Uncategorized

ಬೆಳಗಾವಿ PSI ಹೆಸರಲ್ಲಿ ನಕಲಿ ಇನ್ಸ್ಟಾಗ್ರಾಂ ಅಕೌಂಟ್ : 50ಕ್ಕೂ ಹೆಚ್ಚು ಮಹಿಳೆಯರ ಸ್ನೇಹ ಬೆಳೆಸಿ ವಂಚನೆ; ಆರೋಪಿ ಬಂಧನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಪಿಎಸ್ಐ ಒಬ್ಬರ ಹೆಸರಿನಲ್ಲಿ ನಕಲಿ ಇನ್ ಸ್ಟಾಗ್ರಾಂ ಅಕೌಂಟ್ ಓಪನ್ ಮಾಡಿ 50ಕ್ಕೂ ಹೆಚ್ಚು ಮಹಿಳೆಯರ ಸ್ನೇಹ ಬೆಳೆಸಿ ವಂಚಿಸಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಸಧ್ಯ ಹುಬ್ಬಳ್ಳಿ ನಿವಾಸಿ, ಅಥಣಿ ಮೂಲದ ವಿಜಯ ಶ್ರೀಶೈಲ ಬಾರ್ಲಿ (28) ಆರೋಪಿ.

ದಿನಾಂಕ: 20/11/2022 ರಂದು ಗ್ರಾಮೀಣ ಠಾಣೆ ಪಿಎಸ್‌ಐ ಅನೀಲಕುಮಾರ ಕುಂಬಾರ ಇವರು ಜಿಲ್ಲಾ ಸಿಇಎನ್ ಅಪರಾಧ ಪೊಲೀಸ್ ಠಾಣೆಗೆ ಹಾಜರಾಗಿ ತಮ್ಮ ಹೆಸರಿನಲ್ಲಿ ನಕಲಿ ಇನ್‌ಸ್ಟಾಗ್ರಾಮ್ ಖಾತೆಯನ್ನು ತೆರೆದು ನನ್ನ ಪೋಟೊಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ದೂರು ದಾಖಲಿಸಿದ್ದರು.

ಈ ಕುರಿತು ಜಿಲ್ಲಾ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೆಳಗಾವಿ ಜಿಲ್ಲಾ ಸಿಇಎನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ ಬಿ ಆರ್ ಗಡ್ಡೆಕರ ಇವರು ವೈಜ್ಞಾನಿಕ ರೀತಿಯಲ್ಲಿ ಈ ಕೇಸಿನ ತನಿಖೆಯನ್ನು ಕೈಗೊಂಡು ಈ ಪ್ರಕರಣದ ಆರೋಪಿಯನ್ನು ಪತ್ತೆ ಮಾಡಿ ಗುರುವಾರ ಬಂಧಿಸಿದ್ದಾರೆ.

ಆತನನ್ನು ವಿಚಾರಣೆಗೆ ಒಳಪಡಿಸಿದಾಗ ಪಿಎಸ್‌ಐರವರ ಹೆಸರಿನಲ್ಲಿ ನಕಲಿ ಇನ್‌ಸ್ಟಾಗ್ರಾಂ ಖಾತೆಯನ್ನು ಸೃಷ್ಠಿಸಿ ಸುಮಾರು ಒಂದು ಲಕ್ಷ ಹನ್ನೆರಡು ಸಾವಿರ (1,12,000) ಫಾಲೋವರಗಳಿದ್ದು, ಈ ಐಡಿಯಿಂದ ನಾನೇ ಪಿಎಸ್‌ಐ ಎಂದು ಹೇಳಿಕೊಂಡು ಸುಮಾರು 50 ಕ್ಕಿಂತಲೂ ಹೆಚ್ಚು ಮಹಿಳೆಯರಿಗೆ ನಂಬಿಸಿ ಸ್ನೇಹ ಬೆಳೆಸಿ ಮೋಸತನದಿಂದ ನೌಕರಿ ಹಾಗೂ ಇನ್ನಿತರ ಆಮೀಷಗಳನ್ನು ಒಡ್ಡಿ ಅವರ ಕಡೆಯಿಂದ 4 ಲಕ್ಷ ರೂಪಾಯಿ ಹಣವನ್ನು ಪಡೆದುಕೊಂಡು ವಂಚಿಸಿದ್ದು ಬೆಳಕಿಗೆ ಬಂದಿದೆ.

ಇದೇ ರೀತಿ 9 ನಕಲಿ ಇನಸ್ಟಾಗ್ರಾಂ ಐಡಿಗಳನ್ನು ಕ್ರಿಯೇಟ್ ಮಾಡಿದ್ದ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರಪಡಿಸಿದ್ದು, ನ್ಯಾಯಾಂಗ ಬಂಧನದಲ್ಲಿ ಇಡಲಾಗಿದೆ.

ಈ ಕಾರ್ಯಾಚರಣೆಯಲ್ಲಿ ಜಿಲ್ಲಾ ಸಿಇಎನ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿಗಳಾದ ಹೆಚ್ ಎಲ್ ಧರ್ಮಟ್ಟಿ ಪಿಎಸ್‌ಐ, ಎ ಹೆಚ್ ಭಜಂತ್ರಿ ಎಎಸ್‌ಐ, ಕೆ ಆರ್ ಇಮಾಮನವರ ಎಎಸ್‌ಐ,  ಜಿ ಎಸ್ ಲಮಾಣಿ,  ಎಸ್ ಐ ಭಂಡಿ,  ಎನ್ ಆರ್ ಘಡೆಪ್ಪನವರ, ಈರಣ್ಣ ನಡುವಿನಹಳ್ಳಿ, ಸಿ ಎ ಕೆಳಗಡೆ ಇವರು ಭಾಗವಹಿಸಿದ್ದರು.

ಸವದತ್ತಿ ಬಳಿ ವ್ಯಕ್ತಿಯ ಮರ್ಡರ್

https://pragati.taskdun.com/murder-of-a-person-near-savadatti/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button