ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವಾಕರಸಾ ಸಂಸ್ಥೆ, ಬೆಳಗಾವಿ ವಿಭಾಗದಿಂದ ಬೆಳಗಾವಿ ಸಿಬಿಟಿ-ಮಜಗಾಂವ, ಸಿಬಿಟಿ-ವಡಗಾಂವ, ಸಿಬಿಟಿ-ಅನಿಗೋಳ ಮಾರ್ಗಗಳಲ್ಲಿ ‘ಪಿಂಕ್ ಬಸ್’ (ಮಹಿಳಾ ವಿಶೇಷ ವಾಹನ)ಗಳನ್ನು ಪ್ರಾರಂಭಿಸಲಾಗಿದೆ.
ಬೆಳಗಾವಿ ಉತ್ತರ ಮತಕ್ಷೆತ್ರ ಶಾಸಕ ಅನಿಲ ಬೆನಕೆ, ಅವರು ನೂತನ ಬಸ್ ಸಂಚಾರಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಇನ್ನರ್ ವ್ಹೀಲ್ ಮಹಿಳಾ ಕ್ಲಬ್‌ನ ಪ್ರೆಸಿಡೆಂಟ್ ಶಾಲಿನಿ ಚೌಗಲಾ, ಕಾರ್ಯದರ್ಶಿ ಪುಷ್ಪಾಂಜಲಿ ಹಾಗೂ ಚೇರ್ ಪರ್ಸನ್ ಸುನಂದಾ ಕರಲಿಂಗನ್ನವರ ಉಪಸ್ಥಿತರಿದ್ದರು.
ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ವಾಕರಸಾ ಸಂಸ್ಥೆಯ ಪಿ.ವೈ.ನಾಯಕ, ವಿಭಾಗೀಯ ಸಂಚಾರ ಅಧಿಕಾರಿ ಖೇಮಸಿಂಗ್ ಲಮಾಣಿ, ವಿಭಾಗೀಯ ತಾಂತ್ರಿಕ ಶಿಲ್ಪಿ ರಾಧಾಕೃಷ್ಣ, ಘಟಕ ವ್ಯವಸ್ಥಾಪಕರು, ಬೆಳಗಾವಿ 2 ನೇ ಘಟಕ ಎ ವೈ ಶಿರಗುಪ್ಪಿಕರ, ಕಾರ್ಮಿಕ ಕಲ್ಯಾಣಾಧಿಕಾರಿ ಸತ್ಯನಾರಾಯಣ, ಭದ್ರತಾ ಮತ್ತು ಜಾಗೃತಾಧಿಕಾರಿಗಳು ಬಿ.ಡಿ.ಗುರಿಕಾರ ಹಾಗೂ ಸಂಸ್ಥೆಯ ಇತರ ಅಧಿಕಾರಿಗಳು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಮಹಿಳಾ ವಿಶೇಷ ಬಸ್ ವೇಳಾಪಟ್ಟಿ:
* ಸಿಬಿಟಿ – ವಡಗಾಂವ – 8:40, 17:15, ವಡಗಾಂವ – ಸಿಬಿಟಿ 9:15, 17:50
* ಸಿಬಿಟಿ-ಅನಿಗೋಳ – 8:50, 17:25, ಅನಿಗೋಳ – ಸಿಬಿಟಿ 9:30, 18:00
* ಸಿಬಿಟಿ-ಮಜಗಾಂವ- 8:25, 17:30, ಮಜಗಾಂವ – ಸಿಬಿಟಿ 8:50, 18:05
*ಮಾಜಿ ಸಿಎಂ ಎಸ್.ಎಂ.ಕೃಷ್ಣಗೆ ಪದ್ಮವಿಭೂಷಣ ಗೌರವ; ಅಭಿನಂದನೆ ಸಲ್ಲಿಸಿದ ಸಿಎಂ ಬೊಮ್ಮಾಯಿ*
https://pragati.taskdun.com/s-m-krishnapadmavibhushanacm-basavaraj-bommai/
ದೇಶೀಯ ಆಹಾರ ಬಳಸಿ; ಆರೋಗ್ಯವಾಗಿರಿ : ಸಚಿವ ಗೋವಿಂದ ಕಾರಜೋಳ
https://pragati.taskdun.com/use-local-food-stay-healthy-minister-govinda-karajola/
https://pragati.taskdun.com/arrest-of-two-theft-accused-by-katkol-police/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ