ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮುಂಬೈ ಮೂಲಕ ಬೆಳಗಾವಿಗೆ ಗುರುವಾರ ಆಗಮಿಸಿದ ಭಾರತ ಸಂವಿಧಾನದ ಪಿತಾಮಹ ಜ್ಯೋತಿ ಯಾತ್ರೆಯನ್ನು ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಹಿರೇಬಾಗೇವಾಡಿಯಲ್ಲಿ ಸ್ವಾಗತಿಸಿ ಶುಭ ಕೋರಿದರು.
ಈ ಜ್ಯೋತಿ ಯಾತ್ರೆಯು ಮುಂಬೈ ಮೂಲಕ ಹಿರೇಬಾಗೇವಾಡಿಗೆ ಆಗಮಿಸಿದ್ದು ಸಂಜೆ ಬೈಲಹೊಂಗಲದ ಅಂಬೇಡ್ಕರ್ ಉದ್ಯಾನವನಕ್ಕೆ ತಲುಪಲಿದೆ. ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು ಭಾರತಕ್ಕೆ ಸುಭದ್ರವಾದ ಸಂವಿಧಾನವನ್ನು ಕಟ್ಟಿಕೊಟ್ಟಿದ್ದಾರೆ. ಅದು ನಮಗೆಲ್ಲ ಆದರ್ಶವಾಗಿರುವದಲ್ಲದೆ, ಭಾರತ ಇಡೀ ವಿಶ್ವದಲ್ಲೇ ಬಲಿಷ್ಠ ದೇಶವಾಗಲು ಕಾರಣವಾಗಿದೆ. ಈ ಸಂವಿಧಾನ ಯಾತ್ರೆಯು ಗಣರಾಜ್ಯೋತ್ಸವದ ದಿನವೇ ಬೆಳಗಾವಿಗೆ ಆಗಮಿಸಿರುವುದು ವಿಶೇಷವಾಗಿದೆ. ಈ ಯಾತ್ರೆ ಯಶಸ್ವಿಯಾಗಲಿ ಎಂದು ಹೆಬ್ಬಾಳಕರ್ ಹಾರೈಸಿದರು.
ಕಳಸಾರೋಹಣ ಕಾರ್ಯಕ್ರಮಕ್ಕೆ ಲಕ್ಷ್ಮೀ ಹೆಬ್ಬಾಳಕರ್ ಚಾಲನೆ
https://pragati.taskdun.com/lakshmi-hebbalkar-drives-for-kalsarohana-program/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ