Kannada NewsKarnataka News

ಪ್ರೇರಣಾ ಉತ್ಸವ ಶ್ಲಾಘಿಸಿದ ಕನ್ಹೇರಿ ಮಠದ ಸ್ವಾಮೀಜಿ

ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ: ಸಮಾಜ ಜೀವಿಯಾದ ಮನುಷ್ಯ ಸಮಾಜ ಕಟ್ಟಿಕೊಳ್ಳಲು ಎಲ್ಲರನ್ನು ಒಂದುಗೂಡಿಸಿ ಸಾಮಾಜಿಕ, ಧಾರ್ಮಿಕ ಪರಂಪರೆ ಬೆಳೆಸುವುದರ ಜೊತೆಗೆ ಭಾರತೀಯ ಸಂಸ್ಕೃತಿ. ಸಂಸ್ಕಾರ ನೀಡಿ  ಪ್ರೇರಣೆ ನೀಡುವುದು ಅವಶ್ಯಕ ಎಂದು ಕನ್ಹೇರಿ ಸಿದ್ದಗಿರಿ ಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ನಡೆದ ಪ್ರೇರಣಾ ಉತ್ಸವ ಸಮಾರೋಪ ಹಾಗೂ ಪ್ರೇರಣಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು. ಜ್ಯೋತಿಪ್ರಸಾದ ಜೊಲ್ಲೆ ಜನ್ಮದಿನದ ಅಂಗವಾಗಿ ಜೊಲ್ಲೆ ಪರಿವಾರ ಪ್ರೇರಣಾ ಉತ್ಸವ ನಡೆಸುತ್ತಾರೆ. ಮಗನ ಜನ್ಮದಿನಕ್ಕೆ ತಂದೆ-ತಾಯಿ ವಿಶಿಷ್ಟ ಸಾಧಕರನ್ನು ಗುರ್ತಿಸಿ ಪ್ರೇರಣೆ ನೀಡುವ ಕಾರ್ಯ ಶ್ಲಾಘನೀಯ ಎಂದರು.
ಉದ್ಯೋಗ. ವ್ಯವಹಾರ. ನೃತ್ಯ.ಪಾಠ ಸ್ಪರ್ಧೆ ಹೀಗೆ ಹತ್ತು ಹಲವು ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಪ್ರೇರಣೆ ನೀಡಿ ಸಮಾಜದ ಕಟ್ಡ ಕಡೆ ವ್ಯಕ್ತಿಗಳನ್ನು ಗುರ್ತಿಸಿ ಸಾಮಾಜಿಕ ಕಾರ್ಯ ಮಾಡುವ ಜೊಲ್ಲೆ ದಂಪತಿಗಳು ಇನ್ನು ಹೆಚ್ಚು ಹೆಚ್ಚು ಕೆಲಸ ಮಾಡಬೇಕು ಎಂದರು.
ಚಿಕ್ಕೋಡಿ: ಪ್ರೇರಣಾ ಉತ್ಸವ ಸಮಾರೋಪದಲ್ಲಿ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿದರು.

ಮುಜರಾಯಿ ಹಜ್ ಹಾಗೂ ವಕ್ಪ ಸಚಿವೆ ಶಶಿಕಲಾ ಜೊಲ್ಲೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು.30 ವರ್ಷಗಳಿಂದ ಚಿಕ್ಕ ಹಳ್ಳಿಯಲ್ಲಿ ಸಂಸ್ಥೆ ಹುಟ್ಟು ಹಾಕಿ ಇಂದು ಬೀರೇಶ್ವರ ಸಂಸ್ಥೆ ಕರ್ನಾಟಕ. ಮಹಾರಾಷ್ಟ್ರ ಮತ್ತು ಗೋವಾ ರಾಜ್ಯದಲ್ಲಿ ಹೆಮ್ಮರವಾಗಿ ಬೆಳೆದು ನಿಂತಿದೆ. ಜೊಲ್ಲೆ ಗ್ರೂಪ್ ಸಮಾಜಿಕ ಕಾರ್ಯ ಮಾಡುತ್ತಾ ಬರಲಾಗಿದೆ.

ಭಾರತಿ ಕ್ರಿಕೆಟ್ ತಂಡದ ದಿವ್ಯ ಚೇತನ ಆಟಗಾರ ಸುನೀಲ ರಮೇಶ ಅವರಿಗೆ ಪ್ರಸಕ್ತ ಸಾಲಿನ ಪ್ರೇರಣಾ ಪುರಸ್ಕಾರ ಹಾಗು 51 ಸಾವಿರ ರೂ ನೀಡಿ ಗೌರವಿಸಿದರು.ಇದೇ ಸಂದರ್ಭದಲ್ಲಿ ಜೊಲ್ಲೆ ಗ್ರುಪ್ ಪ್ರೇರಣಾ ಶಕ್ತಿ ಜ್ಯೋತಿಪ್ರಸಾದ ಜೊಲ್ಲೆ ಜನ್ಮದಿನ ಆಚರಿಸಿದರು.
ವೇದಿಕೆ ಮೇಲೆ ಹುಕ್ಕೇರಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ. ಅಥಣಿ ಶಿವಬಸವ ಗುರುಮುರಘರಾಜೇಂದ್ರ  ಸ್ವಾಮೀಜಿ. ಕ್ಯಾರಗುಡ್ಡ ಹುಕ್ಕೇರಿಯ ಅಭಿನವ ಮಂಜುನಾಥ ಸ್ವಾಮೀಜಿ. ಗುರುಮಟ್ಕಲ್ ಶಾಂತವೀರ ಸ್ವಾಮೀಜಿ.
ಹುಬ್ಬಳ್ಳಿ ಕೆಒಎಫ್ ಅಧ್ಯಕ್ಷ ಬಸವರಾಜ ತೇಲಿ. ಕಲ್ಲಪ್ಪಣ್ಣಾ ಜಾಧವ. ನಿಪ್ಪಾಣಿ ನಗರಸಭೆ ಅಧ್ಯಕ್ಷ ಜಯವಂತ ಬಾಟಲೆ. ನೀತಾ ಬಾಗಡೆ. ರಾಜು ಗುಂದೆ. ಪ್ರಣವ ಮಾನ್ವಿ. ರಾಘವೇಂದ್ರ ಬಗಾಡೆ. ಜೊಲ್ಲೆ ಗ್ರುಪ್ ಸಿಇಒ ವಿವೇಕ ಬಂಕೋಳ್ಳೆ.ಪ್ರೀಯಾ ಜೊಲ್ಲೆ. ಅಪ್ಪಾಸಾಹೇಬ ಜೊಲ್ಲೆ. ಸಿದ್ರಾಮ ಗಡದೇ ಮುಂತಾದವರು ಇದ್ದರು.
ಬಸವ ಜ್ಯೋತಿ ಯುಥ್ ಪೌಂಡೇಶನ ಅಧ್ಯಕ್ಷ ಬಸವಪ್ರಸಾದ ಜೊಲ್ಲೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ರಮೇಶ ಪಾಟೀಲ ನಿರೂಪಿಸಿದರು.
ಶ್ರೀ ಸಿದ್ದೇಶ್ವರ ಮಹಾಸ್ವಾಮೀಜಿಗೆ ಶ್ರದ್ಧಾಂಜಲಿ ಅರ್ಪಿಸಿದ ಗಣ್ಯರು
ಪ್ರೇರಣಾ ಉತ್ಸವ ಸಮಾರೋಪ ಸಮಾರಂಭದಲ್ಲಿ ಸೋಮವಾರ ಲಿಂಗೈಕ್ಯರಾದ ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಮಹಾಸ್ವಾಮಿಜಿ ಭಾವಚಿತ್ರಕ್ಕೆ ಕಣೇರಿ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ. ಸಚಿವೆ ಶಶಿಕಲಾ ಜೊಲ್ಲೆ ಮತ್ತು ವಿವಿಧ ಸ್ವಾಮಿಜಿಗಳು ಪುಸ್ಪ ನಮನ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಿದರು.
https://pragati.taskdun.com/cm-bommayi-led-foundation-stone-for-400-bedded-mother-child-hospital-in-ballari/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button