Latest

*ಇಂದಿನ ಮಕ್ಕಳೇ ಭವ್ಯಭಾರತದ ನಿರ್ಮಾತೃರು: ಸಚಿವ ಮುರುಗೇಶ ನಿರಾಣಿ*

ಪ್ರಗತಿವಾಹಿನಿ ಸುದ್ದಿ; ಬೀಳಗಿ: ಮಕ್ಕಳು ಈದೇಶದ ಆಸ್ತಿ. ಪ್ರತಿಮಗುವಿಗೂ ಗುಣಮಟ್ಟದ ಶಿಕ್ಷಣ ದೊರೆಯುವಂತೆ ಮಾಡುವುದು ಹಾಗೂ ಅವರು ಸ್ವಾವಲಂಬಿಯಾಗಿ ದೇಶದ ಶಕ್ತಿಯಾಗಿ ರೂಪಗೊಳ್ಳುವಂತೆ ಮಾಡುವುದು ಸಮಾಜದ ಕರ್ತವ್ಯವಾಗಿದೆ ಎಂದು ಸಚಿವ ಮುರುಗೇಶ ನಿರಾಣಿ ಹೇಳಿದ್ದಾರೆ.

ನಗರದ ನಿರಾಣಿ ಶುಗರ್ಸ್ ಆವರಣದಲ್ಲಿ ನಡೆದ ಬೀಳಗಿ ಮತಕ್ಷೇತ್ರ ವ್ಯಾಪ್ತಿಯ ವಿದ್ಯಾರ್ಥಿಗಳ ಕೈಗಾರಿಕಾ ಭೇಟಿ ಹಾಗೂ ಪ್ರೇರಣಾ ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಿದ ಅವರು ಮಕ್ಕಳಿಗೆ ಭವಿಷ್ಯದ ಕುರಿತು ಮಹತ್ವಾಕಾಂಕ್ಷೆ ಬೆಳೆಯಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಪ್ರತಿಮಗುವಿನಲ್ಲಿಯೂ ಸಾಧನೆಮಾಡುವ ಶಕ್ತಿಇದೆ. ಅವರಲ್ಲಿ ಅಂತಃಸತ್ವವನ್ನು ಜಾಗೃತಗೊಳಿಸಿ ಅವಕಾಶಗಳನ್ನು ಸೃಷ್ಟಿಮಾಡಿಕೊಡುವ ಕೆಲಸ ನಾವು ಮಾಡಬೇಕು. ಸಾಹಸಿಯಾದವರು ಇತರರಿಗಿಂತ ವಿಭಿನ್ನರಾಗಿರುತ್ತಾರೆ. ಸಾಧಿಸುವ ಹಸಿವು ಸಮಾಜಕಟ್ಟುವ ಮಹಾನ್ಕಾರ್ಯಕ್ಕೆ ಮುನ್ನುಡಿಬರೆಯುತ್ತದೆ. ನಿಶ್ಚಿತ ಗುರಿ ಇಟ್ಟುಕೊಂಡು ಛಲವಿಟ್ಟು ಶ್ರಮಿಸಿದರೆ ಯಶಸ್ಸು ಕಟ್ಟಿಟ್ಟಬುತ್ತಿ. ನಿಮ್ಮ ಹಾಗೆ ಗ್ರಾಮೀಣ ಪ್ರದೇಶದಿಂದ ಬಂದು ನಾನೂ ಯಶಸ್ಸು ಸಾಧಿಸಿ ನಿಮ್ಮ ಮುಂದೆ ನಿಂತಿದ್ದೀನಿ. ಎಂದು ಅವರು ವಿದ್ಯಾರ್ಥಿಗಳ ಭವಿಷ್ಯದ ಕುರಿತು ಸ್ಪೂರ್ತಿ ತುಂಬಿದರು.

ಬೀಳಗಿ ಮತಕ್ಷೇತ್ರದ ಶಿಕ್ಷಣ ಸುಧಾರಣೆಗೆ ಹೆಚ್ಚಿನ ಒತ್ತುನೀಡಿದ್ದೇನೆ. ಪ್ರತಿವರ್ಷ ನಮ್ಮ ಮಕ್ಕಳು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ ಗಮನಾರ್ಹ ಸಾಧನೆ ಮಾಡುತ್ತಿದ್ದಾರೆ. ಪ್ರತಿಶಾಲೆಗೂ ಸ್ವಂತ ಖರ್ಚಿನಲ್ಲಿ ಸ್ಮಾರ್ಟ್ಕ್ಲಾಸ್ನಿರ್ಮಿಸುವ ಕ್ರಮವಹಿಸಿದ್ದೇನೆ. ಮಕ್ಕಳ ಶಿಕ್ಷಣ ಗುಣಮಟ್ಟ ಉನ್ನತೀಕರಿಸಲು ಹಾಗೂ ಅತ್ಯುನ್ನತ ಫಲಿತಾಂಶ ಪಡೆಯಲು ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ವಿವಿಧ ವಿಶೇಷ ಚಟುವಟಿಕೆಗಳನ್ನು ಆಯೋಜಿಸುತ್ತಿದ್ದೇವೆ ಎಂದು ಅವರು ಹೇಳಿದರು.

ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಸಚಿವರು: ಈ ಸಂದರ್ಭದಲ್ಲಿ ವಿದ್ಯಾರ್ಥಿಗಳೊಂದಿಗೆ ನಡೆಸಿದ ಮುರುಗೇಶ ನಿರಾಣಿ ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸಿದರು. ಬೀಳಗಿ ಮತಕ್ಷೇತ್ರದ ಶಿಕ್ಷಣ ಸುಧಾರಣೆಗೆ ನಿಮ್ಮ ಕನಸು ಏನು? ಎಂಬ ವಿದ್ಯಾರ್ಥಿನಿಯೊಬ್ಬಳ ಪ್ರಶ್ನೆಗೆ ಉತ್ತರಿಸಿದ ಸಚಿವರು ನನ್ನ ಮತ ಕ್ಷೇತ್ರ ವಿದ್ಯಾರ್ಥಿಗಳು ಐ.ಎ.ಎಸ್‌. ಐ.ಪಿ.ಎಸ್ ಅಧಿಕಾರಿಗಳಾಗಬೇಕು, ಒಲಂಪಿಕ್ ನಲ್ಲಿ ಮೆಡಲ್ಗೆಲ್ಲಬೇಕು, ಉದ್ಯಮಿಗಳಾಗಿ ನನಗಿಂತ ದೊಡ್ಡ ಕಾರ್ಖಾನೆ ಹಾಗೂ ಮನೆ ಕಟ್ಟಬೇಕು ಎಂದು ಅವರು ತಮ್ಮ ಕನಸನ್ನು ಮಕ್ಕಳೊಡನೆ ಹಂಚಿಕೊಂಡರು, ಈ ಸಂದರ್ಭದಲ್ಲಿ ಸಚಿವರು ಮತ ಕ್ಷೇತ್ರ ಅಭಿವೃದ್ಧಿ, ನೀರಾವರಿ, ಕೃಷಿ, ಕರ್ನಾಟಕ ಕೈಗಾರಿಕಾ ರಂಗ, ಆತ್ಮನಿರ್ಭರ ಭಾರತ ಸೇರಿದಂತೆ ಹಲವು ವಿಷಯಗಳ ಕುರಿತು ಸಂವಾದ ನಡೆಸಿದರು.

ಬೀಳಗಿ ಮತ ಕ್ಷೇತ್ರದ ಬೀಳಗಿ, ಬಾಗಲಕೋಟ ಹಾಗೂ ಬಾದಾಮಿ ತಾಲೂಕಿನ 80 ಪ್ರೌಢಶಾಲೆ, ಪದವಿಪೂರ್ವ ಹಾಗೂ ಪದಿವಿ ಕಾಲೇಜುಗಳ ಸುಮಾರು 8 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ನಿರಾಣಿ ಸಕ್ಕರೆ ಕಾರ್ಖಾನೆಯಲ್ಲಿ ಸಂಚರಿಸಿ ಸಕ್ಕರೆ ಉತ್ಪಾದನೆಯ ಬಗೆಯನ್ನು ವಿಕ್ಷೀಸಿದರು. ಈ ಸಂದರ್ಭದಲ್ಲಿ ಸಚಿವ ಮುರುಗೇಶ ನಿರಾಣಿ ಪ್ರತಿಮಕ್ಕಳಿಗೂ ಒಂದು ಅಲಾರಾಂ ಗಡಿಯಾರ ಮತ್ತು 5 ಕೆಜಿ ಸಕ್ಕರೆ ವಿತರಿಸಿದರು.

ಈ ಸಂದರ್ಭದಲ್ಲಿ ಮಾಜಿ ವಿಧಾನಪರಿಷತ್ಸದಸ್ಯ ನಾರಾಯಾಣ ಸಾಭಾಂಡಗೆ, ಬೀಳಗಿ, ಬಾಗಲಕೋಟ ಹಾಗೂ ಬಾದಾಮಿ ಕ್ಷೇತ್ರ ಶಿಕ್ಷಣಾಧಿಕಾರಿಗಳು, ನಿವೃತ್ತ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಿ. ಎಂ. ದಾಸರ, ಗುರುರಾಜಲೂ ತಿ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ವಿವಿಧ ಕಾಲೇಜುಗಳ ಉಪನಿರ್ದೇಶಕರು ಭಾಗವಹಿಸಿದ್ದರು.

*ವಿಧಾನಸೌಧದ ಮುಂಭಾಗದಲ್ಲಿ ಸುಭಾಸ್ ಚಂದ್ರ ಬೋಸ್ ಪ್ರತಿಮೆ ಮರುಸ್ಥಾಪನೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*

https://pragati.taskdun.com/vidhana-soudharestoration-of-subhas-chandra-bose-statue-chief-minister-basavaraja-bommai/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button