ಪ್ರಗತಿ ವಾಹಿನಿ ಸುದ್ದಿ, ಬೆಳಗಾವಿ:
ಸವದತ್ತಿ ತಾಲೂಕಿನ ಮುರಗೋಡ ಪೊಲೀಸ್ ಠಾಣೆಯಿಂದ ರೈತರಿಗೆ ಉಪಯುಕ್ತವಾಗುವ ಅಪರೂಪದ ಕಾರ್ಯಕ್ರಮವನ್ನು ಡಿ.18ರಂದು ಯರಗಟ್ಟಿಯಲ್ಲಿ ಹಮ್ಮಿಕೊಳ್ಳಲಾಗಿದೆ.
ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಮುರಗೋಡ ಪೊಲೀಸ್ ಠಾಣೆ, ಯರಗಟ್ಟಿ ತಾಲೂಕು ಕಬ್ಬು ಬೆಳೆಗಾರರ ಬಳಗ ಮತ್ತು ಸ್ನೇಹ ಪ್ರೀತಿ ನಿಮ್ಮೊಂದಿಗೆ ರೈತರ ಬಳಗದ ಸಹಯೋಗದಲ್ಲಿ ರೈತರೊಂದಿಗೆ ಪೊಲೀಸರು ಎಂಬ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಡಿ.18ರಂದು ಸಂಜೆ 4 ಗಂಟೆಗೆ ಯರಗಟ್ಟಿ-ಬೆಳಗಾವಿ ರಸ್ತೆಯ ಆರ್. ಟಿ. ಪಾಟೀಲ್ ಪೆಟ್ರೋಲ್ ಪಂಪ್ ಬಳಿ ಕಾರ್ಯಕ್ರಮ ನಡೆಯಲಿದೆ.
ಯರಗಟ್ಟಿಯ ಶ್ರೀ ರಾಜರಾಜೇಶ್ವರಿ ಆಶ್ರಮದ ಶ್ರೀ ಗಣಪತಿ ಮಹಾರಾಜರು ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ರಾಮದುರ್ಗ ಡಿಎಸ್‍ಪಿ ರಾಮನಗೌಡ ಹಟ್ಟಿ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಖ್ಯಾತ ವೈದ್ಯ ಗೋಕಾಕದ ಎಸ್‍ಪೋರ್ ಆಸ್ಪತ್ರೆಯ ಡಾ. ರಮೇಶ ಪಟಗುಂದಿ ಅವರು ರಸ್ತೆ ಸುರಕ್ಷತೆ ಹಾಗೂ ಬೈಕ್ ಸವಾರರಿಗೆ ಹೆಲ್ಮೆಟ್‍ನ ಮಹತ್ವದ ಕುರಿತು ಮಾಹಿತಿ ನೀಡುವರು.
ಧಾರವಾಡದ ಕೃಷಿ ವಿಜ್ಞಾನಿ ಡಾ. ಆರ್. ಆರ್. ಪಾಟೀಲ್ ಹಾಗೂ ಡಾ. ಬಿ. ಎಸ್. ಏಣಗಿ ಅವರು ಗೊಣ್ಣೆ ಹುಳುಗಳ ನಿಯಂತ್ರಣದ ಬಗ್ಗೆ ಮಾಹಿತಿ ನೀಡುವರು. ವಕೀಲ ಆರ್. ಎಸ್. ಆಲದಕಟ್ಟಿ ಅವರು ಅಪಘಾತ ವಿಮೆ ಹಾಗೂ ಕಾನೂನು ಸಲಹೆ ನೀಡುವರು.
*ಬೋನಿಗೆ ಬಿದ್ದ ಚಿರತೆ: ಮಾರಶೆಟ್ಟಿ ಗ್ರಾಮಸ್ಥರು ನಿಟ್ಟುಸಿರು*
https://pragati.taskdun.com/mysorecheetamarashatti-village/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ