Kannada NewsLatest

ಜಿಲ್ಲಾ ೧೩ನೇ ಕನ್ನಡ ಸಾಹಿತ್ಯ ಸಮ್ಮೇಳನ ಜೂನ್ ೨೮, ೨೯

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಬೆಳಗಾವಿ ಜಿಲ್ಲಾ ೧೩ನೇ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮವು ಜೂನ್ ೨೮ ಮತ್ತು ೨೯ ಎರಡು ದಿನಗಳ ಕಾಲ ಹಿರಿಯ ಸಾಹಿತಿ  ಡಾ. ಗುರುದೇವಿ ಹುಲೆಪ್ಪನವರಮಠ ಅವರ ಸರ್ವಾಧ್ಯಕ್ಷತೆಯಲ್ಲಿ ಗೋಕಾಕ ಕೆ.ಎಲ್.ಇ. ಸಂಸ್ಥೆಯ ಶ್ರೀ ಎಮ್.ಬಿ. ಮುನವಳ್ಳಿ ಆಂಗ್ಲ ಮಾಧ್ಯಮ ಶಾಲಾ ಆವರಣದಲ್ಲಿ ಜರುಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ತ ಜಿಲ್ಲಾಧ್ಯಕ್ಷರಾದ ಮಂಗಳಾ ಮೆಟಗುಡ್ ಅವರು ಹೇಳಿದರು.
೧೩ನೇ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ೭ನೇ ಬೆಳಗಾವಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ಶುಕ್ರವಾರ (ಜೂ.೨೧) ರಂದು ಬೆಳಗಾವಿ ವಾರ್ತಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲಾ ೧೩ನೇ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಸಿದರು.
ಜೂನ್ ೨೮ ರಂದು ಬೆಳಿಗ್ಗೆ ೮ ಗಂಟೆಗೆ ಗೋಕಾಕ ಕೆ.ಎಲ್.ಇ. ಸಂಸ್ಥೆಯ ಶ್ರೀ ಎಮ್.ಬಿ. ಮುನವಳ್ಳಿ ಆಂಗ್ಲ ಮಾಧ್ಯಮ ಶಾಲಾ ಆವರಣದಲ್ಲಿ ರಾಷ್ಟ್ರಧ್ವಜವನ್ನು ಹಿರಿಯ ಸ್ವಾತಂತ್ರ್ಯ ಯೋಧರಾದ ಗುರುಲಿಂಗಪ್ಪ ಗುಣಕಿ, ನಾಡಧ್ವಜವನ್ನು ಗೋಕಾಕ ವಿಶ್ರಾಂತ ಶಿಕ್ಷಣಾಧಿಕಾರಿಗಳಾದ ಎಸ್.ಎನ್.ಗುದಗನವರ, ಪರಿಷತ್ ಧ್ವಜವನ್ನು ಕನ್ನಡ ಸಾಹಿತ್ಯ ಪರಿಷತ್ತ ಜಿಲ್ಲಾಧ್ಯಕ್ಷರಾದ ಮಂಗಳಾ ಮೆಟಗುಡ್ ಅವರು ಧ್ವಾಜಾರೋಹಣ ಮಾಡುವರು. ಹಾಗೂ ಸಂಯೋಜನೆಯನ್ನು ಗೋಕಾಕ ದೈಹಿಕ ಶಿಕ್ಷಕರಾದ ನಾಗರಾಜ ಹಿರೇಮಠ ಮತ್ತು ಶಿಕ್ಷಕರಾದ ಪಿ.ವಾಯ್.ಪಾಟೀಲ ಅವರು ನಿರ್ವಹಿಸುವರು.

ಜೂನ್ ೨೮ ರಂದು ಬೆಳಿಗ್ಗೆ ೯ ಗಂಟೆಗೆ ನಾಡದೇವಿ ಭುವನೇಶ್ವರಿ ಹಾಗೂ ಸಮ್ಮೇಳನದ ಸರ್ವಾಧ್ಯಕ್ಷರ ಮೆರವಣಿಗೆಯ ಉದ್ಘಾಟನೆಯನ್ನು ಲಖನ್ ಜಾರಕಿಹೊಳಿ ಅವರು ನಡೆಸುವರು. ಹಾಗೂ ಮೆರವಣಿಗೆಯು ಬಸವೇಶ್ವರ ವೃತ್ತದಿಂದ ಸಮ್ಮೇಳನದ ಸಭಾ ಮಂಟಪದವರೆಗೆ ಜರುಗುವುದು.

ಉದ್ಘಾಟನಾ ಸಮಾರಂಭ:
ಜಿಲ್ಲಾ ೧೩ನೇ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಜೂನ್ ೨೮ ರಂದು ಬೆಳಿಗ್ಗೆ ೧೦ ಗಂಟೆಗೆ ಅರಣ್ಯ, ಪರಿಸರ, ಜೀವಿಶಾಸ್ತ್ರ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರು ಉದ್ಘಾಟಿಸುವರು.
ನಿಡಸೋಸಿ ಶ್ರೀ ದುರದುಂಡೀಶ್ವರಮಠದ ಜಗದ್ಗುರು ಪಂಚಮ ಶ್ರೀ ಶಿವಲಿಂಗೇಶ್ವರ ಮಹಾಸ್ವಾಮಿಗಳು ಮತ್ತು ಗೋಕಾಕ ಶೂನ್ಯ ಸಂಪಾದನಾಮಠ ಶ್ರೀ ಮ.ನಿ.ಪ್ರ. ಮುರುಘಾರಾಜೇಂದ್ರ ಮಹಾಸ್ವಾಮಿಗಳುಗಳ ದಿವ್ಯ ಸಾನಿಧ್ಯದಲ್ಲಿ ಜರುಗುವುದು. ಗೋಕಾಕ ಶಾಸಕರಾದ ರಮೇಶ ಜಾರಕಿಹೊಳಿ ಅವರು ಅಧ್ಯಕ್ಷತೆಯನ್ನು ವಹಿಸುವರು.
ನಿಕಟಪೂರ್ವ ಸಮ್ಮೇಳನಾಧ್ಯಕ್ಷರಾಗಿ ಜಾನಪದ ತಜ್ಞರು, ಹಿರಿಯ ಸಾಹಿತಿಗಳಾದ ಜ್ಯೋತಿ ಹೊಸೂರು, ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿಗಳು ಡಾ. ಗುರುದೇವಿ ಹುಲೆಪ್ಪನವರಮಠ, ಆಶಯನುಡಿಯನ್ನು ಕನ್ನಡ ಸಾಹಿತ್ಯ ಪರಿಷತ್ತ ಜಿಲ್ಲಾಧ್ಯಕ್ಷರಾದ ಮಂಗಳಾ ಮೆಟಗುಡ್, ವಿಶೇಷ ಉಪನ್ಯಾಸಕರಾಗಿ ಚಿಂತಕರು ಡಾ. ಗುರುರಾಜ ಕರಜಗಿ, ಮುಖ್ಯ ಅತಿಥಿಗಳಾಗಿ ರಾಜ್ಯ ರೇಲ್ವೆ ಸಚಿವರಾದ ಸುರೇಶ ಅಂಗಡಿ, ರಾಜ್ಯಸಭಾ ಸದ್ಯಸರಾದ ಪ್ರಭಾಕರ ಕೋರೆ ಹಾಗೂ ಚಿಕ್ಕೋಡಿ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ ಅವರು ಉಪಸ್ಥಿತರಿರುವರು.
ಕೆ.ಎಲ್.ಇ ನಿರ್ದೇಶಕರಾದ ಜಯಾನಂದ ಮುನವಳ್ಳಿ ಅವರು ಗ್ರಂಥಗಳ ಲೋಕಾರ್ಪಣೆಯನ್ನು, ರಾಜಕೀಯ ಧುರೀಣರಾದ ಅಶೋಕ ಪೂಜಾರಿ ಪುಸ್ತಕ ಮಳಿಗೆಗಳ ಉದ್ಘಾಟನೆಯನ್ನು ಹುಬ್ಬಳ್ಳಿ ಶ್ರೀ ಸಿದ್ಧಾರೂಡಮಠ ಟ್ರಸ್ಟ್ ಅಧ್ಯಕ್ಷರಾದ ಡಿ.ಡಿ.ಮಾಳಗಿ ಅವರು ಚಿತ್ರಕಲಾ ಪ್ರದರ್ಶನದ ಉದ್ಘಾಟನೆಯನ್ನು ಮಾಡುವರು.
ಮಧ್ಯಾಹ್ನ ೧ ಗಂಟೆಯಿಂದ ೧.೩೦ ಗಂಟೆಯವರೆಗೆ ವಿಶೇಷ ಸಂಗೀತ ಕಾರ್ಯಕ್ರಮ ಜರುಗುವುದು. ಜಿಲ್ಲಾ ೧೩ನೇ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮದ ಮೊದಲ ದಿನ ಮಧ್ಯಾಹ್ನ ೧.೩೦ ಗಂಟೆಗೆ ಕನ್ನಡ ಭಾಷೆ ಎದುರಿಸುತ್ತಿರುವ ಸವಾಲುಗಳು ಎಂಬ ಒಂದನೇಯ ಗೋಷ್ಠಿ ಜರುಗುವುದು. ಇದರ ಅಧ್ಯಕ್ಷತೆಯನ್ನು ಚಿಕ್ಕೋಡಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಎಂ.ಜಿ. ದಾಸರ ಅವರು ವಹಿಸುವರು.
ಉಪನ್ಯಾಸವನ್ನು ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ ಅವರು ಶಿಕ್ಷಣದಲ್ಲಿ ಕನ್ನಡ ಮಾಧ್ಯಮದ ಭವಿಷ್ಯ ಎಂಬ ವಿಷಯದ ಮೇಲೆ ಹಾಗೂ ಕನ್ನಡ ಭಾಷೆಯ ಸ್ಮಿತೆ ಮತ್ತು ತಂತ್ರಜ್ಞಾನ ಎಂಬ ವಿಷಯದ ಮೇಲೆ ಗಾಳಿಬೀಡು ಕೊಡಗು ಜವಾಹರ ನವೀದಯ ವಿದ್ಯಾಲಯ ಕನ್ನಡ ಅಧ್ಯಾಪಕರಾದ ಮಾರುತಿ ದಾಸನ್ನವರ ಅವರು ಉಪನ್ಯಾಸವನ್ನು ನೀಡುವರು. ಮದವಾಲ ಉಪನ್ಯಾಸಕರಾದ ಪ್ರೋ. ಸುರೇಶ ಮುದ್ದಾರ ಅವರು ಆಶಯನುಡಿಗಳಾನ್ನಾಡುವರು.
ಮಧ್ಯಾಹ್ನ ೨ ಗಂಟೆಗೆ ಸರ್ವಾಧ್ಯಕ್ಷರ ಪರಿಚಯ ಮತ್ತು ಸಂವಾದಗೋಷ್ಠಿ ಎಂಬ ಎರಡನೇಯ ಗೋಷ್ಠಿ ಜರುಗುವುದು. ಇದರ ಅಧ್ಯಕ್ಷತೆಯನ್ನು ಗೋಕಾಕ ವಿಶ್ರಾಂತ ಪ್ರಧ್ಯಾಪಕರು ಪ್ರೋ.ಜಿ.ವ್ಹಿ. ಮಳಗಿ ಅವರು ವಹಿಸುವರು. ಸಮ್ಮೇಳನ ಸರ್ವಾಧ್ಯಕ್ಷರಾಗಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಪ್ರಧ್ಯಾಪಕರಾದ ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ ಉಪಸ್ಥಿತರಿರುವರು.
ಜೂನ್ ೨೯ ರಂದು ಬೆಳಿಗ್ಗೆ ೯.೩೦ ಗಂಟೆಗೆ ಮೂರನೇಯ ಕವಿಗೋಷ್ಠಿ ಜರುಗುವುದು. ಇದರ ಅಧ್ಯಕ್ಷತೆಯನ್ನು ಗೋಕಾಕ ಸಾಹಿತಿಗಳು ಮಾಹಾಲಿಂಗ ಮಂಗಿ ಅವರು ವಹಿಸುವರು. ಧಾರವಾಡ ಆಕಾಶವಾಣಿ ಕಾರ್ಯಕ್ರಮ ಅಧಿಕಾರಿ ಡಾ. ವಸು ಬೇವನಗಿಡದ ಅವರು ಆಶಯನುಡಿಗಳನ್ನಾಡುವರು.
ಬೆಳಿಗ್ಗೆ ೧೧ ಗಂಟೆಗೆ ವೈಚಾರಿಕ ಎಂಬ ನಾಲ್ಕನೇಯ ಗೋಷ್ಠಿ ಜರುಗುವುದು. ಮುಂಡರಗಿ-ಬೈಲುರು ಜಗದ್ಗುರು ತೋಂಟದಾರ್ಯ ಮಠದ ಶ್ರೀ ಮ.ನಿ.ಪ್ರ. ನಿಜಗುಣ ಪ್ರಭು ತೋಂಟದಾರ್ಯ ಸ್ವಾಮಿಗಳ ಸಾನಿಧ್ಯದಲ್ಲಿ ಜರುಗುವುದು. ಅಧ್ಯಕ್ಷತೆಯನ್ನು ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಮೌಲ್ಯಮಾಪನ ಮುಖ್ಯಸ್ಥರಾದ ಡಾ. ರಂಗರಾಜ ವನದುರ್ಗ ಅವರು ವಹಿಸುವರು. ಲೇಖಕರು ಹಾಗೂ ಸತೀಶ ಶುಗರ‍್ಸ ವ್ಯವಸ್ಥಾಪಕ ನಿರ್ದೇಶಕರಾದ ಸಿದ್ಧಾರ್ಥ ವಾಡೆನ್ನವರ ಅವರು ಯುವ ಜನಾಂಗದ ತವಕ-ತಲ್ಲಣ ಎಂಬ ವಿಷಯದ ಮೇಲೆ ಉಪನ್ಯಾಸವನ್ನು ನೀಡುವರು. ಮೂಡಲಗಿಯ ಚಿಂತಕರಾದ ಡಾ. ಮಹಾದೇವ ಜಿಡ್ಡೀಮನಿ ಅವರು ಆಶಯನುಡಿಗಳಾನ್ನಾಡುವರು.
ಮಧ್ಯಾಹ್ನ ೧೨.೩೦ ಗಂಟೆಗೆ ಬೆಳಗಾವಿ ಜಿಲ್ಲೆಯ ಕನ್ನಡ ಸಾಹಿತ್ಯ ಅಂದು-ಇಂದು ಎಂಬ ಐದನೇಯ ಗೋಷ್ಠಿ ಜರುಗುವುದು. ಅಧ್ಯಕ್ಷತೆಯನ್ನು ಮೂಡಲಗಿ ಮಕ್ಕಳ ಸಾಹಿತಿ ಪ್ರೋ. ಸಂಗಮೇಶ ಗುಜಗೊಂಡ ಅವರು ವಹಿಸುವರು. ಕಲ್ಲೋಳಿಯ ಪ್ರಾಚಾರ್ಯರಾದ ಡಾ. ಸುರೇಶ ಹನಗಂಡಿ ಅವರು ಬೆಳಗಾವಿ ಜಿಲ್ಲೆಯ ಸಾಹಿತ್ಯ-ಅಂದು ಹಾಗೂ ಹುಬ್ಬಳ್ಳಿ ಪ್ರಾಧ್ಯಾಪಕರಾದ ಡಾ. ವೈ.ಎಂ.ಭಜಂತ್ರಿ ಅವರು ಬೆಳಗಾವಿ ಜಿಲ್ಲೆಯ ಸಾಹಿತ್ಯ-ಇಂದು ಎಂಬ ವಿಷಯದ ಮೇಲೆ ಉಪನ್ಯಾಸವನ್ನು ನೀಡುವರು. ಘೋಡಗೇರಿ ಕವಿ-ಕಥೆಗಾರರಾದ ಬಸವಣ್ಣೆಪ್ಪ ಕಂಬಾರ ಅವರು ಆಶಯನುಡಿಗಳಾನ್ನಾಡುವರು.

ಜೂನ್ ೨೯ ರಂದು ಮಧ್ಯಾಹ್ನ ೧೨.೩೦ ಗಂಟೆಗೆ ಸಾಧಕರ ಸನ್ಮಾನ ನಡೆಯಲಿದೆ. ಇದರ ಅಧ್ಯಕ್ಷತೆಯನ್ನು ಗೋಕಾಕ ಹಿರಿಯ ಸಾಹಿತಿಗಳಾದ ನರೇಂದ್ರ ಪುರಂದರೆ ಅವರು ವಹಿಸುವರು. ಕಲ್ಲೋಳಿ ಹಿರಿಯ ನಾಗರಿಕರಾದ ಬಿ.ಎಸ್. ಗೊರೋಶಿ ಹಾಗೂ ಧಾರವಾಡ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಗಜಾನನ ಮನ್ನಿಕೇರಿ ಅವರು ಸನ್ಮಾನಿಸುವರು, ಮುಖ್ಯ ಅತಿಥಿಗಳಾಗಿ ವಸಂತರಾವ್ ಕುಲಕರ್ಣಿ ಹಾಗೂ ಆರ್.ಡಿ. ಕಿತ್ತೂರ ಅವರು ಭಾಗವಹಿಸುವರು. ಮೂಡಲಗಿ ಬರಹಗಾರರಾದ ಬಾಲಶೇಖರ ಬಂದಿ ಅವರು ಆಶಯನುಡಿಗಳನ್ನಾಡುವರು. ಸಾಯಂಕಾಲ ೫ ಗಂಟೆಗೆ ಸಮಾರೋಪ ಸಮಾರಂಭ ಹಾಗೂ ೬ ಗಂಟೆಗೆ ಸಾಂಸ್ಕ್ರತಿಕ ಕಾರ್ಯಕ್ರಮಗಳು ಜರುಗುವವು ಎಂದು ಕನ್ನಡ ಸಾಹಿತ್ಯ ಪರಿಷತ್ತ ಜಿಲ್ಲಾಧ್ಯಕ್ಷರಾದ ಮಂಗಳಾ ಮೆಟಗುಡ್ ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತ ಗೋಕಾಕ ತಾಲೂಕಾಧ್ಯಕ್ಷರಾದ ಮಹಾಂತೇಶ ತಾಂವಶಿ, ಬೆಳಗಾವಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತನ ಅಧ್ಯಕ್ಷರಾದ ಬಸವರಾಜ ಸಸಾಲಟ್ಟಿ, ಗೌರವ ಕಾರ್ಯದರ್ಶಿಗಳಾದ ಜ್ಯೋತಿ ಬದಾಮಿ, ಕನ್ನಡ ಸಾಹಿತ್ಯ ಪರಿಷತ್ತ ರಾಮದುರ್ಗ ತಾಲೂಕಾಧ್ಯಕ್ಷರಾದ ಪಾಂಡುರಂಗ ಜಟಗನ್ನವರ, ಕನ್ನಡ ಸಾಹಿತ್ಯ ಪರಿಷತ್ತ ಖಾನಾಪೂರ ತಾಲೂಕಾಧ್ಯಕ್ಷರಾದ ವಿಜಯ ಬಡಿಗೇರ ಅವರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button