LatestUncategorized

*ಅವತ್ತು ಅವರ ಮುಂದೆಯೇ 15 ಕಾಂಗ್ರೆಸ್ ಶಾಸಕರನ್ನು ಕರೆದೊಯ್ದೆ; ಅವರಿಂದ ಏನೂ ಮಾಡಲು ಸಾಧ್ಯವಾಗ್ಲಿಲ್ಲ; ಡಿಕೆಶಿಗೆ ತಿರುಗೇಟು ನೀಡಿದ ಸಚಿವ ಆರ್.ಅಶೋಕ್*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು; ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಪಕ್ಷಾಂತರ ಪರ್ವ ಆರಂಭವಾಗಿದ್ದು, ಆಡಳಿತ ಹಾಗೂ ವಿಪಕ್ಷ ನಾಯಕರ ನಡುವೆ ಆರೋಪ-ಪ್ರತ್ಯಾರೋಪ ಸವಾಲು-ಪ್ರತಿ ಸವಾಲುಗಳು ಜೋರಾಗಿವೆ. ಕಾಂಗ್ರೆಸ್ ನ ಹಲವು ಮುಖಂಡರು ಬಿಜೆಪಿಗೆ ಸೇರಲಿದ್ದಾರೆ ಎಂಬ ಸಚಿವ ಆರ್.ಅಶೋಕ್ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟಾಂಗ್ ನೀಡಿದ್ದರು. ಆರ್.ಅಶೋಕ್, ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಇವರು ಪಕ್ಷ ಬಿಟ್ಟು ಹೋದರೆ ಅವರು ಬರ್ತಾರೆ, ಅವರು ಹೋದರೆ ಇನ್ನೊಬ್ಬರು ಬರ್ತಾರೆ. ನಾನು ಅಶೋಕ್ ತರ ಸುಳ್ಳು ಹೇಳಲು ಹೋಗಲ್ಲ ಸರ್ಪ್ರೈಸ್ ಕೊಡ್ತೀನಿ. ಯಾರ್ಯಾರು ಕಾಂಗ್ರೆಸ್ ಗೆ ಬರ್ತಾರೆ ಎಂಬುದು ಮುಂದೆ ಗೊತ್ತಾಗುತ್ತೆ ಎಂದಿದ್ದರು.

ಇದೀಗ ಡಿ.ಕೆ.ಶಿವಕುಮಾರ್ ಮಾತಿಗೆ ತಿರುಗೇಟು ನೀಡಿರುವ ಕಂದಾಯ ಸಚಿವ ಆರ್.ಅಶೋಕ್, ಈ ಹಿಂದೆಯೂ ಡಿ.ಕೆ.ಶಿವಕುಮಾರ್ ಹೀಗೇ ಮಾತನಾಡಿದ್ದರು. ಅವರ ಮುಂದೆಯೇ ಶಾಸಕರನ್ನು ಕರೆದೊಯ್ದೆ ಏನೂ ಮಾಡಲು ಆಗಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಅಶೋಕ್, ಈ ಹಿಂದೆ ಮೈತ್ರಿ ಸರ್ಕಾರ ಇದ್ದಾಗಲೂ ಡಿ.ಕೆ.ಶಿವಕುಮಾರ್ ಹೇಳಿದ್ದರು. ಒಬ್ಬನೇ ಒಬ್ಬ ಬಿಟ್ಟು ಹೋಗಲಿ, ಕಾಂಗ್ರೆಸ್ ನಿಂದ ಯಾರೂ ಬಿಟ್ಟು ಹೋಗಲ್ಲ ಎಂದು ಹೇಳಿದ್ದರು. ಆದರೆ ಸನ್ಮಾನ್ಯ ಆತ್ಮೀಯ ಡಿ.ಕೆ.ಶಿವಕುಮಾರ್ ಅವರಿಗೆ ಈಗಲೂ ಹೇಳುತ್ತೇನೆ. ಅವತ್ತು ಅವರ ಕಣ್ಮುಂದೆಯೇ ಕಾಂಗ್ರೆಸ್ ನ ಶಾಸಕರನ್ನು ಕರೆದೊಯ್ದೆ. 15 ಶಾಸಕರನ್ನು ಅವರ ಮುಂದೆಯೇ ಕರೆದೊಯ್ದು ಫ್ಲೈಟ್ ಹತ್ತಿ ಮುಂಬೈಗೆ ಹೋದೆವು. ಆಗ ಅವರಿಂದ ಏನು ಮಾಡಲು ಆಯಿತು? ಈಗಲೂ ಏನೂ ಮಾಡಲು ಸಾಧ್ಯವಿಲ್ಲ. ಕಾಂಗ್ರೆಸ್ ನ ಹಲವು ನಾಯಕರು ಶೀಘ್ರದಲ್ಲಿಯೇ ಬಿಜೆಪಿಗೆ ಬರಲಿದ್ದಾರೆ. ಅವರ ಶಾಸಕರನ್ನೇ ಕರೆದೊಯ್ದಾಗ ಗೊತಾಗುತ್ತೆ ಎಂದು ಹೇಳಿದರು.

*ಪ್ರಧಾನಿ ಮೋದಿ ಹತ್ಯೆ ಮಾಡಿ ಎಂದ ಕಾಂಗ್ರೆಸ್ ನಾಯಕ*

https://pragati.taskdun.com/congress-leader-raja-pateriacontroversial-statementpm-narendra-modifir-file/

*ಸದನಕ್ಕೆ ಗೈರು ಹಾಜರಾದರೆ ಸಹಿಸೋದಿಲ್ಲ: ವಿಶ್ವೇಶ್ವರ ಹೆಗಡೆ ಕಾಗೇರಿ*

https://pragati.taskdun.com/i-dont-tollerate-if-mlaministers-absent-for-session/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button