ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಪಟ್ಟಣದ ಕರ್ನಾಟಕ ರಾಜ್ಯ ಪೊಲೀಸ್ ತರಬೇತಿ ಶಾಲೆಯಲ್ಲಿ ಕಳೆದ ಎರಡು
ದಶಕಗಳಂದ ಸಶಸ್ತ್ರ ಮೀಸಲು ಸಬ್ ಇನ್ಸಪೆಕ್ಟರ್ (ಎ.ಆರ್.ಎಸ್.ಐ) ಹುದ್ದೆಯಲ್ಲಿ
ಸೇವೆಯಲ್ಲಿರುವ ಪರಸಪ್ಪ ಸದೆಪ್ಪ ಪಾಟೀಲ ಅವರಿಗೆ 2016-17ನೇ ಸಾಲಿನ ಕೇಂದ್ರ ಗೃಹ
ಸಚಿವರ ಪದಕ ಲಭಿಸಿದ್ದು, ಕಳೆದ ಜ.5ರಂದು ಬೆಂಗಳೂರಿನಲ್ಲಿ ನಡೆದ ಪದಕ ಪ್ರದಾನ
ಸಮಾರಂಭದಲ್ಲಿ ರಾಜ್ಯದ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಪಾಟೀಲ ಅವರಿಗೆ ಕೇಂದ್ರ ಗೃಹ
ಸಚಿವರ ಪರವಾಗಿ ಪದಕವನ್ನು ನೀಡಿ ಅಭಿನಂದಿಸಿದರು.
ಪಿ.ಎಸ್ ಪಾಟೀಲ ಮೂಲತಃ ಬೆಳಗಾವಿ ತಾಲೂಕು ಭೂತರಾಮನಹಟ್ಟಿಯವರು. ತರಬೇತಿ ಶಾಲೆಯಲ್ಲಿ
ಕಳೆದ 20 ವರ್ಷಗಳಿಂದ ಕವಾಯತು ಬೋಧಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೊಸದಾಗಿ
ಇಲಾಖೆಗೆ ನೇಮಕಗೊಳ್ಳುವ ಪೊಲೀಸ್ ಕಾನ್ಸಟೇಬಲ್ಗಳು ತಮ್ಮ ಬುನಾದಿ ತರಬೇತಿಯನ್ನು
ಪಡೆಯಲು ತರಬೇತಿ ಶಾಲೆಗೆ ಆಗಮಿಸಿದಾಗ ಅವರಿಗೆ ಉತೃಷ್ಟ ಗುಣಮಟ್ಟದ ಹೊರಾಂಗಣ
ತರಬೇತಿಯನ್ನು ನೀಡುವಲ್ಲಿ ಪಿ.ಎಸ್ ಪಾಟೀಲ ವಿಶೇಷ ಮುತುವರ್ಜಿ ವಹಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಅವರ ಸೇವೆಯನ್ನು ಪರಿಗಣಿರುವ ಕೇಂದ್ರ ಸಕರ್ಾರ ಅವರಿಗೆ ಕೇಂದ್ರ
ಸಚಿವರ ವಿಶಿಷ್ಟ ಸೇವಾ ಪದಕವನ್ನು ನೀಡಿ ಗೌರವಿಸಿದೆ. ಪಾಟೀಲ ಅವರಿಗೆ ಪೊಲೀಸ್
ಇಲಾಖೆಯಲ್ಲೇ ಅತ್ಯುನ್ನತ ಎಂದು ಪರಿಗಣಿಸಲಾಗುವ ಕೇಂದ್ರ ಗೃಹ ಸಚಿವರ ಪದಕ ನೀಡಿ
ಗೌರವಿಸಿದ್ದು ತಾಲೂಕಿನ ಪೊಲೀಸ್ ಇಲಾಖೆಯ ಇತಿಹಾಸದಲ್ಲಿ ಮೊದಲು ಎಂಬುದು
ವಿಶೇಷವಾಗಿದೆ.
ವಿಶಿಷ್ಟ ಪದಕ ಪಡೆದು ಇಲಾಖೆಗೆ ಹೆಸರು-ಕೀರ್ತಿ ತಂದಿರುವ ಪಾಟೀಲ ಅವರನ್ನು ತರಬೇತಿ
ಶಾಲೆಯ ಪ್ರಾಂಶುಪಾಲ ಅಮಸಿದ್ಧ ಗೋಂಧಳಿ, ಉಪ ಪ್ರಾಚಾರ್ಯ ಎಸ್.ಡಿ ಸತ್ಯನಾಯ್ಕ,
ಡಿಎಸ್ಪಿ ಎನ್.ನಿಂಗಪ್ಪ ಸೇರಿದಂತೆ ಅಧಿಕಾರಿಗಳು, ಸಿಬ್ಬಂದಿ, ಕುಟುಂಬದ ಸದಸ್ಯರು
ಮತ್ತು ಭೂತರಾಮನಹಟ್ಟಿ ಗ್ರಾಮಸ್ಥರು ಅಭಿನಂದಿಸಿದ್ದಾರೆ.
*ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ 2ನೇ ಯಶಸ್ವಿ ಯಕೃತ್ತು ಕಸಿ*
https://pragati.taskdun.com/kle-institute-dr-prabhakar-kore-hospital2nd-caseliver-transplant-successful/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ