Latest

*ಹಿಟ್ ಆಂಡ್ ರನ್ : ಇಬ್ಬರು ಮಹಿಳೆಯರು ದುರ್ಮರಣ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಆಟೋ ಹಾಗೂ ಕಾರಿನ ನಡುವೆ ಸಂಭವಿಸುಇದ ಭೀಕರ ಅಪಘಾತದಲ್ಲಿ ಇಬ್ಬರು ಮಹಿಳೆಯರು ಮೃತಪಟ್ತಿರುವ ಘಟನೆ ಬೆಂಗಲುರಿನ ಕೆ.ಆರ್.ಪುರಂ ಬಳಿ ನಡೆದಿದೆ.

ಇನ್ನೋವಾ ಕಾರು ಹಾಗೂ ಆಟೋ ನಡುವೆ ಅಪಘಾತ ಸಂಭವಿಸಿದ್ದು, ಆಟೋದಲ್ಲಿದ್ದ ಇಬ್ಬರು ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದ ಬಳಿಕ ಕಾರು ಚಾಲಕ ಕಾರಿನ ಸಮೇತ ಪರಾರಿಯಾಗಿದ್ದಾನೆ.

Home add -Advt

ಘಟನೆಯಲ್ಲಿ ಆಟೋ ಚಾಲಕನ ಪತ್ನಿ ತಾಸಿನಾ( 24) ಹಾಗೂ ಸೋದರಿ ಫಾಝಿಲಾ (38) ಮೃತರು. ಆಟೋ ಚಾಲಕ ಖಾಲಿದ್ ಹಾಗೂ ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ನಿಮಾನ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೆ.ಆರ್.ಪುರಂ ಠಾಣೆಯಲ್ಲಿ ಹಿಟ್ ಆಂಡ್ ರನ್ ಕೇಸ್ ದಾಖಲಿಸಲಾಗಿದೆ.

*ವಿದ್ಯಾರ್ಥಿಗಳು ಪ್ರವಾಸಕ್ಕೆ ತೆರಳುತ್ತಿದ್ದ ಟ್ರ್ಯಾಕ್ಟರ್ ಭೀಕರ ಅಪಘಾತ ಪ್ರಕರಣ; ಓರ್ವ ವಿದ್ಯಾರ್ಥಿನಿ ಸಾವು*

https://pragati.taskdun.com/tractor-accident26-college-students-injuerd-caseone-student-deathsirsiuttara-kannada/

Related Articles

Back to top button