Karnataka News

ಮದುವೆ ಮುನ್ನಾ ದಿನ ಕುಸಿದು ಬಿದ್ದು ಮೃತಪಟ್ಟ ಯುವತಿ

ಪ್ರಗತಿ ವಾಹಿನಿ ಸುದ್ದಿ,  ಮಲಪ್ಪುರಂ: ದಾಂಪತ್ಯ  ಜೀವನಕ್ಕೆ ಕಾಲಿಡಬೇಕಾಗಿದ್ದ ಯುವತಿಯೊಬ್ಬಳು ವಿವಾಹದ ಹಿಂದಿನ ದಿನ  ಮನೆಯಲ್ಲಿ ಕುಸಿದು ಬಿದ್ದು ಮೃತಪಟ್ಟಿರುವ ಧಾರುಣ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯ ಪೆರಿಂದಲ್’ಮನ್ನ ಎಂಬಲ್ಲಿ ನಡೆದಿದೆ.
ಪಥೈಕ್ಕರ ಸ್ಕೂಲ್ ಪಡಿ ಕಿಝಕ್ಕೆಥಿಲ್ ನಿವಾಸಿ ಮುಸ್ತಫಾ ಮತ್ತು ಝೀನತ್ ದಂಪತಿಯ ಪುತ್ರಿ ಫಾತಿಮಾ ಬತೂರ್ (19) ಸಾವನ್ನಪ್ಪಿದ ನತದೃಷ್ಟ ಯುವತಿ.
ಜನವರಿ 14ರಂದು ಆಕೆಯ ಮದುವೆ ಮೂರ್ಕರ್ನಾಡ್’ಯ ಯುವಕನೊಂದಿಗೆ ನಿಶ್ಚಯವಾಗಿತ್ತು. ಈ ಹಿನ್ನೆಲೆಯಲ್ಲಿ ಕಳೆದ ರಾತ್ರಿ ಮನೆಯಲ್ಲಿ ಮದುರಂಗಿ ಕಾರ್ಯಕ್ರಮ ನಡೆಯುತ್ತಿತ್ತು.
ಈ ವೇಳೆ ಫೋಟೋ ತೆಗೆಯುವಾಗ ಯುವತಿ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಇಡೀ ಗ್ರಾಮ ಶೋಕತಪ್ತವಾಗಿದೆ.
https://pragati.taskdun.com/53-calls-for-belagavi-sp-phone-in-programme/

Related Articles

Back to top button