National

*ಧರ್ಮಸ್ಥಳ ಮೂಲದ ಏರೋಸ್ಪೇಸ್ ಇಂಜಿನಿಯರ್ ಯುವತಿ ಪಂಜಾಬ್ ನಲ್ಲಿ ನಿಗೂಢವಾಗಿ ಸಾವು*

ಪ್ರಗತಿವಾಹಿನಿ ಸುದ್ದಿ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಧರ್ಮಸ್ಥಳ ಮೂಲದ ಏರೋಸ್ಪೇಸ್ ಇಂಜಿನಿಯರ್ ಯುವತಿ ಪಂಜಾಬ್ ನಲ್ಲಿ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಆಕಾಂಕ್ಷಾ ಎಸ್.ನಾಯರ್ (22) ಮೃತ ಯುವತಿ. ಪಂಜಾಬ್ ನ ಎಲ್.ಸಿ.ಯು ಪಗ್ವಾಡ ಕಾಲೇಜಿನಲ್ಲಿ ಓದಿದ್ದ ಆಕಾಂಕ್ಷಾ, ಕಳೆದ 6 ತಿಂಗಳಿಂದ ದೆಹಲಿಯಲ್ಲಿ ಏರೋಸ್ಪೇಸ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಉದೋಗಕ್ಕಾಗಿ ಜಪಾನ್ ಗೆ ತೆರಳಲು ಸಿದ್ಧತೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಆಕಾಂಕ್ಷಾ ನಿನ್ನೆ ಕಾಲೇಜು ಸರ್ಟಿಫಿಕೇಟ್ ತರಲೆಂದು ಪಂಜಾಬ್ ಗೆ ತೆರಳಿದ್ದರು.

ಪಂಜಾಬ್ ನ ಎಲ್.ಸಿ.ಯು ಪಗ್ವಾಡ ಕಾಲೇಜಿನಿಂದ ಸರ್ಟಿಫಿಕೇಟ್ ಪಡೆದು ಮನೆಗೆ ಕರೆ ಮಾಡಿ ತಿಳಿಸಿದ್ದಳು. ಇದಾದ ಕೆಲವೇ ಸಮಯದಲ್ಲಿ ಆಕಾಂಕ್ಷಾ ಸಾವನ್ನಪ್ಪಿದ್ದಾಗಿ ಪೋಷಕರಿಗೆ ಪೊಲೀಸರು ಮಾಹಿತಿ ನೀಡಿದ್ದಾರೆ.

ವಿಷಯ ತಿಳಿದು ಆಘಾತಕ್ಕೊಳಗಾದ ಪೋಷಕರು ಪಂಜಾಬ್ ಗೆ ತೆರಳಿದ್ದಾರೆ. ಜಲಂಧರ್ ಪೊಲೀಸರು ಅಕಾಂಕ್ಷಾ 3ನೇ ಮಹಡಿಯಿಂದ ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಆಕಾಂಕ್ಷಾ ತಂದೆ ಮಗಳ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ಇದು ಕೊಲೆ ಇರಬಹುದು ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.

Home add -Advt


Related Articles

Back to top button