Kannada NewsKarnataka News

ಹೆದ್ದಾರಿ ಮೇಲೆ 2 ಲಾರಿಗಳು ಬೆಂಕಿಗಾಹುತಿ

 

Home add -Advt

ಪ್ರಗತಿ ವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ನಗರದ ವೈಭವ ನಗರದಲ್ಲಿ ರಾಷ್ಟ್ರೀಯ ಹೆದ್ದಾರಿ ಮೇಲೆ ಲಾರಿಯೊಂದು ಆಕಸ್ಮಿಕ ಬೆಂಕಿ ತಗುಲಿ ಉರಿದು ಭಸ್ಮವಾಗಿದೆ.

ಪುಣಾದಿಂದ ಬೆಂಗಳೂರಿಗೆ ಪೀಠೋಪಕರಣಗಳನ್ನು ಸಾಗಾಟ ಮಾಡುತ್ತಿದ್ದ ಲಾರಿಗೆ ಬೆಂಕಿ ತಗುಲಿದೆ. ಚಾಲಕ ಕೆಲವು ಪೀಠೋಪಕರಣಗಳನ್ನು ಕೆಳಗಿಳಿಸಿದ್ದರೂ ಅರ್ಧದಷ್ಟು ಫರ್ನಿಚರ್‍ಗಳು ಲಾರಿಯ ಸಮೇತ ಸುಟ್ಟು ಹೋಗಿವೆ.
ಈ ಮಾರ್ಗದಲ್ಲಿ ಕೆಲ ಕಾಲ ಸಂಚಾರಕ್ಕೆ ಅಡ್ಡಿಯಾಗಿತ್ತು.

ಕಿತ್ತೂರಿನಲ್ಲಿ:
ಕಿತ್ತೂರಿನಲ್ಲಿ ಶಿವಾ ಪೆಟ್ರೋಲ್ ಪಂಪ್ ಬಳಿ ನಿಲ್ಲಿಸಿದ್ದ ತೆಂಗಿನ ಕಾಯಿ ತುಂಬಿದ್ದ ಲಾರಿಗೆ ಬೆಂಕಿ ಹೊತ್ತಿ ಉರಿದಿದೆ.

 

ಲಾರಿ ಚಾಲಕ ಮತ್ತು ಕ್ಲೀನರ್ ಪೆಟ್ರೋಲ್ ಬಂಕ್ ಬಳಿ ಲಾರಿ ನಿಲ್ಲಿಸಿ ಅಡುಗೆ ಮಾಡುವ ಸಲುವಾಗಿ ಸ್ಟೌ ಗೆ ಬೆಂಕಿ ಹಚ್ಚಿದ್ದು ಆಕಸ್ಮಿಕವಾಗಿ ಲಾರಿಗೆ ತಗುಲಿ ಬೆಂಕಿ ಹೊತ್ತಿಕೊಂಡಿತು.

ಕಿತ್ತೂರು ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

*ಬಜೆಟ್ ಘೋಷಣೆ ಬಹಿರಂಗಪಡಿಸಿದ ಸಿಎಂ ಬೊಮ್ಮಾಯಿ*

Related Articles

Back to top button