Kannada NewsLatest

*ಸುವರ್ಣ ವಿಧಾನಸೌಧಕ್ಕೆ 500 ಸಿಸಿಟಿವಿ ಕಣ್ಗಾವಲು; 6 ಡ್ರೋಣ್ ಗಳ ಪಹರೆ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ನಾಳೆಯಿಂದ ಬೆಳಗಾವಿ ಸುವರ್ಣವಿಧಾನಸೌಧದಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು, ಸುವರ್ಣಸೌಧ ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಬೆಳಗಾವಿಯಲ್ಲಿ ನಾಳೆಯಿಂದ ಡಿಸೆಂಬರ್ 29ರವರೆಗೆ ಅಧಿವೇಶನ ಆರಂಭವಾಗಲಿದ್ದು, ಸುವರ್ಣ ವಿಧಾನಸೌಧದ ಸುತ್ತ ಮುಂಜಾಗೃತಾ ಕ್ರಮವಾಗಿ 1 ಕಿ.ಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಸುವರ್ಣ ಸೌಧಕ್ಕೆ ಸುಮಾರು 500 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು ಕೇಂದ್ರೀಕೃತ ಕಮಾಂಡ್ ಸೆಂಟರ್ ಅನ್ನು ಸ್ಥಾಪಿಸಲಾಗಿದೆ.

ಬಂದೋಬಸ್ತ್‌ಗಾಗಿ 6 ಡ್ರೋನ್‌ಗಳನ್ನು ಬಳಸಲಾಗುತ್ತಿದೆ. ಭದ್ರತೆಗಾಗಿ 4 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.

ಬೆಳಗಾವಿಯ ಚಳಿಗಾಲದ ಅಧಿವೇಶನ ಸುಸಜ್ಜಿತವಾಗಿ ನಡೆಯುವ ಉದ್ದೇಶದಿಂದ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ 10 ದಿನಗಳವರೆಗೂ ಬಂದೋಬಸ್ತಗಾಗಿ ಸುಮಾರು 4931 ಪೊಲೀಸ್ ಸಿಬ್ಬಂದಿಗಳನ್ನು ‌ನಿಯೋಜಿಸಲಾಗಿದೆ ಎಂದು ನಗರ ಪೊಲೀಸ್ ಇಲಾಖೆ ತಿಳಿಸಿದೆ.

6 ಎಸ್ಪಿ, 11 ಹೆಚ್ಚುವರಿ ಎಸ್ಪಿ, 43 ಡಿಎಸ್ ಪಿ, 95 ಸಿಪಿಐ, 241 ಪಿಎಸ್ ಐ, 298 ಎಎಸ್ಐ, 2829 ಹೆಡ್ ಕಾನ್ ಸ್ಟೇಬಲ್, 800 ಕೆಎಸ್ ಆರ್ ಪಿ ತುಕಡಿ, 170 ಕ್ಯೂಆರ್ ಟಿ, 35 ಗರುಡಾ ತಂಡ, 130 ಎಎಸ್ ಸಿ ತಂಡ, 100 ವಾಯರ್ ಲೈಸ್ ಸಿಬ್ಬಂದಿ, 100 ಹೋಮ್ ಗಾಡ್೯ ಸೇರಿದಂತೆ ಸುಮಾರು 4931 ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.

ಹೊರ ಜಿಲ್ಲೆಯಿಂದ ಆಗಮಿಸಿದ ಪೊಲೀಸ್ ಸಿಬ್ಬಂದಿಗಳಿಗೆ ಸುಸಜ್ಜಿತವಾದ ವಸತಿ ವ್ಯವಸ್ಥೆ, ಊಟೋಪಹಾರದ ಸಕಲ ಸಿದ್ಧತೆ ಮಾಡಿಕೊಂಡಿದೆ.

ಅಲ್ಲದೆ, ಅಗ್ನಿ ಶಾಮಕ‌ ದಳ 12, ಅಂಬ್ಯೂಲೆನ್ಸ್ 16, ಗರುಡಾ ಪಡೆ 1, ಕೆಎಸ್ ಆರ್ ಟಿಸಿ ಬಸ್ 60, ಚೆಕ್ ಪೊಸ್ಟ್ 26 ನಿರ್ಮಿಸಲಾಗಿದೆ. ಇಷ್ಟೆ ಅಲ್ಲ ಬೆಳಗಾವಿ ಚಳಿಗಾಲದ ಅಧಿವೇಶನ ಮುಗಿಯುವವರೆಗೂ ಸುವರ್ಣ ವಿಧಾನಸೌಧದ ಸುತ್ತಲೂ ನಿಷೇಧಾಜ್ಞೆ ಹೊರಡಿಸಲಾಗಿದೆ.

 

*ಬೆಳಗಾವಿ ಅಧಿವೇಶನ; 4931 ಪೊಲೀಸರ ನಿಯೋಜನೆ*

https://pragati.taskdun.com/belagaviwinter-sessionpolice-security/

 

*ಬೆಳಗಾವಿ ಅಧಿವೇಶನ: ಸರ್ಕಾರಕ್ಕೆ ತಟ್ಟಲಿದೆ ಪ್ರತಿಭಟನೆಗಳ ಬಿಸಿ*

https://pragati.taskdun.com/belagavi-sessionprotestpolice-security/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button