Kannada NewsKarnataka News

ಸೆಂಟ್ರಿಂಗ್ ಪ್ಲೇಟ್, MSIL ಅಂಗಡಿ ಕಳ್ಳತನ ಮಾಡಿದ 6 ಜನ ಆರೋಪಿತರ ಬಂಧನ

 

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸೆಂಟ್ರಿಂಗ್ ಪ್ಲೇಟ್ ಗಳು ಹಾಗೂ MSIL ಅಂಗಡಿಗಳಲ್ಲಿ ಕಳುವು ಮಾಡಿದ್ದ ಆರು ಜನ ಆರೋಪಿತರನ್ನು ಪೊಲೀಸರು ಬಂಧಿಸಿದ್ದಾರೆ.

ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯ ಯರಝರ್ವಿ ಗ್ರಾಮ ಜಮೀನೊಂದರಲ್ಲಿ ಇರಿಸಲಾದ ಬಳ್ಳಾರಿ ನಾಲಾ ಕಾಮಗಾರಿಯ 80 ಸೆಂಟ್ರಿಂಗ್ ಪ್ಲೇಟ್ ಗಳನ್ನು ಕಳ್ಳತನ ಮಾಡಲಾಗಿತ್ತು.

ಇನ್ನೊಂದೆಡೆ ಚಚಡಿ ಕ್ರಾಸ್‌ನಲ್ಲಿರುವ MSIL ಮಳಿಗೆಯ ಹಿಂದಿನ ಗೋಡೆ ಒಡೆದು ಮಳಿಗೆಯಲ್ಲಿದ್ದ 1,31,753 ರೂ. ಬೆಲೆ ಬಾಳುವ ವಿವಿಧ ಬ್ರಾಂಡ್ ಗಳ ಮದ್ಯದ ಬಾಟಲಗಳು,  53,980 ರೂ. ನಗದು ಹಣವನ್ನು ಕಳ್ಳತನ ಮಾಡಲಾಗಿತ್ತು.

ಯರಗಟ್ಟಿ ಪಟ್ಟಣದ ಮನೆಯೊಂದರ ಕೀಲಿ ಮುರಿದು ಕಳ್ಳತನ ಮಾಡಲು ಪ್ರಯತ್ನಿಸಿದ ಪ್ರಕರಣ ಕೂಡ ನಡೆದಿತ್ತು. ಈ ಎಲ್ಲ ಪ್ರಕರಣಗಳಲ್ಲಿ ದೂರು ದಾಖಲಾಗಿದ್ದವು.

ತನಿಖೆ ಕೈಗೊಂಡ ಮುರಗೋಡ ಪೊಲೀಸರು 6 ಜನ ಆರೋಪಿತರನ್ನು ಬಂಧಿಸಿ ಅವರಿಂದ 1.50 ಲಕ್ಷ ರೂ. ಬೆಲೆಬಾಳುವ 50 ಸೆಂಟ್ರಿಂಗ್ ಪ್ಲೇಟ್ ಗಳು, 19,500  ರೂ. ನಗದು, ಸುಮಾರು 3 ಲಕ್ಷ ರೂ. ಬೆಲೆ ಬಾಳುವ ಒಂದು ಬೊಲೆರೋ ಪಿಕ್ ಅಪ್ ವಾಹನ ವಶಪಡಿಸಿಕೊಂಡಿದ್ದಾರೆ.

 

ಬಂಧಿತರು:

1) Umesh Bhimappa Gollar r/o Bailhongal age 34
2)chandru Demappa Gollar age 25 bailhongal
3) Allu Jambanna Durgamurgi r/o Yargatti age 20
4) Suresh Babu Durgamurgi ro of kotur near yargatti 27 years
5)Hanumanta Mariyappa madar age 21 Budigoppa near Yargatti
6)Dawal saab Hazararat saab Doddamani ro Byahatti tq Hubli age 28

 

ರಾಮದುರ್ಗ ಡಿಎಸ್‌ಪಿ ರಾಮನಗೌಡ ಹಟ್ಟಿ ನೇತೃತ್ವದಲ್ಲಿ ಮುರಗೋಡ ಪೊಲೀಸ್ ಠಾಣೆಯ ಪಿಐ  ಮೌನೇಶ್ವರ ಮಾಲಿಪಾಟೀಲ, ಪಿಎಸ್‌ಐಗಳಾದ ಐ.ಎಂ.ಹಿರೇಗೌಡರ,   ಬಸಗೌಡ ನೇರ್ತ, ಲಕ್ಷ್ಮೀ ಬಿರಾದಾರ ಹಾಗೂ ಸಿಬ್ಬಂದಿಗಳಾದ ಎಂ.ಐ.ಸಣ್ಣಾಯ, ಕೆ.ಚಿ.ಅಲಗರಾವುತ, ಎಸ್.ಎಂ.ಜವಳ, ಎಚ್.ಆರ್.ನ್ಯಾಮಗೌಡರ, ಐ.ಆರ್.ಗಡಾದ, ಎಸ್.ಎಸ್.ಹುಂಬಿ, ವಿ.ಎ.ದೇಸಾಯಿಪಟ್ಟ  ಕಾರ್ಯಾಚರಣೆ ನಡೆಸಿದ್ದರು.

ಈ ತಂಡದಲ್ಲಿರುವ ಅಧಿಕಾರಿ ಮತ್ತು ಸಿಬ್ಬಂದಿ ಕಾರ್ಯ ವೈಖರಿಯನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾಗೂ ಹೆಚ್ಚವರಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಶಂಸಿಸಿದ್ದಾರೆ.

ಸಿದ್ದೇಶ್ವರ ಶ್ರೀಗಳ ಸಧ್ಯದ ಆರೋಗ್ಯದ ಕುರಿತು ವೈದ್ಯರ ಮಾಹಿತಿ; ನಿಧಾನವಾದ ನಾಡಿಮಿಡಿತ, ಉಸಿರಾಟ

https://pragati.taskdun.com/doctors-information-about-siddeshwar-sris-current-health-slow-pulse-breathing/

2023ರಲ್ಲಿ ವೆಂಕಟೇಶ್ವರನ ಆಶಿರ್ವಾದ: ಸಿಎಂ ಬಸವರಾಜ ಬೊಮ್ಮಾಯಿ

https://pragati.taskdun.com/bjp-will-come-to-power-in-next-elections-cm-basavaraj-bommai/

ಕ್ರೀಡಾ ಸಚಿವರ ವಿರುದ್ಧ ಲೈಂಗಿಕ ಕಿರುಕುಳ ಕೇಸ್

https://pragati.taskdun.com/demonetisation-not-invalid-supreme-court-judgement/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button