ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿರುವ ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಮಹಾಸಂಸ್ಥೆ ವತಿಯಿಂದ ಜ.21, 22 ರಂದು ಆಯೋಜಿಸಿರುವ ಉತ್ತರ ಕರ್ನಾಟಕ ಉತ್ಸವ 2023 ಕಾರ್ಯಕ್ರಮದ ಲೋಗೊವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಬಿಡುಗಡೆ ಮಾಡಿದರು.
ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಮಹಾ ಸಂಸ್ಥೆಯು ಉತ್ತರ ಕರ್ನಾಟಕ ಉತ್ಸವ 2023″ ಯನ್ನು ಬೆಂಗಳೂರಿನ ಅರಮನೆ ಮೈದಾನದ ಶೀಷ್ ಮಹಲ್ ಪ್ಯಾಲೇಸ್ ಗೇಟ್ ನಂಬರ್ 7 ರಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದೆ.
“ಉತ್ತರ ಕರ್ನಾಟಕ ಭಾಗದಿಂದ ವಿವಿಧ ಉದ್ಯೋಗ ಅರಸಿ ಬಂದು ಬೆಂಗಳೂರು ಮಹಾ ನಗರದಲ್ಲಿ ನೆಲೆಸಿ ನಮ್ಮ ಸಂಸ್ಕೃತಿ ಪರಂಪರೆಯನ್ನು ಉಳಿಸಿ ಬೆಳೆಸಿಕೊಂಡು ಹೋಗಲು ವಿವಿಧ ಬಡಾವಣೆಯಲ್ಲಿ ಸಂಘಗಳನ್ನು ಕಟ್ಟಿಕೊಂಡಿದ್ದು, ಈ ಎಲ್ಲ ಸಂಸ್ಥೆಗಳು ಸೇರಿ ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಮಹಾ ಸಂಸ್ಥೆಯನ್ನು ಕಟ್ಟಿಕೊಂಡು ಮತ್ತಷ್ಟು ಸಂಘಟಿತರಾಗಿದ್ದೇವೆ. ನಾವು ನಮ್ಮವರಿಗಾಗಿ ಕೈ ಜೋಡಿಸುತ್ತ ಎಲ್ಲರನ್ನು ಒಂದೆಡೆ ಸೇರಿಸಲು ಮತ್ತು ಬೆಳೆಯಲು ಒಬ್ಬರಿಗೊಬ್ಬರು ಮೆಟ್ಟಿಲಾಗುವ ದಿಸೆಯಲ್ಲಿ ಹಾಗೂ ನಮ್ಮ ಸಂಸ್ಕೃತಿ ಪರಂಪರೆ ಮುಂದುವರೆಸಲು ಉತ್ತರ ಕರ್ನಾಟಕ ಉತ್ಸವ 23 ರನ್ನು ಬೆಂಗಳೂರು ಅರಮನೆ ಮೈದಾನದ ಶೀಷ್ ಮಹಲ್ ಪ್ಯಾಲೇಸ್ ನಲ್ಲಿ ಬೃಹತ್ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ,” ಎಂದು ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಮಹಾಸಂಸ್ಥೆ ಅಧ್ಯಕ್ಷ ಶಿವಕುಮಾರ ಮೇಟಿ ಹೇಳಿದರು.
“ಈ ಕಾರ್ಯಕ್ರಮದಲ್ಲಿ ಉತ್ತರ ಕರ್ನಾಟಕ ಭಾಗದ ಸಂಸ್ಕೃತಿ ಪರಂಪರೆ, ಉಡುಗೆ ತೊಡುಗೆ ಆಹಾರ ಪದ್ಧತಿ ಎಲ್ಲವನ್ನು ಅನಾವರಣಗೊಳಿಸಲು ಎರಡು ದಿನಗಳ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ,” ಎಂದು ಅವರು ಹೇಳಿದರು.
ದೇ ಸಂದರ್ಭದಲ್ಲಿ ಬೆಂಗಳೂರಿನಲ್ಲಿರುವ ಉತ್ತರ ಕರ್ನಾಟಕ ಭಾಗದ ಜನರ ಸಾಂಸ್ಕೃತಿಕ ಕಾರ್ಯಕ್ರಗಳು ಹಾಗೂ ವಿವಿಧ ಸಾಮಾಜಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ರಾಜ್ಯ ಸರ್ಕಾರ 3.24 ಗುಂಟೆ ಜಮೀನು ಮಂಜೂರು ಮಾಡಿದ್ದರಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹಾಗೂ ಅವರ ಸಚಿವ ಸಂಪುಟದ ಸದಸ್ಯರಿಗೆ ಅಭಿನಂದನೆ ಸಲ್ಲಿಸಲು ಸನ್ಮಾನ ಕಾರ್ಯಕ್ರಮ ಸಹ ಹಮ್ಮಿಕೊಳ್ಳಲಾಗಿದೆ ಎಂದು ಶಿವಕುಮಾರ ಮೇಟಿ ತಿಳಿಸಿದರು.
40 ವರ್ಷ ಮೇಲ್ಪಟ್ಟವರಿಗೆ ಡೆಡ್ಲಿಯಾದೀತು ಚಳಿಗಾಲದ ಈ ಕ್ಷಣ
https://pragati.taskdun.com/winter-may-become-deadly-for-people-over-40-years-of-age/
*ಕಲುಷಿತ ನೀರು ಸೇವನೆ; ಮಹಿಳೆ ದುರ್ಮರಣ; ಹಲವರು ಅಸ್ವಸ್ಥ*
https://pragati.taskdun.com/poluted-waterwoman-died40-people-ill/
*ಬೆಳಗಾವಿ: ಕಾಂಗ್ರೆಸ್ ಪ್ರಜಾಧ್ವನಿ ಬಸ್ ಯಾತ್ರೆಗೆ ಚಾಲನೆ*
https://pragati.taskdun.com/belagavicongressprajadhwani-bus-yatrestartveerasoudha/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ