸಿ ಕಾಂಗ್ರೆಸ್ ನಾಯಕತ್ವಕ್ಕೆ ಕ್ಷಮೆಯಾಚಿಸಿದರು ಮತ್ತು ಇದು ತಪ್ಪಾಗಿದೆ ಎಂದು ಹೇಳಿದರು. ಈ ಮೂವರೂ ಕಾಂಗ್ರೆಸ್‌ನಲ್ಲಿರುವುದಾಗಿ ಹೇಳಿಕೊಂಡಿರುವ ಅಲಿ ಮೆಹದಿ, “ನನಗೆ ಯಾವುದೇ ಹುದ್ದೆ ಬೇಡ, ನಾನು ರಾಹುಲ್ ಗಾಂಧಿಯವರ ಕಾರ್ಯಕರ್ತನಾಗಿಯೇ ಉಳಿಯುತ್ತೇನೆ. ನಾನು ದೊಡ್ಡ ತಪ್ಪನ್ನು ಮಾಡಿದ್ದೇನೆ, ಅದಕ್ಕಾಗಿ ನಾನು ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು ನನ್ನ ಪ್ರದೇಶದ ಎಲ್ಲ ಜನರ ಕ್ಷಮೆಯಾಚಿಸುತ್ತೇನೆ,” ಎಂದು ಕೈಜೋಡಿಸಿ ಹೇಳಿಕೊಂಡಿದ್ದಾರೆ.
ಮೆಹದಿ ಮತ್ತು ಕೌನ್ಸಿಲರ್‌ಗಳ ಅನಿರೀಕ್ಷಿತ ಪಕ್ಷಾಂತರ ವಿರೋಧಿಸಿ ಮುಸ್ತಫಾಬಾದ್ ನಿವಾಸಿಗಳು ಪ್ರತಿಭಟನೆ ನಡೆಸಿದ ನಂತರ ಈ ಬೆಳವಣಿಗೆಯಾಗಿದೆ.
ಈ ಮೂವರೂ ಕಾಂಗ್ರೆಸ್ ನಿಂದ ಆಪ್ ನತ್ತ ಜಿಗಿಯುತ್ತಿದ್ದಂತೆ ಆಪ್ ನಾಯಕ ದುರ್ಗೇಶ್ ಪಾಠಕ್ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಾಡಿದ ಕೆಲಸವನ್ನು ನೋಡಿದ ನಂತರ ಕಾಂಗ್ರೆಸ್ ನಾಯಕರು ಆಪ್ ಸೇರಲು ನಿರ್ಧರಿಸಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು.
“ನಾವು ದೆಹಲಿಯ ಸುಧಾರಣೆಗಾಗಿ ಕೆಲಸ ಮಾಡಲು ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಆಹ್ವಾನ ನೀಡಿದ್ದೇವೆ. ದೆಹಲಿ ಕಾಂಗ್ರೆಸ್ ಉಪಾಧ್ಯಕ್ಷ ಅಲಿ ಮೆಹದಿ ಮತ್ತು ಪಕ್ಷದ ಹೊಸದಾಗಿ ಆಯ್ಕೆಯಾದ ಇಬ್ಬರು ಕೌನ್ಸಿಲರ್‌ಗಳಾದ ಸಬಿಲಾ ಬೇಗಂ ಮತ್ತು ನಾಜಿಯಾ ಖಾತೂನ್ ಅವರು ಎಎಪಿಗೆ ಸೇರುತ್ತಿದ್ದಾರೆ ಎಂದು ಘೋಷಿಸಲು ನನಗೆ ತುಂಬಾ ಸಂತೋಷವಾಗಿದೆ” ಎಂದು ಪಾಠಕ್ ಹೇಳಿದ್ದರು.
ಆದರೆ ಪಾಠಕ್ ಸುದ್ದಿಗೋಷ್ಠಿ ನಡೆದ ಕೆಲವೇ ಗಂಟೆಗಳಲ್ಲಿ ಜಿಗಿದಾಟಕ್ಕೆ ಜನಪ್ರತಿಭಟನೆ ವ್ಯಕ್ತವಾಗುತ್ತಲೇ ಈ ಮೂವರೂ ಮತ್ತೆ ‘ಕೈ’ ಪಾದದ ಮೊರೆ ಹೋಗುವ ಮೂಲಕ ತಮ್ಮನ್ನುಅದ್ದೂರಿಯಾಗಿ ಬರಮಾಡಿಕೊಂಡಿದ್ದ ಆಪ್ ಗೆ ಬೆಪ್ಪಾಗಿಸಿದ್ದಾರೆ.
ಸೇನೆಯಲ್ಲಿ ಮಹಿಳಾ ಸಿಬ್ಬಂದಿ ಬಡ್ತಿ ವಿಚಾರಕ್ಕೆ ಸುಪ್ರೀಂ ಅಸಮಾಧಾನ