ಪ್ರಗತಿವಾಹಿನಿ ಸುದ್ದಿ;ಬೆಳಗಾವಿ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ನಿರ್ದೇಶನದಂತೆ ಕಾಂಗ್ರೆಸ್ ಪಕ್ಷದಿಂದ ಕರ್ನಾಟಕ ರಾಜ್ಯಾದ್ಯಂತ ಹಮ್ಮಿಕೊಂಡಿರುವ ನಿಯೋಜಿತ “ಪ್ರಜಾಧ್ವನಿ” ಕಾರ್ಯಕ್ರಮದ ಪ್ರಾರಂಭೋತ್ಸವವನ್ನು ಐತಿಹಾಸಿಕ ನಗರ ಬೆಳಗಾವಿ ನಗರದಿಂದ ಪ್ರಾರಂಭಿಸಲಾಗುತ್ತಿದ್ದು, ಭರ್ಜರಿ ಸಿದ್ಧತೆ ನಡೆದಿದೆ. ಕಾರಣ 1924ರಂದು ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ ಅಧ್ಯಕ್ಷತೆಯಲ್ಲಿ ಎ.ಐ.ಸಿ.ಸಿ ಅಧಿವೇಶನ ಜರುಗಿದ ಬೆಳಗಾವಿಯ ಪವಿತ್ರ ಸ್ಥಳ “ವೀರಸೌಧ”ದಲ್ಲಿ ಬುಧವಾರ ಜ.1ರಂದು ಬೆಳಗ್ಗೆ 09:00 ಗಂಟೆಗೆ ಮಹಾತ್ಮಾ ಗಾಂಧೀಜಿ ಅವರ ಪ್ರತಿಮೆಗೆ ಗೌರವ ಸಮರ್ಪಿಸಿ ಚರಕ ಧ್ವಜದ ಧ್ವಜಾರೋಹಣ ಮಾಡಿ ವಂದೇ ಮಾತರಂ ಹಾಗೂ ರಾಷ್ಟ್ರಗೀತೆಗಳನ್ನು ಹಾಡಿ ಪವಿತ್ರ ಪಂಪಾ ಸರೋವರದ ಜಲವನ್ನು ತೆಗೆದುಕೊಂಡು ಬಂದು “ಪ್ರಜಾಧ್ವನಿ ಬಸ್ ಯಾತ್ರೆ”ಯನ್ನು ಉದ್ಘಾಟಿಸಲಾಗುವದು.
ಈ ಸಭೆಯಲ್ಲಿ AICC ಕರ್ನಾಟಕ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ರಣದೀಪ ಸುರ್ಜೆವಾಲಾ, ಕೆಪಿಸಿಸಿ ಅಧ್ಯಕ್ಷರಾದ ಡಿ. ಕೆ. ಶಿವಕುಮಾರ್, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರು ಮತ್ತು ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾದ ಬಿ. ಕೆ. ಹರಿಪ್ರಸಾದ, ಕೆಪಿಸಿಸಿ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರಾದ ಎಂ ಬಿ ಪಾಟೀಲ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಸಲೀಂ ಅಹ್ಮದ್, ಈಶ್ವರ ಖಂಡ್ರೆ, ದ್ರುವನಾರಾಯಣ, ರಾಮಲಿಂಗಾ ರೆಡ್ಡಿ ಹಾಗೂ ಪಕ್ಷದ ಶಾಸಕರು, ವಿಧಾನ ಪರಿಷತ ಸದಸ್ಯರು, ಕೆಪಿಸಿಸಿ ಪದಾಧಿಕಾರಿಗಳು ಹಾಗೂ ಜಿಲ್ಲಾ ಕಾಂಗ್ರೆಸ್ಸಿನ ಅಧ್ಯಕ್ಷರುಗಳು ಹಾಗೂ ಸೇವಾ ದಳದ ಪದಾಧಿಕಾರಿಗಳು, ಮಾದ್ಯಮ ಮಿತ್ರರು ಸೇರಿ “ವೀರಸೌಧ”ದ ಒಳಗಡೆ ಸುಮಾರು 150 ಜನ ಉಪಸ್ಥಿತರಿರುವರು.
ಅದೇ ದಿನ ಸಂಜೆ 04:00 ಗಂಟೆಗೆ ಆಟೋನಗರದಲ್ಲಿರುವ ಉದಯ ಸ್ಕೂಲ್ ಹತ್ತಿರದ “ಅಂಜುಮನ್ ಸಂಸ್ಥೆ”ಯ ಖಾಲಿ ಮೈದಾನದಲ್ಲಿ ಬೆಳಗಾವಿ ನಗರ ಹಾಗೂ ಗ್ರಾಮೀಣ ಕಾಂಗ್ರೆಸ್ ಸಮಿತಿ ವ್ಯಾಪ್ತಿಯ 10 ವಿಧಾನ ಸಭಾ ಕ್ಷೇತ್ರಗಳ “ಪ್ರಜಾ ಧ್ವನಿ” ಬಹಿರಂಗ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ.
’ನಾ ನಾಯಕಿ ಸಮಾವೇಶ’ಕ್ಕೆ ಪ್ರಿಯಾಂಕಾ ಗಾಂಧಿ ಆಗಮನ: ಡಿ.ಕೆ. ಶಿವಕುಮಾರ್
https://pragati.taskdun.com/d-k-shivakumarna-nayaki-samaveshajan16thpriyanka-gandhi/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ