Kannada NewsKarnataka News

ಜೀವನ್ಮರಣದ ನಡುವೆ ಹೋರಾಡುತ್ತಿದ್ದವನಿಗೆ ಯಶಸ್ವಿ ಲಿವರ್ ಕಸಿ ಮಾಡಿದ ಕೆಎಲ್ ಇ ವೈದ್ಯರು

ಪ್ರಗತಿ ವಾಹಿನಿ ಸುದ್ದಿ, ಬೆಳಗಾವಿ: ಅನೇಕ ವರ್ಷಗಳಿಂದ ಯಕೃತ್ ವೈಫಲ್ಯದಿಂದ ಬಳಲುತ್ತ ಜೀವನ್ಮರಣದ ನಡುವೆ ಹೋರಾಡುತ್ತಿದ್ದ ವ್ಯಕ್ತಿಯೊಬ್ಬರಿಗೆ ಯಕೃತ್ ಕಸಿ ಮಾಡುವ ಮೂಲಕ ಇಲ್ಲಿನ ಕೆಎಲ್‍ಇ ಡಾ. ಪ್ರಭಾಕರ ಕೋರೆ ಆಸ್ಪತ್ರೆಯ ವೈದ್ಯರು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ. ಆ ಮೂಲಕ ಕೆಎಲ್‍ಇ ಆಸ್ಪತ್ರೆ ಉತ್ತರ ಕರ್ನಾಟಕದಲ್ಲಿಯೇ 2 ಯಶಸ್ವಿ ಯಕೃತ್ತಿನ ಕಸಿ ಶಸ್ತ್ರ ಚಿಕಿತ್ಸೆ ನೆರವೇರಿಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ.

ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಖಾನಾಪೂರ ತಾಲೂಕಿನ ಕುಪ್ಪತಗಿರಿ ಗ್ರಾಮದ ನಿವಾಸಿ ನರಸಿಂಗ ಪಾಟೀಲ (50) ಎಂಬುವವರ ಮೆದುಳು ನಿಷ್ಕ್ರೀಯಗೊಂಡಿತ್ತು.
ಕುಟುಂಬದ ಸದಸ್ಯರೊಂದಿಗೆ ಆಪ್ತಸಮಾಲೋಚನೆ ಮಾಡಿ, ವ್ಯಕ್ತಿಯಿಂದ ದಾನವಾಗಿ ಪಡೆದ ಯಕೃತ್ತನ್ನು ಹುಬ್ಬಳ್ಳಿಯ ವ್ಯಕ್ತಿಗೆ ಕಸಿ ಮಾಡಲಾಗಿದೆ ಎಂದು ಹಿರಿಯ ಗ್ಯಾಸ್ಟ್ರೊ ಎಂಟ್ರಾಲಾಜಿಸ್ಟ್ ಡಾ. ಸಂತೋಷ ಹಜಾರೆ ತಿಳಿಸಿದ್ದಾರೆ.

ಕೆಎಲ್‍ಇ ಡಾ. ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ಕೆಲವೇ ತಿಂಗಳ ಅಂತರದಲ್ಲಿ ಎರಡು ಲಿವರ್ ಕಸಿ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ಕೈಗೊಳ್ಳಲಾಗಿದೆ.

 

ಆ ಮೂಲಕ ಆಸ್ಪತ್ರೆಯು ಅತ್ಯಾಧುನಿಕ ವೈದ್ಯಕೀಯ ಸಲಕರಣೆ ಹಾಗೂ ಲಿವರ್ ಕಸಿ ಕೇಂದ್ರವಾಗಿ ಉತ್ತರ ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳ ಜನತೆಗೆ ಆಶಾಕಿರಣವಾಗಿ ಹೊರಹೊಮ್ಮಿದೆ. ಕೇವಲ ಮೆಟ್ರೊ ನಗರಗಳಿಗೆ ಸೀಮಿತವಾಗಿದ್ದ ಲಿವರ್ ಕಸಿ ಶಸ್ತ್ರಚಿಕಿತ್ಸೆಗಳನ್ನು ಅವಶ್ಯವಿರುವ ರೋಗಿಗಳಿಗೆ ಕೈಗೆಟಕುವ ದರದಲ್ಲಿ ನೀಡಲಾಗುತ್ತಿದೆ.

ಇತ್ತೀಚಿನ ದಿನಗಳಲ್ಲಿ ಅಂಗಾಂಗ ದಾನದ ಅರಿವು ಹೆಚ್ಚಾಗುತ್ತಿದ್ದು, ಅನೇಕರು ಅಂಗಾಗಳನ್ನು ದಾನ ಮಾಡಲು ಮುಂದೆ ಬರುತ್ತಿದ್ದಾರೆ, ಇದು ಅನೇಕ ಮಾರಣಾಂತಿಕ ಅನಾರೋಗ್ಯದ ರೋಗಿಗಳಿಗೆ ಎರಡನೇ ಜೀವನಕ್ಕೆ ಸಹಾಯ ಮಾಡುತ್ತಿದೆ.

ಯಶಸ್ವಿ ಯಕೃತ್ ಕಸಿ ನೆರವೇರಿಸಿದ ಆಸ್ಪತ್ರೆಯ ಹಾಗೂ ಬೆಂಗಳೂರಿನ ಡಿಎಂ ಅಸ್ಟರ್ ಆಸ್ಪತ್ರೆಯ ವೈದ್ಯರ ತಂಡವನ್ನು ಕೆಎಲ್‍ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಹಾಗೂ ಆಡಳಿತ ಮಂಡಳಿ ಸದಸ್ಯರು, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. (ಕರ್ನಲ್) ಎಂ ದಯಾನಂದ ಅವರು ಅಭಿನಂದಿಸಿದ್ದಾರೆ.
https://pragati.taskdun.com/three-day-faculty-training-programuse-of-python-in-maths-labkls-gitbelagavi/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button