Latest

ಗೋರಖನಾಥ ಮಂದಿರದ ಮೇಲಿನ ದಾಳಿಕೋರನಿಗೆ ಮರಣ ದಂಡನೆ

ಪ್ರಗತಿವಾಹಿನಿ ಸುದ್ದಿ, ಲಕ್ನೋ: ಉತ್ತರ ಪ್ರದೇಶದ ಪ್ರಸಿದ್ಧ ಶ್ರೀ  ಗೋರಖನಾಥ ದೇಗುಲದ ಹೊರಗೆ ಪೊಲೀಸರ ಮೇಲೆ ಹಲ್ಲೆ ನಡೆಸಿದ ಅಹ್ಮದ್‌ ಮುರ್ತಾಜಾ ಅಬ್ಬಾಸಿಗೆ ಮರಣದಂಡನೆ ವಿಧಿಸಿ  ವಿಶೇಷ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನ್ಯಾಯಾಲಯ ತೀರ್ಪಿತ್ತಿದೆ.

ದಾಖಲೆಯ 60 ದಿನಗಳ ನಿರಂತರ ವಿಚಾರಣೆಯ ನಂತರ ಈ ತೀರ್ಪು ಪ್ರಕಟಿಸಲಾಗಿದೆ. ಭಯೋತ್ಪಾದನಾ ನಿಗ್ರಹ ದಳದ ವಿಶೇಷ ನ್ಯಾಯಾಧೀಶರಾದ ವಿವೇಕಾನಂದ ಶರಣ್ ತ್ರಿಪಾಠಿ ಅವರು ಅಬ್ಬಾಸಿಗೆ 44,000 ರೂ. ದಂಡ ಕೂಡ ವಿಧಿಸಿದ್ದಾರೆ.

ಆರೋಪಿ ಕಳೆದ ವರ್ಷ ಏಪ್ರಿಲ್‌ನಲ್ಲಿ ದೇವಸ್ಥಾನದ ಹೊರಗೆ ಇಬ್ಬರು ಪೊಲೀಸರ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿದ್ದಲ್ಲದೆ ಇತರರನ್ನು ಬೆದರಿಸಿದ್ದ.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೇ ಶ್ರೀ ಗೋರಖನಾಥ ದೇವಾಲಯದ ಮುಖ್ಯಸ್ಥರಾಗಿರುವ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಬಿಗಿ ಭದ್ರತೆ ಇರುತ್ತದೆ. ಆದರೆ ಅಬ್ಬಾಸಿ 2022ರ ಏಪ್ರಿಲ್ 3ರಂದು ದೇವಾಲಯಕ್ಕೆ ಪ್ರವೇಶಿಸಲು ಪ್ರಯತ್ನಿಸಿದ್ದ. ಮತ್ತು ಅಲ್ಲಿ ನಿಯೋಜಿಸಲಾಗಿದ್ದ ಭದ್ರತಾ ಸಿಬ್ಬಂದಿ ಮೇಲೆ ಕುಡಗೋಲಿನಿಂದ ದಾಳಿ ಮಾಡಿದ್ದ. ಇಬ್ಬರು ಪ್ರಾಂತೀಯ ಸಶಸ್ತ್ರ ಕಾನ್‌ಸ್ಟೆಬಲ್‌ಗಳಾದ ಗೋಪಾಲ್ ಗೌರ್ ಮತ್ತು ಅನಿಲ್ ಪಾಸ್ವಾನ್ ಗಾಯಗೊಂಡಿದ್ದರು. ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿ ಈತನನ್ನು ಬಂಧಿಸಿದ್ದರು.

“ಐಪಿಸಿ ಸೆಕ್ಷನ್ 121 ರ ಅಡಿಯಲ್ಲಿ ಅಬ್ಬಾಸಿಗೆ ಮರಣದಂಡನೆ ಮತ್ತು ಸೆಕ್ಷನ್ 307 ರ ಅಡಿಯಲ್ಲಿ ಜೀವಾವಧಿ ಶಿಕ್ಷೆಯಾಗಿದೆ. ಕಳೆದ 60 ದಿನಗಳಲ್ಲಿ ಪ್ರಕರಣದ  ನಿಯಮಿತ ವಿಚಾರಣೆ ನಡೆಸಲಾಯಿತು” ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಪ್ರಶಾಂತ್ ಕುಮಾರ್ ಹೇಳಿದ್ದಾರೆ.

ಅಬ್ಬಾಸಿ ಐಸಿಸ್‌ನಿಂದ ತರಬೇತಿ ಪಡೆದಿದ್ದು, ಭಯೋತ್ಪಾದಕರು ಮತ್ತು ಭಯೋತ್ಪಾದಕರ ಪರ ಸಹಾನುಭೂತಿ ಹೊಂದಿರುವವರೊಂದಿಗೆ ನೇರ ಸಂಪರ್ಕದಲ್ಲಿದ್ದ ಎಂದು ಉತ್ತರ ಪ್ರದೇಶ ಪೊಲೀಸರು ಈ ಹಿಂದೆ ಹೇಳಿದ್ದರು. “ಅವನು ಐಸಿಸ್‌ನ ಒಂಟಿ ತೋಳ ಮತ್ತು ಭಯೋತ್ಪಾದನೆಗೆ ಹಣಕಾಸು ಒದಗಿಸುವಲ್ಲಿ ನಿಪುಣನಾಗಿದ್ದ. ಜಾಲತಾಣಗಳಲ್ಲಿ ಭಯೋತ್ಪಾದನೆ ಸಾಹಿತ್ಯ ಹರಡುವಲ್ಲಿ ತೊಡಗಿಸಿಕೊಂಡಿದ್ದ ಆತ ಐಸಿಸ್ ಜನರೊಂದಿಗೆ ಸಂಪರ್ಕದಲ್ಲಿದ್ದ ಎಂದು ಡಿಜಿಪಿ ದೇವೇಂದ್ರ ಸಿಂಗ್ ಚೌಹಾಣ್ ಹೇಳಿದ್ದಾರೆ.

ಮಹಿಳೆಯರು ಹೆಚ್ಚಿನ ಸಾಧನೆಯ ಗುರಿ ಹೊಂದಲಿ: ಡಾ. ಸೋನಾಲಿ ಸರ್ನೋಬತ್

https://pragati.taskdun.com/let-women-aim-for-greater-achievement-dr-sonali-sarnobat/

*ಸಿಎಂ ಭೇಟಿಯಾದ ರಮೇಶ್ ಜಾರಕಿಹೊಳಿ; CD ಕೇಸ್ ಸಿಬಿಐಗೆ ವಹಿಸುವಂತೆ ಮನವಿ*

https://pragati.taskdun.com/ramesh-jarakiholicd-casecbicm-basavaraj-bommaimeet/

*ಅಬಕಾರಿ ಇನ್ಸ್ ಪೆಕ್ಟರ್ ನನ್ನೇ ಶೂಟ್ ಮಾಡಿ ಹತ್ಯೆಗೈದಿದ್ದ ಮಾಜಿ ಸಚಿವ; ಗೋಕಾಕ್ ಮಿಲ್ ಹತ್ಯಾಕಾಂಡದ ನೇತೃತ್ವ ವಹಿಸಿದ್ದೂ ಇದೇ ಶಾಸಕರು; ರಮೇಶ್ ಜಾರಕಿಹೊಳಿ ವಿರುದ್ಧ ಎಂ.ಲಕ್ಷ್ಮಣ್ ಗಂಭೀರ ಆರೋಪ*

https://pragati.taskdun.com/kpcc-m-lakshmanpress-meetramesh-jarakiholid-k-shivakumaraudio-bomb/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button