Latest

ಜಿಮ್ನಾಸ್ಟ್ ದೀಪಾ ಕರ್ಮಾಕರ್ ಗೆ 21 ತಿಂಗಳ ನಿಷೇಧ

ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ಭಾರತೀಯ ಜಿಮ್ನಾಸ್ಟಿಕ್ಸ್ ಪೋಸ್ಟರ್ ಗರ್ಲ್ ದೀಪಾ ಕರ್ಮಾಕರ್ ಅವರಿಗೆ ಇಂಟರ್ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ITA), 21 ತಿಂಗಳ ಅವಧಿಗೆ ಅಮಾನತುಗೊಳಿಸಿದೆ.

ಇಂಟರ್ ನ್ಯಾಷನಲ್ ಜಿಮ್ನಾಸ್ಟಿಕ್ಸ್ ಫೆಡರೇಶನ್ (FIG) ಗಾಗಿ ಡೋಪಿಂಗ್ ವಿರೋಧಿ ಪರೀಕ್ಷಾ ಕಾರ್ಯವಿಧಾನಗಳನ್ನು ನಿರ್ವಹಿಸುವ ಸ್ವತಂತ್ರ ಲಾಭೋದ್ದೇಶವಿಲ್ಲದ ಸಂಸ್ಥೆ ಇದಾಗಿದ್ದು ಡೋಪಿಂಗ್ ಆರೋಪದಡಿ ಅವರನ್ನು ಅಮಾನತುಗೊಳಿಸಲಾಗಿದೆ.

ದೀಪಾ ಅವರು ಹೈಜೆನಾಮೈನ್ ಸೇವನೆ ಮಾಡಿದ ಆರೋಪವಿದ್ದು, ಈ ನಿಟ್ಟಿನಲ್ಲಿ ಅವರನ್ನು  ಧನಾತ್ಮಕ ಪರೀಕ್ಷೆಗೆ ಒಳಪಡಿಸಲಾಗಿತ್ತು  ಅವರ ಮಾದರಿಗಳನ್ನು ಸಂಗ್ರಹಿಸಲಾಗಿದೆ ಎಂದು ಐಟಿಎ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ.

“ಎಫ್‌ಐಜಿ ವಿರೋಧಿ ಡೋಪಿಂಗ್ ನಿಯಮಗಳ ಪರಿಚ್ಛೇದ 10.8.2 ರ ಪ್ರಕಾರ ಕೇಸ್ ರೆಸಲ್ಯೂಶನ್ ಒಪ್ಪಂದದ ಮೂಲಕ ಪ್ರಕರಣದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ” ಎಂದು ಐಟಿಎ ಹೇಳಿದೆ.

Home add -Advt

ಯುನೈಟೆಡ್ ಸ್ಟೇಟ್ಸ್ ಆಂಟಿ-ಡೋಪಿಂಗ್ ಏಜೆನ್ಸಿ (ಯುಎಸ್ಎಡಿಎ) ಪ್ರಕಾರ, ಹೈಜೆನಮೈನ್ ಮಿಶ್ರ ಅಡ್ರಿನರ್ಜಿಕ್ ರಿಸೆಪ್ಟರ್ ಸಾಮಾನ್ಯ ಉತ್ತೇಜಕವಾಗಿ ಕಾರ್ಯನಿರ್ವಹಿಸಬಹುದು. ಇದನ್ನು 2017 ರಲ್ಲಿ WADAದ ನಿಷೇಧಿತ ಪದಾರ್ಥಗಳ ಪಟ್ಟಿಗೆ ಸೇರಿಸಲಾಗಿದೆ. ಹಿಜೆನಮೈನ್ ಆಸ್ತಮಾ ವಿರೋಧಿಯಾಗಿ ಕಾರ್ಯನಿರ್ವಹಿಸುತ್ತದೆ. ಇದು ಕಾರ್ಡಿಯೋಟೋನಿಕ್ ಆಗಿರಬಹುದು. ಅಂದರೆ ಇದು  ಹೃದಯದ ಸಂಕೋಚನವನ್ನು ಬಲಪಡಿಸುತ್ತದೆ.

ದೀಪಾ ಅವರ ಮೇಲಿನ ನಿಷೇಧ  ಜುಲೈ 10 ರವರೆಗೆ ಇರುತ್ತದೆ.

20ಕ್ಕೂ ಹೆಚ್ಚು ಕುರಿಗಳ ಸಾವು; ರಾತ್ರಿ ದಾಳಿ ನಡೆಸಿದ್ಯಾರು?

https://pragati.taskdun.com/death-of-more-than-20-sheep-who-attacked-at-night/

ಹುಕ್ಕೇರಿ ಕ್ಷೇತ್ರದಲ್ಲಿ ಈ ಬಾರಿ ಎದುರಾಳಿಗಳ್ಯಾರ್ಯಾರು?

https://pragati.taskdun.com/who-are-the-opponents-this-time-in-hukkeri-constituency/

*60 ದಿನಗಳಲ್ಲಿ ಚುನಾವಣೆ; ಬಿಜೆಪಿ ಭ್ರಷ್ಟಾಚಾರದ ಕಳಂಕ ತೊಡೆದು ಹಾಕಲು ಕಾಂಗ್ರೆಸ್ ಗೆ ಅಧಿಕಾರ ನೀಡಿ; ಡಿ.ಕೆ.ಶಿವಕುಮಾರ್ ಕರೆ*

https://pragati.taskdun.com/kgfprajapratidhwanid-k-shivakumarmla-roopa/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button