Latest

*ಸ್ಯಾಂಟ್ರೋ ರವಿ ವಿರುದ್ಧ ಮತ್ತೊಂದು ಕೇಸ್ ದಾಖಲು*

ಪ್ರಗತಿವಾಹಿನಿ ಸುದ್ದಿ; ಮೈಸೂರು: ರಾಜ್ಯ ರಾಜಕಾರಣದಲ್ಲಿ ಭಾರಿ ಸದ್ದು ಮಾಡಿದ್ದ ಕೆ.ಎಸ್.ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿ ವಿರುದ್ಧ ಈಗ ಮತ್ತೊಂದು ಪ್ರಕರಣ ದಾಖಲಾಗಿದೆ.

ಮೈಸೂರಿನ ದೇವರಾಜ್ ಪೊಲಿಸ್ ಠಾಣೆಯಲ್ಲಿ ಸ್ಯಾಂಟ್ರೋ ರವಿ ಪತ್ನಿ ಎನ್ನಲಾದ ಮಹಿಳೆಯಿಂದ ಮತ್ತೊಂದು ಪ್ರಕರಣ ದಾಖಲಾಗಿದೆ. ಸ್ಯಾಂಟ್ರೋ ರವಿ, ಪ್ರಕಾಶ್ ಎಂಬುವವರು ನನ್ನ ಬ್ಯಾಮ್ಕ್ ಚೆಕ್ ಬುಕ್ ಕಳುವು ಮಾಡಿ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.

2022ರ ಸೆ.22ರಂದು ದೇವರಾಜ ಮಾರ್ಕೆಟ್ ಗೆ ಹೋಗಿದ್ದೆ. ನನ್ನ ಸ್ಕೂಟರ್ ಡಿಕ್ಕಿಯಲ್ಲಿ 2 ಚೆಕ್ ಬುಕ್ ಇಟ್ಟಿದ್ದೆ. ಅದನ್ನು ಕದ್ದು ನನ್ನ ಸಹಿ ಇರುವ ಎರಡು ಚೆಕ್ ಬುಕ್ ಗಳನ್ನು ಬ್ಯಾಂಕ್ ಗೆ ನೀಡಿದ್ದಾರೆ. ಇನ್ನೆರಡು ಚೆಕ್ ಬುಕ್ ಗಳನ್ನು ತಮ್ಮ ಬಳಿಯೇ ಇರಿಸಿಕೊಂಡಿದ್ದಾರೆ. ಸೆ.24ರಂದು ನಾವು ದೇವರಾಜ್ ಠಾಣೆಗೆ ದೂರು ನೀಡಿದ್ದೆ ಎಂದು ಮಹಿಳೆ ತಿಳಿಸಿದ್ದಾರೆ.

ಪ್ರಕರಣ ಸಂಬಂಧ ಸ್ಯಾಂಟ್ರೋ ರವಿ ವಿರುದ್ಧ ಐಪಿಸಿ ಸೆಕ್ಷನ್ 465, 468, 506, 420 ಹಾಗೂ 34 ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

Home add -Advt

*ನಮ್ಮಂತವರಿಗೆ ಇದನ್ನು ಸಹಿಸಲು ಸಾಧ್ಯವಿಲ್ಲ ಎಂದ ಗೃಹ ಸಚಿವ ಅರಗ ಜ್ಞಾನೇಂದ್ರ*

https://pragati.taskdun.com/home-minister-raga-jnanendrareactionh-d-kumaraswamycongress/

Related Articles

Back to top button