
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕೆಪಿಟಿಸಿಎಲ್ ಸಹಾಯಕ ಎಂಜನಿಯರ್ ಮತ್ತು ಕಿರಿಯ ಎಂಜನಿಯರ್‌ಗಳು ಹಾಗೂ ಜ್ಯೂನಿಯರ್ ಅಸಿಸ್ಟಂಟ್ ಹುದ್ದೆಗಳ ನೇಮಕ ಪರೀಕ್ಷೆಯ ಫಲಿತಾಂಶವನ್ನು ಜನೆವರಿ ಮೊದಲ ವಾರದಲ್ಲಿ ಪ್ರಕಟಿಸಲಾಗುವುದು ಮತ್ತು ಕೀ ಉತ್ತರಗಳನ್ನು ವಾರದೊಳಗೆ ಪ್ರಕಟಿಸಲಾಗುವುದು ಎಂದು ಇಂಧನ ಸಚಿವ ಸುನೀಲಕುಮಾರ್ ಅವರು ತಿಳಿಸಿದರು.
ವಿಧಾನಸಭೆಯಲ್ಲಿ ಇಂದು ಶೂನ್ಯವೇಳೆಯಲ್ಲಿ ಶಾಸಕ ಸುರೇಶಕುಮಾರ್ ಅವರ ಪ್ರಶ್ನೆಗೆ ಉತ್ತರಿಸಿದರು. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮುಖಾಂತರ ಪರೀಕ್ಷೆಗಳನ್ನು ೫ ತಿಂಗಳ ಹಿಂದೆ ನಡೆಸಲಾಗಿದ್ದು, ಫಲಿತಾಂಶ ಪ್ರಕಟಿಸಲಾಗಿಲ್ಲ. ಪರೀಕ್ಷೆ ಬರೆದ ವಿದ್ಯಾರ್ಥಿಗಳು ಫಲಿತಾಂಶಕ್ಕಾಗಿ ಕಾಯುತ್ತಿರುವುದು ಗಮನಕ್ಕಿದ್ದು, ಈ ಕುರಿತು ಕೆಇಎ ಜೊತೆಗೆ ಫಾಲೋಅಫ್ ಮಾಡುತ್ತಿದ್ದೇವೆ. ಈ ವಾರದಲ್ಲಿ ಅಥವಾ ಅಧಿವೇಶನ ಮುಗಿಯುವುದರೊಳಗೆ ಕೀ ಉತ್ತರಗಳನ್ನು ಪ್ರಕಟಿಸಿ, ಜನವರಿ ಮೊದಲ ವಾರದೊಳಗೆ ಫಲಿತಾಂಶ ಪ್ರಕಟಿಸಲು ಕ್ರಮಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.
ಶಾಸಕ ಸುರೇಶಕುಮಾರ್ ಅವರು, ಪರೀಕ್ಷೆ ಬರೆದು ಐದು ತಿಂಗಳಾದರೂ ಫಲಿತಾಂಶ ಪ್ರಕಟವಾಗಿಲ್ಲ; ಪರೀಕ್ಷೆ ಬರೆದ ಅಭ್ಯರ್ಥಿಗಳು ಫಲಿತಾಂಶ ಯಾವಾಗ ಬಿಡುಗಡೆ ಮಾಡಲಾಗುತ್ತದೆ ಎಂಬುದರ ಕುರಿತು ಚಾತಕ ಪಕ್ಷಿಯಂತೆ ಕಾಯುತ್ತಿದ್ದು, ಕೂಡಲೇ ಕ್ರಮವಹಿಸುವಂತೆ ಅವರು ಸಚಿವರಲ್ಲಿ ಕೋರಿದ್ದರು.
*ಪರಿಷತ್ ಸಭಾಪತಿಯಾಗಿ ಹೊರಟ್ಟಿ ಅವಿರೋಧ ಆಯ್ಕೆ?; ಅಧಿಕೃತ ಘೋಷಣೆಯೊಂದೇ ಬಾಕಿ*
https://pragati.taskdun.com/basavaraj-horattividhana-parishathspeakeruncontested-choice/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ