Karnataka News

ಸಚಿವರು ಆಡುವ ಮಾತೆಲ್ಲ ಸರ್ಕಾರದ ಅಭಿಪ್ರಾಯವೇ ? ಕೋರ್ಟ್ ತೀರ್ಪು ಏನಿದೆ ?

ಪ್ರಗತಿ ವಾಹಿನಿ ಸುದ್ದಿ, ನವದೆಹಲಿ: ಸಚಿವರು, ಶಾಸಕ ಹಾಗೂ ಸಂಸದರು ಸೇರಿದಂತೆ ಜನಪ್ರತಿನಿಧಿಗಳಿಗೂ ಸಹ  ದೇಶದ ಎಲ್ಲಾ ನಾಗರಿಕರಿಗೆ ನೀಡಲಾಗಿರುವಷ್ಟೇ ವಾಕ್ ಸ್ವಾತಂತ್ರವನ್ನು ನೀಡಲಾಗಿದೆ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಅವರ ಮಾತಿನ ಮೇಲೆ ಯಾವುದೇ ಹೆಚ್ಚುವರಿ ನಿರ್ಬಂಧಗಳನ್ನು ಹೇರಲು ಸಾಧ್ಯವಿಲ್ಲ ಎಂದು ಸುಪ್ರಿಂ ಕೋರ್ಟ್ ನ ಪಂಚ ಸದಸ್ಯರ ಪೀಠ ಹೇಳಿದೆ.
.
ಸ್ವಾತಂತ್ರ್ಯವನ್ನು ನಿರ್ಭಂಧಿಸಲು ಸಂವಿಧಾನದ ವಿವಿಧ ವಿಧಿ ಅಡಿ ಈಗಾಗಲೇ ಸಾಕಷ್ಟು ಕ್ರಮಗಳಿವೆ ಎಂದು ನ್ಯಾ. ಎಸ್ ನಜೀರ್ ಅವರನ್ನೊಳಗೊಂಡ 5 ಸದಸ್ಯರ ಸಂವಿಧಾನ ಪೀಠ 4-1ರ ಬಹುಮತದ ತೀರ್ಪು ನೀಡಿದೆ.
ಆದರೆ ಪಂಚ ಸದಸ್ಯರ ಪೀಠದಲ್ಲಿ ಸಚಿವ, ಶಾಸಕ ಹಾಗೂ ಸಂಸದರು ನೀಡುವ ಹೇಳಿಕೆಯನ್ನು ಸರ್ಕಾರದ ಹೇಳಿಕೆ ಎಂದು ಪರಿಗಣಿಸಬೇಕು ಎಂಬ ವಿಷಯದಲ್ಲಿ ಭಿನ್ನಾಭಿಪ್ರಾಯ ವ್ಯಕ್ತವಾಗಿದ್ದು ನಾಲ್ವರು ನ್ಯಾಯಾಧೀಶರು ಇಂಥ ಹೇಳಿಕೆಯನ್ನು ಸರ್ಕಾರದ್ದು ಎಂದು ಪರಿಗಣಿಸಲಾಗದು ಎಂದು ಹೇಳಿದರೆ ,ನ್ಯಾ. ನಾಗರತ್ನ ಅವರು ಇದನ್ನು ಸರ್ಕಾರದ ಹೇಳಿಕೆ ಎಂದು ಪರಿಗಣಿಸಬೇಕು ಎಂದು ಹೇಳಿದ್ದಾರೆ.
ಸಲ್ಲಿಸಿದ ಅರ್ಜಿಯಲ್ಲಿ ಸರ್ಕಾರವನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳು ಸಾರ್ವಜನಿಕ ವೇದಿಕೆಗಳಲ್ಲಿ ಮನಬಂದಂತೆ ವರ್ತಿಸುವುದನ್ನು ನಿಯಂತ್ರಿಸಿ ಸರ್ಕಾರದ ನೀತಿ ನಿಯಮಗಳನ್ನು ಮೀರದಂತೆ ಮಾತನಾಡಬೇಕು ಎಂದು ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದು ,ಈ ಬಗ್ಗೆ ಮಂಗಳವಾರ ನ್ಯಾಯಮೂರ್ತಿಗಳಾದ ಎಸ್ ಎ ನಜೀರ್, ಬಿ. ಆರ್. ಗವಾಯಿ, ಎ. ಎಸ್ ಬೋಪಣ್ಣ, ವಿ. ರಾಮಸುಬ್ರಹ್ಮಣ್ಯ ಹಾಗೂ ಬಿ.ವಿ ನಾಗರತ್ನ ಅವರಿಂದ ಪಂಚ ಸದಸ್ಯ ಸಾಂವಿಧಾನಿಕ ಪೀಠವು ತೀರ್ಪು ಪ್ರಕಟಿಸಿತು.
ಈ ಬಗ್ಗೆ ನಾಲ್ವರು ನ್ಯಾಯಮೂರ್ತಿಗಳು ಸಂವಿಧಾನ ಪರಿಚ್ಛೇದ 19(2) ರಡಿ ಇರುವಂತದ್ದನ್ನು ಹೊರತುಪಡಿಸಿ ಜನಪ್ರತಿನಿಧಿಗಳ ವಾಕ್ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಯಾವುದೇ ಹೆಚ್ಚುವರಿ ನಿರ್ಬಂಧಗಳನ್ನು ವಿಧಿಸಲಾಗದು.

 

ಸಚಿವರೊಬ್ಬರು ನೀಡಿದ ಹೇಳಿಕೆಯು ಸರ್ಕಾರವನ್ನು ರಕ್ಷಿಸುವ ಉದ್ದೇಶವೇ ಆಗಿದ್ದರು ಸಾಮೂಹಿಕ ಹೊಣೆಗಾರಿಕೆ ತತ್ವದ ಸಂದರ್ಭದಲ್ಲಿ ಅದನ್ನು ಸರ್ಕಾರದ ಹೇಳಿಕೆ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿದ್ದು, ಆದರೆ ನ್ಯಾಯಮೂರ್ತಿ ಬಿ. ವಿ. ನಾಗರತ್ನ ಅವರು ಇದಕ್ಕೆ ಭಿನ್ನತೀರ್ಪು ನೀಡಿ ವಾಕ್ ಸ್ವಾತಂತ್ರ್ಯದ ಮೇಲೆ ಹೆಚ್ಚು ನಿರ್ಬಂಧಗಳನ್ನು ಹೇರಲಾಗದು ಎಂಬ ಬಗ್ಗೆ ಸಹಮತವಿದೆ.
ಸಚಿವರು ನೀಡುವ ಹೇಳಿಕೆಯನ್ನು ಸರ್ಕಾರದ್ದೇ ಎಂದು ಪರಿಗಣಿಸಬೇಕು. ದ್ವೇಷಪೂರಿತ ಭಾಷಣಗಳು ಮೂಲಭೂತ ಮೌಲ್ಯಗಳ ಮೇಲೆ ದಾಳಿ ಮಾಡಿ ಸಮಾಜದಲ್ಲಿ ಅಸಮಾನತೆ ಸೃಷ್ಟಿಸಿ ಭಾರತದಂತ ದೇಶದಲ್ಲಿ ವೈವಿಧ್ಯತೆಯ ಹಿನ್ನೆಲೆ ಹೊಂದಿರುವ ಜನರನ್ನು ಗುರಿಯಾಗಿಸುತ್ತವೆ ಎಂದು ಬಿನ್ನ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ವಿವಾದಕ್ಕೆ ಮೂಲ ಕಾರಣ 2016ರ ಜುಲೈನಲ್ಲಿ ಮಹಿಳೆ ಹಾಗೂ ಆಕೆಯ ಮಗಳ ಮೇಲೆ ಉತ್ತರ ಪ್ರದೇಶದ ಬುಲಂದ್ ಶಹರ್ ಬಳಿ ಸಾಮೂಹಿಕ ಅತ್ಯಾಚಾರ ನಡೆದಿದ್ದು ಈ ಬಗ್ಗೆ ಉತ್ತರಪ್ರದೇಶದ ಶಾಸಕ ಅಜಂ ಖಾನ್ ರವರು ಸಾಮೂಹಿಕ ಅತ್ಯಾಚಾರ ರಾಜಕೀಯದ ಸಂಚು ಎಂದು ಆರೋಪಿಸಿದ್ದರು.
ಈ ಹಿನ್ನೆಲೆಯಲ್ಲಿ ರಾಜಕಾರಣಿಗಳು ಮನಸ್ಸಿಗೆ ಬಂದಂತೆ ಮಾತನಾಡುವುದನ್ನು ನಿರ್ಬಂಧಿಸಬೇಕು ಎಂದು ಮನವಿ ಸಲ್ಲಿಸಿದ್ದರು.
ಈ ಬಗ್ಗೆ ತೀರ್ಪು ನೀಡಿರುವ ಜಡ್ಜ್ ಸಚಿವರು, ಶಾಸಕರು ಹಾಗೂ ಸಂಸದರು ದೇಶದ ಎಲ್ಲಾ ನಾಗರಿಕರಿಗೆ ಸಂವಿಧಾನ 19(1)ಎ ಅಡಿ ನೀಡಲಾದ ವಾಕ್ ಸ್ವಾತಂತ್ರ್ಯವನ್ನು ಹೊಂದಿದ್ದು,ಸಂವಿಧಾನದ ಪರಿಚ್ಛೇದ 19(2) ರಡಿ ಇರುವಂತದ್ದನ್ನು ಹೊರತುಪಡಿಸಿ ಅವರ ವಾಕ್ ಹಾಗೂ ಅಭಿವ್ಯಕ್ತ ಸ್ವಾತಂತ್ರ್ಯದ ಮೇಲೆ ಹೆಚ್ಚುವರಿ ನಿರ್ಭಂಧವನ್ನು ವಿಧಿಸಲಾಗದು.

 

ಹಾಗೂ ಸದನದ ಹೊರಗೆ ಜನಪ್ರತಿನಿಧಿಗಳ ಹೇಳಿಕೆಯನ್ನು ಸರ್ಕಾರದ ಹೇಳಿಕೆ ಎಂದು ಪರಿಗಣಿಸಲಾಗುವುದಿಲ್ಲ ಎಂದು ತೀರ್ಪು ನೀಡಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button